ಮಹಿಳೆಯರು ಅಬಲೆಯಲ್ಲ, ಸಬಲೆ ಸಾಬೀತು: ಶ್ರೀನಿವಾಸ

ಕೊಪ್ಪಳ 08: ಮಹಿಳೆಯರು ಅಬಲೆಯಲ್ಲ, ಸಬಲೆ ಎಂದು ತೋರಿಸಿಕೊಟ್ಟಿದ್ದಾರೆ ಎಂದು ಕೊಪ್ಪಳ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಟಿ. ಶ್ರೀನಿವಾಸ ಅವರು ಹೇಳಿದರು.  

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಸವರ್ೊದಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕೊಪ್ಪಳ ಇವರ ಸಹಯೋಗದಲ್ಲಿ "ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ" ಅಂಗವಾಗಿ ಜಿಲ್ಲಾ ನ್ಯಾಯಾಲಯದ ಸಾಕ್ಷೀದಾರರ ಮೊಗಸಾಲೆ ಹಾಲ್ನಲ್ಲಿ ಶುಕ್ರವಾರದಂದು ಏರ್ಪಡಿಸಲಾದ ಮಹಿಳೆಯರಿಗಾಗಿ ವಿಶೇಷ ಕಾನೂನು ಅರಿವು-ನೆರವು ಶಿಬಿರ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.  

ಇಂದಿನ ದಿನಮಾನದಲ್ಲಿ ಮಹಿಳೆಯರು ಎಲ್ಲಾ ರಂಗದಲ್ಲಿ ಮುಂದೆ ಬರುತ್ತಿದ್ದು, ಪ್ರತಿ ವರ್ಷ ಶಿಕ್ಷಣ, ಕ್ರೀಡೆ ಹಾಗೂ ಅನೇಕ ರಂಗಗಳಲ್ಲಿ ಮಹಿಳೆಯರೆ ಮೆಲುಗೈ ಸಾಧಿಸುತ್ತಿದ್ದಾರೆ.  ಮಹಿಳೆ ಅಬಲೆಯಲ್ಲ ಅವಳು ಸಬಲೆ ಎಂದು ಅನೇಕ ಆದರ್ಶ ವ್ಯಕ್ತಿಗಳಾಗಿ ತೋರಿಸಿಕೊಟ್ಟಿದ್ದಾರೆ.  2005ರ ಹಿಂದು ವಾರಸಾ (ತಿದ್ದುಪಡಿ) ಅಧಿನಿಯಮದ ಪ್ರಕಾರ ಮಹಿಳೆಯರು ಪುರುಷರಷ್ಟೆ ಆಸ್ತಿಯಲ್ಲಿ ಸಮಾನ ಹಕ್ಕುದಾರರಾಗಿರುತ್ತಾರೆ.  ಆದರೆ ನ್ಯಾಯಾಲಯಗಳಲ್ಲಿ ಕೌಟುಂಬಿಕ ದೌರ್ಜನ್ಯಗಳ ಪ್ರಕರಣಗಳು ಹಾಗೂ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ಲೈಂಗಿಕ ಕಿರುಕುಳ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಟಿ. ಶ್ರೀನಿವಾಸ ಅವರು ಕಳವಳ ವ್ಯಕ್ತಪಡಿಸಿದರು.   

ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ವಕೀಲರಾದ ಪುಷ್ಪಾ ಅಂಟಿಮಠ ಅವರು ಮಹಿಳೆಯರಿಗೆ ದಿನನಿತ್ಯ ಅವಶ್ಯವಿರುವ ಕಾನೂನುಗಳ ಬಗ್ಗೆ ಮತ್ತು ಮಹಿಳೆಯರ ಆಸ್ತಿ ಹಕ್ಕು, ವರದಕ್ಷಿಣೆ ನಿಷೇದ ಕಾಯಿದೆ, ಬಾಲ್ಯ ವಿವಾಹ ನಿಷೇದ ಕಾಯ್ದೆ, ಜೀವನಾಂಶ ಕಾಯ್ದೆಗಳ ಕುರಿತು ಉಪನ್ಯಾಸ ನೀಡಿದರು.  ಇನ್ನೋರ್ವ ವಕೀಲರಾದ ಉಮಾ ಹಿರೇಮಠ ಅವರು ಮಹಿಳೆಯರಿಗೆ ತಮ್ಮ ಯಾವುದೇ ವೈಯುಕ್ತಿಕ ಕಾನೂನಾತ್ಮಕವಾದ ಸಮಸ್ಯೆ ಸೂಕ್ಷ್ಮವಾಗಿ ತಿಳಿ ಹೇಳಿದರು.   

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವರ್ೊದಯ ಸಮಗ್ರ ಗ್ರಾಮಿಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ನಾಗರಾಜ ದೇಸಾಯಿ ಅವರು ವಹಿಸಿದ್ದರು.  ಮಹಿಳಾ ವಕೀಲರಾದ ಕವಿತಾ, ಅಶ್ವೀನಿ, ಶಾಲಿನಿ, ರೇಣುಕಾ ಸೇರಿದಂತೆ ಸಂಸ್ಥೆಯ ಶಿಬಿರಾಥರ್ಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದರು.