ವಿಶ್ವ ಲಸಿಕಾ ಸಪ್ತಾಹ ಕಾರ್ಯಕ್ರಮಲಸಿಕೆ ಪಡೆಯುವುದು ಪ್ರತಿ ಮಗುವಿನ ಹಕ್ಕು: ಡಾ.ಮಹೇಶ್
ಕೊಪ್ಪಳ 25: ಲಸಿಕೆ ಪಡೆಯುವುದು ಪ್ರತಿಯೊಂದು ಮಗುವಿನ ಹಕ್ಕಾಗಿದ್ದು, ಪಾಲಕರು ತಪ್ಪದೇ ತಮ್ಮ ಮಕ್ಕಳಿಗೆ ಲಸಿಕೆಗಳನ್ನು ಹಾಕಿಸಬೇಕು ಎಂದು ಕೊಪ್ಪಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಹೇಶ್ ಹೇಳಿದರು
ಅವರು ಬುಧವಾರ ಕೊಪ್ಪಳ ನಗರದ 3ನೇ ವಾರ್ಡಿನ ನಿರ್ಮಿತಿ ಕೇಂದ್ರದ ಅಂಗನವಾಡಿ ಕೇಂದ್ರದಲ್ಲಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನಗರ ಆರೋಗ್ಯ ಕೇಂದ್ರ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ “ವಿಶ್ವ ಲಸಿಕಾ ಸಪ್ತಾಹ-2025'' ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರತಿ ವರ್ಷ ಏಪ್ರಿಲ್ 24 ರಿಂದ ಏಪ್ರಿಲ್ 30ರ ವರೆಗೆ ಒಂದು ವಾರಗಳ ಕಾಲ “ವಿಶ್ವ ಲಸಿಕಾ ಸಪ್ತಾಹ” ಕಾರ್ಯಕ್ರಮ ಹಮ್ಮಿಕೊಂಡು ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತದೆ. ಇದರ ಉದ್ದೇಶ ಸಾವ್ರರ್ತಿಕ ಲಸಿಕಾ ಕಾರ್ಯಕ್ರಮದ ಬಗ್ಗೆ ಪಾಲಕರಿಗೆ ಅರಿವು ಮೂಡಿಸಿ, ಸಂಪೂರ್ಣ ಲಸಿಕೆಯನ್ನು ಶಿಶುಗಳಿಗೆ ನೀಡುವುದಾಗಿದೆ. ಶಿಶುಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಶಿಶುಗಳಿಗೆ 12 ಮಾರಕ ರೋಗಗಳು ಬಾರದಂತೆ ಎಲ್ಲಾ ಲಸಿಕೆಗಳನ್ನು ಸರಿಯಾದ ಸಮಯಕ್ಕೆ ಹಾಕಿಸಿ ಶಿಶುಮರಣ ಆಗದಂತೆ ತಡೆಗಟ್ಟಬೇಕು. ಎಲ್ಲರಿಗೂ ರೋಗನಿರೋಧಕ ಶಕ್ತಿ ನೀಡುವುದು ಮಾನವರಿಂದ ಸಾಧ್ಯ” (ಋಟಣಟಿದಚಿಣಠ ಈಠ ಂಟಟ ಊಣಟಚಿಟಿಟಥಿ ಕಛಟಜ) ಎಂಬ ಘೋಷ್ಯವಾಖ್ಯದೊಂದಿಗೆ ಈ ವರ್ಷದ ಕಾರ್ಯಕ್ರವನ್ನು ಆಚರಿಸಲಾಗುತ್ತದೆ ಎಂದರು.
ಗರ್ಭೀಣಿಯರಿಗೆ ಧನುರ್ವಾಯ ವಿರುದ್ಧ ಲಸಿಕೆ ಹಾಕಿಸಬೇಕು. ಶಿಶುಗಳಿಗೆ ಗಂಟಲು ಮಾರಿ, ನಾಯಿಕೆಮ್ಮು, ಧನುರ್ವಾಯ, ಬಾಲಕ್ಷಯ, ಫೋಲಿಯೋ, ಕಾಮಾಲೆ, ನಿಮೋನಿಯಾ, ಧಡಾರ, ರುಬೇಲ್ಲಾ, ರೋಟಾ ವೈರಸ್, ನಿಮೋಕಾಕಲ್ ರೋಗಗಳ ವಿರುದ್ಧ ಕಡ್ಡಾಯವಾಗಿ ಸರಿಯಾದ ಸಮಯಕ್ಕೆ ಪಾಲಕರು ಲಸಿಕೆ ಹಾಕಿಸಬೇಕು ಎಂದು ಹೇಳಿದರು.ಕೊಪ್ಪಳ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ. ಅವರು ಲಸಿಕಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಮಕ್ಕಳು ಈ ದೇಶದ ಸಂಪತ್ತು, ಆ ಮಕ್ಕಳ ಆರೋಗ್ಯ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಮಗುವಿಗೆ ಆರು ತಿಂಗಳ ವರೆಗೆ ಕೇವಲ ತಾಯಿಯ ಎದೆಹಾಲು ಮಾತ್ರ ನೀಡಬೇಕು, ಬೇರೆನೂ ಕೊಡಬಾರದು. ಆರು ತಿಂಗಳ ನಂತರ ಪೂರ ಪೌಷ್ಠಿಕ ಆಹಾರ ನೀಡಬೇಕು. ಪ್ರತಿ ತಿಂಗಳು ಮಗುವಿನ ತೂಕ ಹೆಚ್ಚಾಗಬೇಕು. ಅಂಗನವಾಡಿ ಕೇಂದ್ರದಲ್ಲಿ ಮಗುವಿನ ತೂಕ ಮಾಡಿಸಿ, ಕಡಿಮೆ ತೂಕ ಇದ್ದರೆ, ಸಮೀಪದ ಜಿಲ್ಲಾ ಮಟ್ಟದ ಹಾಗೂ ತಾಲೂಕಾ ಮಟ್ಟದ ಎನ್.ಆರ್.ಸಿ ಕೇಂದ್ರಗಳಿಗೆ ಭೇಟಿ ನೀಡಬೇಕು. ಎನ್.ಆರ್.ಸಿ.ಯಲ್ಲಿ 14 ದಿನಗಳ ವರೆಗೆ ಚಿಕಿತ್ಸೆ ನೀಡುವುದರ ಜೊತೆಗೆ ತಾಯಿಗೆ ಕೂಲಿಯನ್ನು ಅವರ ಖಾತೆಗೆ ಜಮೆ ಮಾಡಲಾಗುವುದು. ಆಶಾ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಮನೆಗೆ ಭೇಟಿ ನೀಡಿ, ಮಕ್ಕಳ ಆರೈಕೆ ಬಗ್ಗೆ ಮಾಹಿತಿ ನೀಡಿದಾಗ ಅದಕ್ಕೆ ಸಹಕರಿಸಿ, ಮಕ್ಕಳ ಬೆಳವಣಿಗೆ ಬಗ್ಗೆ ಗಮನ ಅರಿಸಿ, ಆರೋಗ್ಯವಂತ ಮಕ್ಕಳ ಬೆಳವಣಿಗೆಯ ರಕ್ಷಣೆ ಬಗ್ಗೆ ಮಾಹಿತಿ ಪಡೆದುಕೊಂಡು ಜಾಗೃತರಾಗಬೇಕೆಂದು ತಿಳಿಸಿದರು.ಲಿಂಕ್‌ವರ್ಕರ ಉದಯ ಕುಮಾರ ಅವರು ‘ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ನಿಯಂತ್ರಣ' ಕುರಿತು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕಾಧಿಕಾರಿ ಅನಿತಾ ಅವರು ‘ಕುಟುಂಬ ಕಲ್ಯಾಣ ಕಾರ್ಯಕ್ರಮಗಳ' ಬಗ್ಗೆ ವಿವರವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ನೀರೀಕ್ಷಣಾಧಿಕಾರಿ ವಿಜಯಕುಮಾರ, ಅಂಗನವಾಡಿ ಕಾರ್ಯಕರ್ತೆ ಪ್ರಭಾವತಿ, ಆಶಾ ಕಾರ್ಯಕರ್ತೆಯರಾದ ಪೂರ್ಣಿಮಾ, ಮಂಜುಳಾ ಹಾಗೂ ಗರ್ಭಿಣಿ-ಬಾಣಂತಿಯರು, ತಾಯೆಂದಿರು ಸೇರಿದಂತೆ ಆರೋಗ್ಯ ಇಲಾಖೆಯ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.