ವೀರಭದ್ರೇಶ್ವರ ಜಾತ್ರಾ ಮಹೋತ್ಸವ

ಲೋಕದರ್ಶನ ವರದಿ

ಶಿಗ್ಗಾವಿ15: ಪಟ್ಟಣದ ವೀರಗಲ್ಲಿಯಲ್ಲಿನ ವೀರಭದ್ರೇಶ್ವರ ಜಾತ್ರಾ ಮಹೋತ್ಸವ, ರಥೋತ್ಸವ ಸೇರಿದಂತೆ ವಿವಿಧ ಧಾಮರ್ಿಕ ಕಾರ್ಯಕ್ರಮಗಳು  ಏ.16ರಿಂದ 20ರ ವರೆಗೆ ಗಂಜೀಗಟ್ಟಿ ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ, ವಿರಕ್ತಮಠದ ಸಂಗನಬಸವ ಸ್ವಾಮೀಜಿ  ಸಾನ್ನಿಧ್ಯದಲ್ಲಿ ಭಕ್ತ ಸಮೂಹದಿಂದ ಜರುಗಲಿವೆ.

ಏ.16ರಂದು ಸಂಜೆ 4ಗಂಟೆಗೆ ಕಳಸಾರೋಹಣ, ಗ್ರಾಮ ದೇವತೆಗಳಿಗೆ ಉಂಡಿ ತುಂಬುವುದು. ಏ.19ರಂದು ವೀರಭದ್ರೇಶ್ವರ ಸ್ವಾಮಿಗೆ  ರುದ್ರಾಭಿಷೇಕ, ಅಷ್ಠೋತ್ತರ, ಭಿಲ್ವಾರ್ಚನೆ, ಅಲಂಕಾರ ಪೂಜೆ, ಮಹಾಮಂಗಳರಾತಿ, ನಂತರ ನಾಗನೂರ ಗ್ರಾಮದ ಪುರವಂತರಿಂದ  ಗುಗ್ಗಳ  ಮಹೋತ್ಸವ  ಪಟ್ಟಣದ ಪ್ರಮುಖ ಬೀದಿಯಲ್ಲಿ ವಾದ್ಯ ವೈಭವದೊಂದಿಗೆ ಸಂಚರಿಸಲಿದೆ. ಮಹಾಪ್ರಸಾದ, ಸಂಜೆ 4ಗಂಟೆಗೆ ವೀರಭದ್ರೇಶ್ವರ  ಸ್ವಾಮಿ ರಥೋತ್ಸವ ದೇವಸ್ಥಾನದಿಂದ ದ್ಯಾಮವ್ವದೇವಿ ಪಾದಗಟ್ಟೆ ವರೆಗೆ ಸಂಚರಿಸಲಿದೆ.

ಏ.20ರಂದು  ಸಂಜೆ 5ಗಂಟೆಗೆ  ಕಡುಬಿನ ಕಾಳಗ ನಡೆಯಲಿದೆ.  ನಂತರ ಧರ್ಮ ಸಮಾರಂಭ ಜರುಗಲಿದೆ. ಮುಗಳಿ ಮಲ್ಲಿಕಾಜರ್ುನ ಜಾನಪದ  ಕಲಾಬಳಗದ ಬಸವರಾಜ ಗೊಬ್ಬಿ ಅವರಿಂದ ಜಾನಪದ ಗೀತಗಾಯನ ಕಾರ್ಯಕ್ರಮ ಜರುಗಲಿದೆ ಎಂದು ವೀರಭದ್ರೇಶ್ವರ ದೇವಸ್ಥಾನ ಸೇವಾ  ಸಮಿತಿ ಸದಸ್ಯರು ತಿಳಿಸಿದ್ದಾರೆ.