ವಿಜಯಪುರ : ಉದ್ಯಮಿಯಾಗಿ ಉದ್ಯೋಗ ನೀಡಲು ಯುವಕರು ಸನ್ನದ್ದರಾಗಬೇಕು: ಕಾರ್ಯನಿರ್ವಾಹಕ ಅಧಿಕಾರಿ ವಿಕಾಸ ಹೇಳಿಕೆ

ಲೋಕದರ್ಶನ ವರದಿ

ವಿಜಯಪುರ 09: ನಗರದ ಲೀಡರ್ಸ ಎಕ್ಸಲ್ರೇಟಿಂಗ ಡೆವಲೆಪಮೆಂಟ ಪ್ರೋಗ್ರಾಮ್ ಮತ್ತು ಬಿ.ಎಲ್.ಡಿ.ಈ ಇಂಜನೀಯರಿಂಗ ಮಹಾವಿದ್ಯಾಲಯದ ಸಹಯೋಗದಲ್ಲಿ ಲೀಡ್ ವೆಲಿಡಿಕ್ಟರಿ-2019 ಯುವ ಸಾಧಕರ ಸತ್ಕಾರ ಸಮಾರಂಭವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಕಾಸ ಸುರಳಕರ ಕಾರ್ಯನಿರ್ವಾಹಕ  ಅಧಿಕಾರಿಗಳು ಜಿಲ್ಲಾ ಪಂಚಾಯತ್ ವಿಜಯಪುರ ರವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉಧ್ಘಾಟಿಸಿ ಇಂದಿನ ಯುವ ಪೀಳಿಗೆಯಲ್ಲಿ ವಿಶೇಷ ವಿಶ್ಲೇಷಣಾ ಶಕ್ತಿಯನ್ನು ಹೊಂದಿರುವ ಕಾರಣ ಇತರರಲ್ಲಿ ಉದ್ಯೋಗ ಅರಸುತ್ತಾ ಹೋಗುವ ಬದಲು ಉದ್ಯಮಿಯಾಗಿ ಉದ್ಯೋಗ ನೀಡುವಂತಹ ಕಾರ್ಯಕ್ಕೆ ಮುಂದಾಗಬೇಕೆಂದರು. ಅಭಿಯಾನದಲ್ಲಿ ಅತಿಥಿಯಾಗಿ ಆಗಮಿಸಿದ್ದ ಡಾ.ವಿ.ಪಿ.ಹುಗ್ಗಿ ಮಾತನಾಡಿ ಮೂಲತಃ ಅದೆಷ್ಟೊ ಇಂಜನೀಯರಿಂಗ ವಿದ್ಯಾಥರ್ಿಗಳಾದರು ಸಾಮಾಜಿಕ ಸೇವೆಯಲ್ಲಿ ವಿದ್ಯಾಥರ್ಿಗಳು ತೊಡಗಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು. ವಿಶೇಷ ಉಪನ್ಯಾಸ ನೀಡಲು ಬಂದಿದ್ದ ಡಾ.ಆರ್.ಬಿ.ಬೆಳ್ಳಿ ನೆರೆದಿದ್ದ ಯುವ ಸಮೂಹವನ್ನು ಉದ್ದೇಶಿಸಿ ಮಾತನಾಡಿ ಸಾವಯುವ ಕೃಷಿಯಲ್ಲಿ ಯುವಸಮೂಹದ ಅವಶ್ಯಕತೆಯ ಕುರಿತು ತಿಳಿಸಿಕೊಟ್ಟರು.

ಮತದಾನದ ಜಾಗೃತಿ: ಜಿಲ್ಲಾ ಪಂಚಾಯತ್ ನ ಸಹಯೋಗದಲ್ಲಿ ನಡೆದ ಮತದಾನ ಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಮತದಾನದ ಗುರುತಿನ ಚೀಟಿಯನ್ನು ಹೊಂದಿರುವ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕೆಂದು ತಿಳಿಸಿದರು ಹಾಗೂ ವಿದ್ಯಾಥರ್ಿಗಳಿಗೆ ವಿ.ವಿ,ಪ್ಯಾಟ್ ನ ಕುರಿತು ಪ್ರಾಯೋಗಿಕ ತಿಳುವಳಿಕೆ ನೀಡಲಾಯಿತು.

ಸಾಧಕರಿಗೆ ಪ್ರಶಸ್ತಿ ಪ್ರಧಾನ ಮತ್ತು ಸತ್ಕಾರ್ತ: ಕಳೆದ ಒಂದು ವರ್ಷದಲ್ಲಿ ವಿವಿಧ ಸಾಮಾಜಿಕ ಸಮಸ್ಯಗಳನ್ನು ಆಯ್ಕೆ ಮಾಡಿ ಅವುಗಳಗೆ ಪೂರಕ ಪರಿಹಾರವನ್ನು ಕಂಡುಕೊಂಡು ಸಮಸ್ಯ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ ಸಕರ್ಾರಿ ಶಾಲೆಗಳ ನವೀಕರಣ ಯೋಜನೆಯ ಸಂಜಯಗೌಡ ಪಾಟೀಲ, ಹೃದಯಾಗಾತದ ಕುರಿತು ಪ್ರಥಮ ಚಿಕಿತ್ಸೆಯಲ್ಲಿ ಜಾಗೃತಿ ಮೂಡಿಸಿದ ಪೂಜಾ ಬಿರಾದಾರ, ಸಕರ್ಾರಿ ಶಾಲೆಗಳಲ್ಲಿ ಗ್ರಂಥಾಲಯವನ್ನು ಸ್ಥಾಪಿಸಿದ ಇಂಜನೀಯರಿಂಗ ಮತ್ತು ಎಮ್.ಈ.ಎಸ್ ಐ.ಟಿ.ಐ  ಮಹಾವಿದ್ಯಾಲಯಗಳಿಗೆ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಚನ್ನಮ್ಮ ವಿಶ್ವವಿದ್ಯಾಲಯದ ಡಾ.ವಿ.ಬಿ.ಗ್ರಾಮಪುರೋಹಿತ, ಡಾ. ಮುಂದಿನಮನಿ, ಲೀಡ್ನ ಅಭಿನಂದನ ಕವ್ವಾಳೆ, ಅನೀಷಾ ಕಾಡರ್ೋಜಾ, ಪ್ರಮೋದ ಹುಕ್ಕೆರಿ, ಸಂತೋಷ ಬಿರಾದಾರ, ಗೋವಿಂದ ಮಧಭಾವಿ ನಿಲೀಮಾ ಜಂಗಮ ಹಾಗೂ ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಯ 200 ಕ್ಕೂ ಹೆಚ್ಚು ವಿದ್ಯಾಥರ್ಿಗಳು ಭಾಗವಹಿಸಿದ್ದರು.