“ಶೈಕ್ಷಣಿಕ ಕೌಶಲ್ಯ ಪ್ರದರ್ಶನ”
ಬೆಳಗಾವಿ 01: ನಗರದ ಕರ್ನಾಟಕ ಲಾ ಸೊಸೈಟಿಯ ವಸಂತರಾವ ಪೋತದಾರ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ದಿ. 28 ಮತ್ತು 29 ನೇ ಜನೇವರಿ 2025 ರಂದು ಶೈಕ್ಷಣಿಕ ಕೌಶಲ್ಯ ಪ್ರದರ್ಶನವನ್ನು ಏರಿ್ಡಸಲಾಗಿತ್ತು.
ಕೆ.ಎಲ್.ಎಸ್. ಪ್ರೌಢಶಾಲೆ, ಬಾಲಿಕಾ ಆದರ್ಶ ಪ್ರೌಢಶಾಲೆ, ಕೆ.ಎಲ್.ಎಸ್. ಪಬ್ಲಿಕ್ ಪ್ರೌಢಶಾಲೆ, ಎಂ.ವ್ಹಿ. ಹೆರವಾಡಕರ ಪ್ರೌಢಶಾಲೆ, ಜಿ.ಜಿ. ಚಿಟ್ನಿಸ್ ಶಾಲೆ ಮತ್ತು ಸರಸ್ವತಿ ಸರ್ಕಾರಿ ಪ್ರೌಢಶಾಲೆಯಿಂದ ಸುಮಾರು 600 ವಿದ್ಯಾರ್ಥಿಗಳು ಭಾಗಿಯಾಗಿ ಕುತೂಹಲದಿಂದ ಪ್ರದರ್ಶನವನ್ನು ವಿಕ್ಷೀಸಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡರು.
ಈ ಪ್ರದರ್ಶನವು ವಿದ್ಯಾರ್ಥಿಗಳ ಜ್ಞಾನ, ಕೌಶಲ್ಯ ಮತ್ತು ಕಲಿಕಾ ಮಟ್ಟವನ್ನು ಹೆಚ್ಚಿಸಲು ಆಯೋಜಿಸಲಾಗಿತ್ತು. ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಯು.ಎನ್. ಕಾಲ ಕುಂದ್ರ್ರಿಕರರವರು ಮತ್ತು ಸದಸ್ಯರು, ಪ್ರಾಚಾರ್ಯರಾದ ಎಸ್.ಎಸ್. ಮಲಾಜ್ ಹಾಗೂ ಸಿಬ್ಬಂದಿವರ್ಗದವರು ವಿದ್ಯಾರ್ಥಿಗಳ ಕೌಶಲ್ಯವನ್ನು ಪ್ರಶಂಸಿ ಶುಭ ಹಾರೈಸಿದರು.