“ಅಪೂರ್ವ ಮಿಲನ-2024 ” ಅದ್ದೂರಿ ಕಾರ್ಯಕ್ರಮ ಒಂದು ಉತ್ತಮ ಶಿಕ್ಷಣ ಸಂಸ್ಥೆ ಶ್ರೇಷ್ಠ ಶಿಕ್ಷಕರು ಉತ್ತಮ ವಿದ್ಯಾರ್ಥಿಗಳನ್ನು ಸಮಾಜವನ್ನು ರೂಪಿಸುತ್ತದೆ
ಬಳ್ಳಾರಿ 28: ಕರ್ನಾಟಕ ರಾಜ್ಯದ ಗಡಿನಾಡಿನಲ್ಲಿ ಸತತವಾಗಿ ನಾಲ್ಕು ದಶಕಗಳಿಂದ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿತ್ತಿರುವ, ರಾವ್ ಬಹದ್ದೂರ್ ವೈ ಮಹಾಬಲೇಶ್ವರ್ಪ ತಾಂತ್ರಿಕ ಮಹಾವಿದ್ಯಾಲಯ (ಪೂರ್ವದಲ್ಲಿ ವಿಜಯನಗರ ತಾಂತ್ರಿಕ ಮಹಾವಿದ್ಯಾಲಯ), ಬಳ್ಳಾರಿ ಕಾಲೇಜಿನ ಆವರಣದಲ್ಲಿ “ಅಪೂರ್ವ ಮಿಲನ-2024 ” ಅದ್ದೂರಿ ಕಾರ್ಯಕ್ರಮವು ಜರುಗಿತು.
ಈ ಕಾರ್ಯಕ್ರಮವು ಕಾಲೇಜಿನ ಹಳೇ ವಿದ್ಯಾರ್ಥಿಗಳನ್ನು ಗುರುತಿಸಿ, ಗೌರವಿಸಿ, ಅವರೊಂದಿಗೆ ಕೆಲ ಸಮಯ ಕಳೆದು, ಸದ್ಯದ ತಾಂತ್ರಿಕ ಯುಗದಲ್ಲಿ, ಒಬ್ಬ ತಾಂತ್ರಿಕ ವಿದ್ಯಾರ್ಥಿಗೆ ಬೇಕಾಗಿರುವ ಪ್ರವೀಣತೆ, ನೈಪುಣ್ಯತೆಯನ್ನು ಕುರಿತು ಚರ್ಚಿಸಿದರು. ಈ ಕಾಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಅಲ್ಲಂ ಗುರುಬಸವರಾಜ, ಉಪಾಧ್ಯಕ್ಷರು ಹಾಗೂ ಮಹಾವಿದ್ಯಾಲಯದ ಅಧ್ಯಕ್ಷರು ಜಾನೇಕುಂಟೆ ಬಸವರಾಜ, ಕಾರ್ಯದರ್ಶಿಗಳು ಡಾ.ಅರವಿಂದ್ ಪಟೇಲ್, ಗೌರವನ್ವಿತ ಅಥಿತಿಗಗಳು ಹಾಗೂ ಮಹಾವಿದ್ಯಾಲಯದ ಹಳೇ ವಿದ್ಯಾರ್ಥಿಗಳು ಕೂನ ರವಿಕುಮಾರ (ಎಂ.ಎಲ್.ಎ), ಕಂದುಲ ನಾರಾಯಣ ರೆಡ್ಡಿ ( ಎಂ.ಎಲ್.ಎ), ಮುಲ್ಲಂಗಿ ನಂದೀಶ್(ಬಳ್ಳಾರಿನಗರದ ಮೇಯರ್) ಡಾ.ಎಸ್.ಪಿ.ಮಲ್ಲೂರ್, ಸೂರ ಶೇಖರ ರೆಡ್ಡಿ , ತಿರುಪತಿ ನಾಯ್ಡು, ಸುರೇಶ್ ಬಾಬು, ಸಂಜೀವ ಪ್ರಸಾದ್, ಕೊರ್ಲಗುಂದಿ ಬಸವನಗೌಡ, ಈ ಮಹಾನ್ ಸಂಸ್ಥೆಯ ನಿವೃತ್ತ ಪ್ರೋಫೆಸರುಗಳು ಭೂಪಾಲ ರೆಡ್ಡಿ , ಮಂಟಿಗೇರಿ, ಡಾ. ಕೆ.ವೀರೇಶ್ ಡಾ.ಸಿ.ಬಿ.ಶ್ರೀನಿವಾಸರೆಡ್ಡಿ, ಎಂ.ಆರ್.ವಿಜಯಕುಮಾರ್ ಹಾಗೂ ಇತರ ಗಣ್ಯರು ವೀ.ವಿ.ಸಂಘದಕಾರ್ಯಕಾರಿ ಮಂಡಳಿಯ ಸದಸ್ಯರು ದರೂರು ಶಾಂತನಗೌಡ, ಕಾತ್ಯಾಯನಿ ಮರಿದೇವಯ್ಯ, ಇನ್ನಿತರರುಭಾಗವಹಿಸಿ, ಮಾತನಾಡುತ್ತ “ವೀರಶೈವ ವಿಧ್ಯಾವರ್ಧಕ ಸಂಘದ ಹಲವಾರು ವಿದ್ಯಾ ಸಂಸ್ಥೆಗಳು ಕರ್ನಾಟಕ ರಾಜ್ಯದ ಹಿಂದುಳಿದ ಪ್ರದೇಶದಲ್ಲಿ ವಿದ್ಯಾಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವಾಗಿದೆ, ಈ ಕಾಲೇಜಿನ ಪದವಿಧರರಾದ ವಿಧ್ಯಾಥಿಗಳು ಹೆಸರಾಂತ ಕಂಪನಿಗಳಲ್ಲಿ ಉನ್ನತ ಸ್ಥಾನಗಳಲ್ಲಿರುವುದು” ನೆನಪಿಸಿಕೊಂಡರು. ಕಾಲೇಜಿನ ಬೆಳವಣಿಗೆ ವಿಷಯವಾಗಿ ಕೆಲವೊಂದು ಸಲಹೆಗಳನ್ನು ನೀಡಿದರು. ಹಲವಾರು ಹಳೇ ವಿದ್ಯಾರ್ಥಿಗಳು ಈ ವೇದಿಕೆಯಲ್ಲಿ ಹಲವಾರು ವಿಷಯಗಳನ್ನು ಹಂಚಿಕೊಂಡರು.
ಮಹಾವಿದ್ಯಾಲಯದ ಹಳೇ ವಿದ್ಯಾರ್ಥಿಗಳು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ “ ಈ ಮಹಾನ್ ಸಂಸ್ಥೆ ಹಿಂದೆ ವಿಜಯನಗರ ಎಂಜಿನಿಯರಿಂಗ್ ಕಾಲೇಜು, ಈಗ ರಾವ್ ಬಹದ್ದೂರ್ ವೈ ಮಹಾಬಲೇಶ್ವರ್ಪ ತಾಂತ್ರಿಕ ಮಹಾವಿದ್ಯಾಲಯ (ಆರ್.ವೈ.ಎಂ.ಇ.ಸಿ) ಎಂದು ಮರುನಾಮಕರಣಗೊಂಡಿದೆ ಮತ್ತು ಈ ಸ್ಥಳದ ಮಣ್ಣುನಲ್ಲಿ ತಂತ್ರಜ್ಞಾನದಲ್ಲಿ ಉನ್ನತ ಮಟ್ಟದ ಬುದ್ಧಿಜೀವಿ ವಿದ್ಯಾರ್ಥಿಗಳನ್ನು ಸೃಷ್ಟಿಸುವ ಮತ್ತು ರೂಪಿಸುವ ಸಾಮರ್ಥ್ಯವನ್ನು ಹೊಂದಿದೆ. ಹಿಂದಿನ ದಶಕಗಳಲ್ಲಿ ಮತ್ತು ಇಂದಿಗೂ ಸಹ ನಾಯಕತ್ವದ ಗುಣಗಳನ್ನು ಸೃಷ್ಟಿಸುವ ಮತ್ತು ರೂಪಿಸುವ ಸಾಮರ್ಥ್ಯವನ್ನು ಹೊಂದಿದೆ. ಅದಕ್ಕಾಗಿಯೇ ನಾವು ಸಮಾಜದ ಈ ಉನ್ನತ ಸ್ಥಾನಗಳಲ್ಲಿದ್ದೇವೆ, ನಮಗೆ ಒದಗಿಸಲಾದ ಶಿಕ್ಷಣವನ್ನು ನಾವು ಎಂದಿಗೂ ಮರೆಯುವುದಿಲ್ಲ ಮತ್ತು ನಾವು ನಮ್ಮ ಶಿಕ್ಷಕರು ಮತ್ತು ಪ್ರಾಧ್ಯಾಪಕರಿಗೆ ಜೀವಮಾನವೀಡೀ ಕೃತಜ್ಞರಾಗಿರುತ್ತೇವೆ. ದಶಕಗಳ ನಂತರ ನಾವು ನಮ್ಮ ಹಿಂದಿನ ವಿದ್ಯಾರ್ಥಿ ಜೀವನವನ್ನು ಸ್ಮರಿಸಲು ಇಲ್ಲಿ ಒಟ್ಟುಗೂಡಿರುವುದು ಸಂತೋಷದ ಸಂದರ್ಭ, ನಮ್ಮ ಸ್ನೇಹ ದೀರ್ಘಕಾಲ ಬದುಕಲಿ.” ಎನ್ನುತ್ತಾ ಹಲವಾರು ವಿಷಯಗಳನ್ನು ಹಂಚಿಕೊಂಡರು ಮಹಾವಿದ್ಯಾಲಯಕ್ಕೆ ಸಮಾಜದ ಸವಾಲಿನ ಸನ್ನಿವೇಶಗಳಿಗೆ, ಸಂಸ್ಥೆಯ ಭವಿಷ್ಯದ ಬೆಳವಣಿಗೆಗೆ, ಅವರು ಅಮೂಲ್ಯವಾದ ಸಲಹೆಗಳನ್ನು ಸೇರಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಫ್ರೊಫೆಸರುಗಳು ಹಳೇ ವಿದ್ಯಾರ್ಥಿಗಳು ಉದ್ದೇಶಿಸಿ ಮಾತನಾಡುತ್ತ “ಒಂದು ಉತ್ತಮ ಶಿಕ್ಷಣ ಸಂಸ್ಥೆಯ ಒಳಗೊಳ್ಳುವಿಕೆಯಿಂದ, ಶ್ರೇಷ್ಠ ಶಿಕ್ಷಕರು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುತ್ತಾರೆ, ಮತ್ತು ಪ್ರತಿಯಾಗಿ ಶ್ರೇಷ್ಠ ವಿದ್ಯಾರ್ಥಿಗಳು ಉತ್ತಮ ಸಮಾಜವನ್ನು ರೂಪಿಸುತ್ತಾರೆ, ಜೀವನದುದ್ದಕ್ಕೂ ಇತ್ತೀಚಿನ ಬೆಳವಣಿಗೆಗಳೊಂದಿಗೆ ಕಲಿಯುವುದು ಮತ್ತು ನವೀಕರಿಸುವುದು ನಿಮ್ಮ ಕರ್ತವ್ಯವಾಗಿದೆ, ಅವಕಾಶಗಳು ಸಾಕಷ್ಟು ಇವೆ, 80ರ ವಯಸ್ಸಿನಲ್ಲೂ ನಾವು ಇಂದಿನ ಆಧುನಿಕ ಸಮಾಜದಲ್ಲಿ ನಮ್ಮನ್ನು ನಾವು ನವೀಕರಿಸುತ್ತಿದ್ದೇವೆ, ಇಲ್ಲಿರುವ ಪ್ರತಿಯೊಬ್ಬ ಹಳೆಯ ವಿದ್ಯಾರ್ಥಿಗಳಿಗೆ ಮತ್ತು ಆನ್‌ಲೈನ್ ಮೋಡ್‌ನಲ್ಲಿ ಸಂಪರ್ಕ ಹೊಂದಿದವರಿಗೆ ಇದು ನಮ್ಮ ಪ್ರಾಮಾಣಿಕ ಸಲಹೆ ಮತ್ತು ಸಂದೇಶವಾಗಿದೆ, ಜಗತ್ತಿನ ಅಭಿವೃದ್ಧಿಯಲ್ಲಿ ಯಾವುದೇ ಹೊಸ ಸವಾಲನ್ನು ಎದುರಿಸಲು ಯಾವಗಲು ಸುಸಜ್ಜಿತವಾಗಿರಬೇಕು, ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕುಳಿಯುವುದು ಅತ್ಯುತ್ತಮ ಜೀವಿ ಮಾತ್ರವಾಗಿದೆ ಎಂಬುವುದು ನೆನಪಿನಲ್ಲಿರಲಿ” ಎನ್ನುತ್ತಾ ಹಲವಾರು ಸೂಚನೆಗಳನ್ನು ನೀಡಿದರು.
ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಮಹಾವಿದ್ಯಾಲಯದ ಅಧ್ಯಕ್ಷರು, ಕಾರ್ಯದರ್ಶಿಗಳು ಮಾತನಾಡುತ್ತ “ಇದೊಂದು ಶುಭದಿನ, ನಮ್ಮ ಮಹಾವಿದ್ಯಾಲಯದಿಂದ ಉತ್ತೀರ್ಣರಾಗಿ, ಹೆಸರಾಂತ ಉದ್ಯಮಿಗಳಾಗಿ, ಸಮಾಜಕ್ಕೆ ಸೇವೆಸಲ್ಲಿಸುತ್ತಿರುವ ನಮ್ಮ ಹಳೇ ವಿದ್ಯಾಥಿಗಳನ್ನು ನೋಡಿ ತುಂಬಾ ಸಂತೋಷವಾಗುತ್ತದೆ ಮತ್ತು ಇನ್ನೂ ಸಂಸ್ಥೆಯ ಅಭಿವೃದ್ದಿ ಪಡಿಸುವದಕ್ಕೆ ನೀಡಿರುವ ಸೊಚನೆ ಮತ್ತು ಸಲಹೆಗಳ ಬಗ್ಗೆ ಗಮನಹರಿಸುತ್ತೇವೆ ವೀ.ವಿ.ಸಂಘದ ಅದ್ಯಕ್ಷತೆಯಲ್ಲಿ 40 ವಿದ್ಯಾಸಂಸ್ಥೆಗಳು ನಮ್ಮ ಬಳ್ಳಾರಿ ನಗರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಅಪಾರ ಸೇವೆ ಸಲ್ಲಿಸಿತ್ತುವುದಕ್ಕೆ ಆ ಸಂಸ್ಥೆಗಳ ಹಳೇ ವಿದ್ಯಾರ್ಥಿಗಳ ಸಹಕಾರ, ಸೂಚನೆ ಸಲಹೆಗಳು ಕಾರಣವಾಗಿವೆ ಮತ್ತು ವಿದ್ಯಾಸಂಸ್ಥೆಗಳ ಅಭಿವೃದ್ದಿಗೆ ಆಡಳಿತಮಂಡಳಿಯು ಯಾವಗಲು ಪ್ರೋತ್ಸಹ ನೀಡುತ್ತದೆಂದು”ಹೇಳಿದರು. ಮಹಾವಿದ್ಯಾಲಯದ ಹಳೇ ವಿದ್ಯಾರ್ಥಿಗಳ ಅಸೋಸಿಯೆಶನ್ ಪದಾದಕಾರಿಗಳಾದ ಉಪಾಧ್ಯಕ್ಷರು ಡಾ. ಚಿತ್ರಿಕಿ ತೋಟಪ್ಪ, ರವರು ಅಸೋಸಿಯೆಶನ್‌ನಿನ ಚಟುವಟಿಕೆಗಳನ್ನು ಸಭೆಯಲ್ಲಿ ಮಾತನಾಡಿದರು. ಆರಂಭದಲ್ಲಿ ಟಿ. ಹನುಮಂತರೆಡ್ಡಿ ಎಲ್ಲರನ್ನೂ ಸ್ವಾಗತಿಸಿದರು, ವಾಣಿ ಹಿರೇಗೌಡರು,ಸೌಮ್ಯ ನಿರೂಪಿಸಿದರು ಡಾ. ಸವಿತಾ ಸೋನೋಳಿ ವಂದಿಸಿದರು, ಈ ಕಾರ್ಯಕ್ರಮಕ್ಕೆ ಆಗಮಿಸಿರುವ ಸೂಮಾರು ಆಡಳಿತಮಂಡಳಿ ತುಂಬು ಹೃದಯದಿಂದ ಸ್ವಾಗತಿಸಿದರು ಹಾಗೂ ಅವರನ್ನು ಗೌರವಿಸಿ, ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆಯನ್ನು ಶ್ಲಾಘಿಸಿದರು ಹಾಗೂ ಅನೇಕ ಮನರಂಜನೆ ಕಾರ್ಯಕ್ರಮಗಳನ್ನು ಎರಿ್ಡಸಿದ್ದರು. ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು-ಅಧ್ಯಕ್ಷ ಡಾ.ಟಿ.ಹನುಮಂತ ರೆಡ್ಡಿ, ಉಪಾಧ್ಯಕ್ಷರು ಡಾ. ಚಿತ್ರಿಕಿ ತೋಟಪ್ಪ, ಡಾ.ಯಡವಳ್ಳಿ ಬಸವರಾಜ, ಕೆ.ಬಿ ಸಂಜೀವ್ ಪ್ರಸಾದ್, ಶಿವಪ್ರಕಾಶ ವಸ್ತ್ರದ್, ಕಾರ್ಯದರ್ಶಿ ಡಾ.ಶಿವ ಪ್ರಸಾದ್ ಕೆ.ಎಂ, ಸಹಾಯಕ ಕಾರ್ಯದರ್ಶಿ ಪವನ್ ಕುಮಾರ್.ಎಂ,ಖಜಾಂಚಿ ಶರಣ ಬಸವರಾಜ.ಬಿ,ಎಲ್ಲಾ ವಿಭಾಗಗಳ ಮುಖ್ಯಸ್ಥರು, ಮಹಾವಿದ್ಯಾಲಯದಶಿಕ್ಷಕವೃಂದದವರು, ವಿದ್ಯಾರ್ಥಿವೃಂದದವರು ಭಾಗವಹಿಸಿದ್ದರು.ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಅಲ್ಲಂ ಗುರುಬಸವರಾಜ, ಉಪಾಧ್ಯಕ್ಷರು ಹಾಗೂ ಮಹಾವಿದ್ಯಾಲಯದ ಅಧ್ಯಕ್ಷರು ಜಾನೇಕುಂಟೆ ಬಸವರಾಜ, ಕಾರ್ಯದರ್ಶಿಗಳು ಡಾ.ಅರವಿಂದ್ ಪಟೇಲ್, ಸಹ ಕಾರ್ಯದರ್ಶಿಗಳು ಯಾಳ್ಪಿ ಮೇಟಿ ಪಂಪನಗೌಡ, ಕೋಶಾಧಿಕಾರಿಗಳು ಬೈಲುವದ್ದಿಗೇರಿಎರಿ್ರಸ್ವಾಮಿ, ಆಡಳಿತ ಮಂಡಳಿಯ ಸದಸ್ಯರು ಬಾಡದ ಪ್ರಕಾಶ್, ಪ್ರಭು ಸ್ವಾಮಿ ಎಸ್.ಎಂ ಶುಭಹಾರೈಸಿದರು ಈ ಶುಭ ಕಾರ್ಯಕ್ರಮದಲ್ಲಿ ಭಾಗವಹಿಸಿದರು.