“ರಕ್ತದಾನ ಜೀವಗಳಿಗೆ ವರದಾನ”
ಗದಗ 02: ನಗರದ ಪ್ರತಿಷ್ಠಿತ ಕೆ. ಎಲ್. ಇ. ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ದಿನಾಂಕ: 02ಯಿ-01-2025 ಗುರುವಾರದಂದು ಎನ್.ಎಸ್.ಎಸ್ ಮತ್ತು ವಾಯ್.ಆರ್.ಸಿ ಘಟಕಗಳ ಸಂಯೋಗದೊಂದಿಗೆ ಆಯ್.ಎಂ.ಎ. ಬ್ಲಡ್ ಬ್ಯಾಂಕ ಗದಗ ಇವರ ಜೊತೆಗೂಡಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಈ ರಕ್ತದಾನ ಶಿಬಿರದಲ್ಲಿ ಡಾಽಽ. ಆರ.ಟಿ. ಪವಾಡ ಶೆಟ್ಟರ, ಮೆಡಿಕಲ್ ಆಫೀಸರ ಆಯ್.ಎಂ.ಎ. ಬ್ಲಡ ಬ್ಯಾಂಕ ಇವರು ಉಪಸ್ಥಿತರಿದ್ದರು ಮತ್ತು ಕಾಲೇಜಿನ ಪ್ರಾಚಾರ್ಯರಾದ ಡಾ. ಎ. ಕೆ. ಮಠ ರವರು ಮಾತನಾಡಿ ರಕ್ತದಾನ ಉತ್ತಮವಾದ್ದದು, ರಕ್ತದಾನ ಮಾಡುವದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ, ಹಾಗೂ ರಕ್ತದಾನದಿಂದ ಹಲವು ಜೀವಗಳು ಉಳಿಯುತ್ತವೆ. ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಘಟಕದಿಂದ ಆಯೋಜಿಸಲಾದ ಪ್ರಬಂಧ ಸ್ಪರ್ಧೆಗೆ ಬಹುಮಾನವನ್ನು ನೀಡಲಾಯಿತು. ಪ್ರಥಮ ಸ್ಥಾನ ಕುಮಾರಿ. ಸಹನಾ ನಾಲ್ವಾಡದ, ದ್ವಿತೀಯ ಸ್ಥಾನ ಕುಮಾರ. ರುದ್ರಗೌಡ ಹೀರೆಗೌಡರ, ತೃತೀಯ ಸ್ಥಾನ ಕುಮಾರಿ. ಅಂಜಲಿ ದಹಿಂಡೆ ಪ್ರಶಸ್ತಿ ಸ್ವೀಕರಿಸಿದರು. ನಂತರ ರಕ್ತದಾನದಲ್ಲಿ ಒಟ್ಟು 24 ರಕ್ತದ ಯುನಿಟ್‌ಗಳನ್ನು ಸಂಗ್ರಹಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾಽಽ ಎ.ಕೆ ಮಠ, ಎನ್.ಎಸ್.ಎಸ್ ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೋ. ವಾಗೀಶ ಗು. ರೇಶ್ಮಿ, ಎನ್.ಎಸ್.ಎಸ್ ಸಹಕಾರ್ಯಕ್ರಮಾಧಿಕಾರಿಗಳಾದ ಪ್ರೋ. ವೀರಣ್ಣ ಬಡಿಗೇರ, ಆಯ್.ಎಂ.ಎ. ಬ್ಲಡ್ ಬ್ಯಾಂಕ ವತಿಯಿಂದ ಅನೀಲ ಭಜಂತ್ರಿ. ಇಸ್ಮಾಯಿಲ್ ಚಿಲಕವಾಡ, ಕಿರಣ ಬೊರಕರ, ಅಕ್ಷತಾ ಅಣ್ಣಿಗೇರಿ, ರಾಘವೇಂದ್ರ ಹೊಸಳ್ಳಿ ಜೊತೆಗೆ ಈ ರಕ್ತದಾನ ಶಿಬಿರವನ್ನು ಮುನ್ನೆಡೆಸಿದ ಎನ್.ಎಸ್.ಎಸ್ ಘಟಕದ ತಂಡ 03 ರ ನಾಯಕರಾದ ಕುಮಾರಿ. ಮೇಘಾ ಮುದ್ದಿ ಮತ್ತು ಕುಮಾರ. ಮಂಜುನಾಥ ಗಾಣಿಗೇರ ಹಾಗೂ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.