14ರಂದು ಲಿಂಗಾಯತ, ಜಂಗಮ ವಧು ವರರ ಬೃಹತ್ ಸಮಾವೇಶ

ಲೋಕದರ್ಶನ ವರದಿ

ಗದಗ 10:  ಗದಗದಲ್ಲಿ ವೀರಶೈವ ಲಿಂಗಾಯತ ಮತ್ತು ಜಂಗಮ ವಧು ವರರ ಬೃಹತ್ ಸಮಾವೇಶವನ್ನು 25 ವರ್ಷದಿಂದ ರಾಜ್ಯದಲ್ಲಿ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದು ಈ ಸಲವು ಗದಗ ನಗರದ ಚೇಂಬರ್ ಆಫ್ ಕಾಮಸರ್್ ಎಪಿಎಮ್ಸಿ ಹಾಲ ಗದಗದಲ್ಲಿ ದಿ. 14ರಂದು ಮುಂಜಾನೆ 11.00ರಿಂದ ಮಧ್ಯಾಹ್ನ 03.00 ಘಂಟೆಗಳ ವರೆಗೆ ವಧು ವರರ ಅನ್ವೇಷಣೆ ಇರುವುದು ಎಂದು ಅಧ್ಯಕ್ಷರು ಆದ  ರವಿ ಹಂದಿಗೋಳ ತಿಳಿಸಿದರು. 

ಈ ಸಮಾವೇಶದಲ್ಲಿ ವಧು ವರರನ್ನು ಪರಸ್ಪರ ಪರಿಚಯಿಸಲಾಗುವುದು, ಅಪೇಕ್ಷೆ ಹೊಂದಿದ ವಧು ವರರು ಹಾಗೂ ಪಾಲಕರನ್ನು ಸ್ಥಳದಲ್ಲಿಯೇ ಮಾತುಕತೆಗೆ ಅವಕಾಶ ಕಲ್ಪಿಸಲಾಗುವುದು, ಹಾಗೂ ಸಮಾವೇಶದಲ್ಲಿ ಭಾಗವಹಿಸಿ ಸದಸ್ಯತ್ವ ಪಡೆದವರಿಗೆ ಮದುವೆ ನಿಶ್ಚಯದವರೆಗೆ ಮಾಹಿತಿ ಹಾಗೂ ಪರಸ್ಪರ ತೋರಿಸುವ ಸೇವೆ ನೀಡಲಾಗುವುದು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕೋರಿದರು.ಈ ಸಮಾವೇಶದಲ್ಲಿ ಬರುವ ವಧು ವರರು 2 ಭಾವಚಿತ್ರ (ಪೋಟೋ) ಮತ್ತು ಜಾತಕದೊಂದಿಗೆ ಭಾಗವಹಿಸಬಹುದು ವಿಧವೆ, ವಿಧುರ, ಮರು ವಿವಾಹ ಆಗಬಯಸುವವರು ಅಂಗವಿಕಲರು, ಪಾಲಕರು ಸಹ ಭಾಗವಹಿಸಬಹುದು ಎಂದು ತಿಳಿಸಿದರು.ಪತ್ರಿಕಾ ಗೋಷ್ಠಿಯಲ್ಲಿ ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್ ನ ಅದ್ಯಕ್ಷರಾದ ರವಿ ಹಂದಿಗೋಳ, ಕಾರ್ಯದಶರ್ಿಗಳು ಶಕುಂತಲಾ ನಂದಿಮಠ, ಮತ್ತು ಕನರ್ಾಟಕ ವೀರಶೈವ ವಧು ವರರ ಅಧ್ಯಕ್ಷರು ಆದ ಶಿವಕುಮಾರ ಹಿರೇಮಠ ಹಾಗೂ ಪ್ರಕಾಶ ಅಂಗಡಿ ಭಾಗಿಯಾಗಿದ್ದರು.