ವೀರಶೈವ ವಿದ್ಯಾವರ್ಧಕ ಸಂಘದಿಂದ 15ಲಕ್ಷ ರೂ.ದೇಣಿಗೆ

ಬಳ್ಳಾರಿ, ಏ.08: ಕೋವಿಡ್-19 ಎಂಬ ವೈರಾಣು ರಾಜ್ಯದೆಲ್ಲಡೆ ಹರಡುತ್ತಿರುವ ಹಿನ್ನಲೆ ಸಾಂಕ್ರಾಮಿಕ ರೋಗಕ್ಕೆ ಕನರ್ಾಟಕ ರಾಜ್ಯ ಸಕರ್ಾರ ರೋಗವನ್ನು ತಡೆಗಟ್ಟಲು ಯುದ್ಧೋಪಾದಿಯಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಸರಕಾರದ ಹೋರಾಟಕ್ಕೆ ವೀರಶೈವ ವಿದ್ಯಾವರ್ಧಕ ಸಂಘದ ವತಿಯಿಂದ 15ಲಕ್ಷ ರೂ.ಗಳ ದೇಣಿಗೆಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದೆ. ಈ ಮೂಲಕ ಸಂಘವು ಸರಕಾರ ನಡೆಸುತ್ತಿರುವ ಹೋರಾಟಕ್ಕೆ ಕೈಜೋಡಿಸಿದೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ವಿದ್ಯಾವರ್ಧಕ ಸಂಘದ ಕಾರ್ಯದಶರ್ಿ ಚೋರನೂರು ಕೊಟ್ರಪ್ಪ ನೇತೃತ್ವದಲ್ಲಿ ಸಂಘದ ಮುಖಂಡರು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಮುಖಾಂತರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 15ಲಕ್ಷ ರೂ.ಮೊತ್ತದ ಚೆಕ್ನ್ನು ಹಸ್ತಾಂತರಿಸಿದರು.

  ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಹಾಗೂ ಅಜೀವ ಸದಸ್ಯರು ತೀಮರ್ಾನಿಸಿ ಕೋವಿಡ್-19 ವಿಷಯದಲ್ಲಿ ಸರಕಾರಕ್ಕೆ ನೆರವು ನೀಡಲು ಮುಂದೆ ಬರಲಾಗಿದೆ. ಜಿಲ್ಲೆಯಲ್ಲಿ ಕೊರೊನಾ ಸೊಂಕು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಳ್ಳುತ್ತಿರುವ ಕ್ರಮಗಳನ್ನು ಸಂಘವು ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ ಎಂದು ಸಂಘದ ಕಾರ್ಯದಶರ್ಿ ಚೋರನೂರು ಕೊಟ್ರಪ್ಪ ತಿಳಿಸಿದರು.

  ಈ ದೇಣಿಗೆಯನ್ನು ಕನರ್ಾಟಕ ಗ್ರಾಮೀಣ ಬ್ಯಾಂಕ್, ಆರ್.ವೈ.ಎಂ.ಸಿ. ಬ್ರಾಂಚ್, ಬಳ್ಳಾರಿ, ಇದರ ಚೆಕ್ ಸಂಖ್ಯೆ: 132319, ದಿನಾಂಕ:31.03.2020 ವನ್ನು ಸಂಘವು ತಮ್ಮ ಮೂಲಕ ಸಲ್ಲಿಸಿ ಚೆಕ್ಕನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಮಪರ್ಿಸಲು ವಿನಂತಿಸಲಾಗಿದೆ. ವೀರಶೈವ ವಿದ್ಯಾವರ್ಧಕ ಸಂಘದ ಖಜಾಂಚಿ ಕೋಳೂರು ಮಲ್ಲಿಕಾಜರ್ುನಗೌಡ, ಸಹ ಕಾರ್ಯದಶರ್ಿ ಕೆ.ವಿರೇಶಗೌಡ, ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ರಾಮನಗೌಡ, ಗೋನಾಳ ರಾಜಶೇಖರಗೌಡ, ಎಂ.ಶರಣ ಬಸವನಗೌಡ ಸೇರಿದಂತೆ ಇತರರು ಇದ್ದರು.