ಭಕ್ತಿ ಪೂರ್ವಕವಾಗಿ ಜರುಗಿದ ಗುರುಸಿದ್ದ ಗಳ 31ನೇಪುಣ್ಯಸ್ಮರಣೋತ್ಸವ

31st Gurusiddhas' Commemoration Ceremony Celebrated Devotively

ಭಕ್ತಿ ಪೂರ್ವಕವಾಗಿ ಜರುಗಿದ ಗುರುಸಿದ್ದ ಗಳ 31ನೇಪುಣ್ಯಸ್ಮರಣೋತ್ಸವ 

ಯಮಕನಮರಡಿ   8  :ಸ್ಥಳೀಯ ಹುಣಸಿಕೋಳ್ಳಮಠದ ಲಿಂಗೈಕ್ಯ ಗುರಿಸಿದ್ದಮಹಾಸ್ವಾಮಿಗಳ 31ನೇ ಪುಣ್ಯ ಸ್ಮರಣೋತ್ಸವ ಸಮಾರಂಭವು ದಿ 8 ರಂದು ಭಕ್ತಿಪೂರ್ವಕವಾಗಿ ಜರುಗಿತು. ಮುಂಜಾನೆ ಸಟತ್ತಳ ದ್ವಜಾರೋಹಣ ಲೀಮಗೈಕ್ಯ ಗುರುಸಿದ್ದಮಹಾಸ್ವಾಮಿಗಳ ಕರ್ತೃರ ಗದ್ದುಗೆಗೆ ಹಾಗೂ ಸಿದ್ದಬಸವ ಕತೃರ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಬಸವೇಶ್ವರರ ಭಾವಚಿತ್ರಕ್ಕೆ ಪುಷ​‍್ಾರೆ್ಪಣ ಹಾಗೂ ದಾನಿಗಳಿಗೆ ಸನ್ಮಾನ ಇತ್ಯಾದಿ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು. ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಬಯಲೂರ ಕಲ್ಮಟದ ಪೂಜ್ಯರಾದ ನಿಜಗುಣಾನಂದ ಮಹಾಸ್ವಾಮಿಗಳು ಆಶಿರ್ವಚನ ನಿಡಿದರು. ಅದರಂತೆ ಮಠದ ಉತ್ತರಾಧಿಕಾರಿಗಳಾದ ಸಿದ್ದಬಸವ ದೆವರು ಶ್ರೀಮಠದ ಪರಂಪರೆ ಹಾಗೂ ಅಭಿವೃದ್ದಿ ಹೊಂದುತ್ತಿರುವ ಹಾಗೂಶ್ರೀ ಮಠದ ಆಡಳಿತ ಮಂಡಳಿಯ ಸರ್ವಜನ ಸದಸ್ಯರ ಕಾಯಕ ಕುರಿತು ಮಾರ್ಮಿಕವಾಗಿ ಮಾತನಾಡದರು. ಈ ಸಂದರ್ಬದಲ್ಲಿ ಆಡಳಿತ ಮಂಡಳಿಯ ಸರ್ವ ಸದಸ್ಯರು ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ. ಅಪಾರ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಗುರುವಿನ ಕೃಪೆಗೆ ಪಾತ್ರರಾದರು.