ಲೋಕದರ್ಶನ ವರದಿ
ಮೋಳೆ 08: ಕೆಲ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಕಬ್ಬಿನ ತೂಕದಲ್ಲಿ ಮೋಸವಾಗುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ನಾಲ್ಕು ಝೋನ್ಗಳಲ್ಲಿ ವೇಬ್ರಿಜ್ ನಿರ್ಮಿಸಲು ನಾವು ಸಂಘದಲ್ಲಿ ನಿರ್ದರಿಸಿದ್ದೇವೆ ಎಂದು ಉಗಾರ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಮೋಹನರಾವ್ ಶಹಾ ಹೇಳಿದರು.
ಉಗಾರ ಕಬ್ಬು ಬೆಳೆಗಾರರ ಸಂಘ ಸ್ಥಾಪನೆಗೊಂಡು 40 ವರ್ಷಗಳು ಗತಿಸಿ 41 ನೇವರ್ಷಕ್ಕೆ ಬುಧವಾರ ದಿ.7 ಪಾದಾರ್ಪನೆ ಮಾಡಿದ್ದು ಆ ಸವಿ ನೆನಪಿನಗೋಸ್ಕರ ಈ ನಿರ್ಣಯ ಕೈಗೊಂಡಿದ್ದೇವೆ ಎಂದು ಸಂತಸದಿಂದ ಹೇಳಿದರು.
ಉಗಾರ ಕಬ್ಬು ಬೆಳೆಗಾರರ ಸಂಘವು ಸನ್ 1878 ರಲ್ಲಿ ಸಂಘ ಸ್ಥಾಪನೆಗೊಂಡಿದ್ದು, ಆ ಅವಧಿಯಿಂದ ಇಲ್ಲಿಯವರೆಗೆ ನನ್ನ ಮೇಲೆ ವಿಶ್ವಾಸವಿಟ್ಟು ಕಳೆದ 40 ವರ್ಷಗಳ ಕಾಲ ಅಧ್ಯಕ್ಷನನ್ನಾಗಿ ಮಾಡಿದ್ದು ಅಭಿಂದನಾರ್ಹ ಎಂದರು. ಕಳೆದ 40 ವರ್ಷಗಳ ಕಾಲಾವಧಿಯಲ್ಲಿ ಹಲವಾರು ಯಶ,ಅಪಯಶಗಳನ್ನು ಕಂಡಿದ್ದೇಬೆ ಎಂದರು.
ಇತ್ತೀಗಚಿಗೆ ಕೆಲ ಸಕ್ಕರೆ ಕಾರ್ಖಾನೆಗಳೆು ತೂಕದಲ್ಲಿ ಮೋಸ ಮಾಡುತ್ತಿದ್ದಾ ರೆ,ಅದಕ್ಕಲಾಗಿ ಅಥನಿ, ಐನಾಪುರ, ಕುಡಚಿ ಹಾಗೂ ಶಿರಗುಪ್ಪಿ ಹೀಗೆ ನಾಲ್ಕು ಝೋನಗಳಲ್ಲಿ ವೇಬ್ರಿಜ್ ನಿಮರ್ಿಸಲಾಗುತ್ತಿದ್ದೇವೆ. ರೈತಪರ ಸಂಘಟನೆಗಳು ಮುಂದೆ ಬಂದಲ್ಲಿ ತಲಾ ಒಂದು ವೇಬ್ರಿಜ್ 1.50 ಲಕ್ಷ ರೂ ಸಂಘಟನೆಯ ವತಿಯಿಂದ ನೀಡಲಾಗುವುದೆಂದು ಮೋಹನರಾವ್ ಶಹಾ ಹೇಳಿದರು.
ಈಗಾಗಲೇ ಐನಾಪುರದಲ್ಲಿ ರೈತ ಹಿತರಕ್ಷಣಾ ಸಮೀತಿಯವರು ಕಳೆದ ಎರಡು ವರ್ಷಗಳ ಹಿಂದೆ ವೇಬ್ರಿಜ್ ಮಾಡಿದ್ದು ಅವರಿಗೂ 1.50 ಲಕ್ಷ ರೂ ನೀಡಲಾಗಿದೆ.ಇವರು ಯಶಸ್ವಿಯಾಗಿ ನಡೆಸುತ್ತಿದ್ದಾರೆ ಎಂದರು.