ರಾಜ್ಯಕ್ಕೆ 4ನೇ ರ‍್ಯಾಂಕ್: ಕಾವೇರಿ ಮಲ್ಲಾಪೂರೆಗೆ ಸನ್ಮಾನ

4th rank for the state: Honor to Kaveri Mallapore

ರಾಯಬಾಗ 10: ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ರ‍್ಯಾಂಕ್ ಪಡೆದ ತಾಲೂಕಿನ ನಿಪನಾಳ ಗ್ರಾಮದ ವಿದ್ಯಾರ್ಥಿನಿ ಕಾವೇರಿ ಮಲ್ಲಾಪೂರೆ ಅವರನ್ನು ಇತ್ತಿಚೆಗೆ ಜಿಲ್ಲಾಡಳಿತದಿಂದ ಸತ್ಕರಿಸಲಾಯಿತು.  

ಡಿಸಿ ಮೊಹ್ಮದ ರೋಷನ್, ಜಿ.ಪಂ.ಸಿಇಒ ರಾಹುಲ್ ಶಿಂದೆ, ಎಸ್‌ಪಿ ಡಾ.ಭೀಮಾಶಂಕರ ಗುಳೇದ, ಅಕ್ರಮ ಪಾಷಾ, ಅನೀಲ ಬಸ್ತವಾಡೆ, ಸುರೇಂದ್ರ ಪೋತದಾರ, ರೇವಪ್ಪ ಮಲ್ಲಾಪೂರೆ, ಈರಣ್ಣ ಮಲ್ಲಾಪೂರೆ, ಮಹಾದೇವಿ ಮಲ್ಲಾಪೂರೆ ಇದ್ದರು.