ಹುಬ್ಬಳ್ಳಿ 09: ಬಸವ ಕೇಂದ್ರದ ಕ್ರೀಯಾಶೀಲ ಸದಸ್ಯರು, ನಿವೃತ್ತ್ ಬ್ಯಾಂಕ್ ಉದ್ಯೋಗಿ ಕೆ.ಎಸ್.ಇನಾಮತಿ ಅವರ 50ನೇ ವಿವಾಹ ವಾರ್ಷಿಕೊತ್ಸವದ ಶುಭ ಸಂದರ್ಭದಲ್ಲಿ ಬಸವಕೇಂದ್ರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಸವತತ್ವ ಪ್ರಸಾರಕರು, ಚಿಂತಕರು, ನಿಷ್ಠಾ ಬಸವ ಭಕ್ತರಾದ ಕೆ.ಎಸ್.ಇನಾಮತಿ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಅಭಿನಂದನೆಗಳನ್ನು
ಸಲ್ಲಿಸಲಾಯಿತು.
ನಿಲಾಂಬಿಕಾ ಇನಾಮತಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಬಸವಕೇಂದ್ರದ ಕಾರ್ಯದರ್ಶಿ ಡಾ. ಪ್ರಕಾಶ ಮುನ್ನೋಳಿ, ಅಧ್ಯಕ್ಷ ಪ್ರೊ ಜಿ.ಬಿ.ಹಳ್ಳಾಳ, ಕಾರ್ಯಾಧ್ಯಕ್ಷ ಪ್ರೊ ಎಸ್.ವಿ.ಪಟ್ಟಣಶೆಟ್ಟಿ, ಪ್ರೊ ಬಸವರಾಜ ಕೇಂಧೂಳಿ, ಸಿದ್ದಪ್ಪ ಹಳ್ಳಾಳ, ವಚನಾ, ನಿವೇದಿತಾ, ಎಸ್.ವಿ.ಕೊಟಗಿ, ದಾನಮ್ಮ ಕೇಂಧೂಳಿ, ಲಕ್ಷ್ಮೀ ಲಿಂಗಶೆಟ್ಟರ, ಬಸವಕೇಂದ್ರದ ಸದಸ್ಯರು, ಮುಂತಾದವರು ಇದ್ದರು.