ರಾವಲ್ಪಿಂಡಿ 09: ಭಾರತದ ಜೊತೆಗಿನ ಸಂಘರ್ಷವನ್ನು ತಗ್ಗಿಸುವುದಿಲ್ಲ ಎಂದು ಪಾಕಿಸ್ತಾನ ಸೇನೆಯ ವಕ್ತಾರರು ತಿಳಿಸಿದ್ದಾರೆ.
‘ಸಂಘರ್ಷ ತಗ್ಗಿಸುವ ಇರಾದೆ ಹೊಂದಿಲ್ಲ. ಭಾರತವು ನಮಗೆ ಯಾವ ರೀತಿ ಹಾನಿ ಮಾಡಿದೆಯೋ, ಅದೇ ರೀತಿ ನಾವು ಕೂಡ ಮಾಡಲಿದ್ದೇವೆ. ಇದುವರೆಗೂ ನಾವು ನಮ್ಮನ್ನು ರಕ್ಷಿಸಿಕೊಂಡಿದ್ದೇವೆ. ಅವರಿಗೆ ಸರಿಯಾದ ಸಮಯದಲ್ಲಿ ಉತ್ತರ ಸಿಗಲಿದೆ’ ಎಂದು ಸೇನಾ ವಕ್ತಾರ ಅಹ್ಮದ್ ಷರೀಫ್ ಚೌಧರಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.