58ನೇ ವಾರ್ಷಿಕ ಕ್ರೀಡಾ ದಿನಾಚರಣೆ ಹಾಗೂ ಬಹುಮಾನ ವಿತರಣಾ ಸಮಾರಂಭ

58th Annual Sports Day Celebration and Prize Distribution Ceremony

ಕಾಗವಾಡ 15: ಕರ್ನಾಟಕ-ಮಹಾರಾಷ್ಟ್ರದ ಗಡಿಯ ಕಾಗವಾಡ ಪಟ್ಟಣದಲ್ಲಿ 1967ರ ದಶಕದಲ್ಲಿ ಸ್ಥಾಪನೆಯಾದ ಶಿವಾನಂದ ಮಹಾವಿದ್ಯಾಲಯ ಶಿಕ್ಷಣ ಕ್ಷೇತ್ರಕ್ಕೆ ಮಾತ್ರವಲ್ಲದೆ ವಿದ್ಯಾರ್ಥಿಗಳಿಗೆ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆಂದು ಮುಂಬಯಿನ ಚಾರ್ಟರ​‍್ಡ‌ ಅಕೌಂಟ್‌ಂಟ್ ಆರ್‌.ಎಸ್‌. ಪಾಟೀಲ ತಿಳಿಸಿದ್ದಾರೆ. 

ಅವರು, ಬುಧವಾರ ದಿ. 14 ರಂದು ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ನಡೆದ 58ನೇ ವಾರ್ಷಿಕ ್ರಡಾ ದಿನಾಚರಣೆ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ವಿಯಾಗಬೇಕಾದರೇ ನಂಬಿಕೆ, ಆತ್ಮಬಲ ಹಾಗೂ ಆತ್ಮವಿಶ್ವಾಸ ಹೊಂದಿರಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

ಯಾದಗಿರಿಯ ಹೆಚ್ಚುವರಿ ಸಿವ್ಹಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ರಾಹುಲ ರಾವ್ ಅತಿಥಿಗಳಾಗಿ ಪಾಲ್ಗೊಂಡು, ಮಾತನಾಡುತ್ತಾ, ವಿದ್ಯಾರ್ಥಿಗಳು ಜೀವನದಲ್ಲಿ ದೇಹದ ಜೊತೆಗೆ ಜ್ಞಾನ ಬೆಳೆಸಿಕೊಂಡು, ಸಮಾಜಕ್ಕೆ ಬೆಳಕನ್ನು ಕೊಡುವ ದೀಪವಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಬೇಕು ಎಂದರು. 

ಕಾರ್ಯಕ್ರಮದ ಸಾನಿಧ್ಯವನ್ನು ಎಸ್‌.ಎಂ.ಎ. ಟ್ರಸ್ಟ್‌ನ ಏಕನ್ಯಾಸಧಾರಿ ಪ.ಪೂ. ಯತೀಶ್ವರಾನಂದ ಶ್ರೀಗಳು ಮತ್ತು ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್‌.ಎ. ಕರ್ಕಿ ವಹಿಸಿದ್ದರು. 

ವಿಶೇಷ ಸಾಧಕರಿಗೆ, ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.  

ಈ ವೇಳೆ ಪ್ರೊ. ಬಿ.ಎ. ಪಾಟೀಲ, ಮೇಜರ್ ವ್ಹಿ.ಎಸ್‌. ತುಗಶೆಟ್ಟಿ, ಡಾ. ಎಸ್‌.ಪಿ. ತಳವಾರ, ಪ್ರೊ. ಪಿ.ಬಿ. ನಂದಾಳೆ, ಪ್ರೋ. ರಮೇಶ ನಾಗರಡ್ಡಿ, ಡಾ. ಚಂದ್ರಶೇಖರ ವೈ., ಪ್ರೊ. ಆರ್‌.ಎಸ್‌. ನಾಗರಡ್ಡಿ, ಪ್ರೊ. ವ್ಹಿ.ಬಿ. ಬುರ್ಲೆ, ಪ್ರೊ. ಎ.ಎ. ಪಾಟೀಲ, ಪ್ರೊ.ಎನ್‌.ಎಂ. ಬಾಗೇವಾಡಿ, ಪ್ರೊ.ಎಸ್‌.ಎ. ಹೆದ್ದೂರೆ, ಪ್ರೊ. ಬಿ.ಡಿ. ಧಾಮಣ್ಣವರ, ಪ್ರೊ. ಜೆ.ಕೆ. ಪಾಟೀಲ, ಪಿ.ಎಂ. ದೊಡಮನಿ ಪ್ರೊ. ಎಸ್‌.ಎಂ. ಘೋರೆ​‍್ಡ, ಪ್ರೊ. ಬಿ.ಐ. ಜಗದಮನಿ  

ಆದರ್ಶ ವಿದ್ಯಾರ್ಥಿ ವಾಸುದೇವ ಪಾಟೀಲ, ಆದರ್ಶ ವಿದ್ಯಾರ್ಥಿನಿ ಕಾವ್ಯಾ ಅಸೋದೆ, ಕ್ರೀಡಾ ಕಾರ್ಯದರ್ಶಿ ವಿನಾಯಕ ಘೋರೆ​‍್ಡ, ಚೈತ್ರಾ ಕಾಂಬಳೆ ಸೇರಿದಂತೆ ಬೋಧಕ/ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.