ಸಿಡಿಲು ಬಡಿದು 6ಕುರಿ ಸಾವು

6 sheep killed by lightning

ಸಿಡಿಲು ಬಡಿದು 6ಕುರಿ ಸಾವು  

ದೇವರಹಿಪ್ಪರಗಿ 21: ತಾಲೂಕಿನ ಸುತ್ತಮುತ್ತ ಸುರಿಯುತ್ತಿರುವ ಭಾರಿ ಮಳೆ ಅಪಾರ ಹಾನಿಯನ್ನು ಮಾಡಿದ್ದಲ್ಲದೇ ಮಂಗಳವಾರ ಸುರಿದ ಗುಡುಗು ಮಿಂಚು ಮಿಶ್ರಿತ ಭಾರಿ ಮಳೆಗೆ ತಾಲೂಕಿನ ಚಿಕ್ಕರೂಗಿ ಗ್ರಾಮದ ಪರಸಪ್ಪ ಟಕ್ಕಳಕಿ ಅವರ ಹೊಲವೊಂದರಲ್ಲಿ ಸಿಡಿಲು ಬಡಿದು 6 ಕುರಿಗಳು ಸಾವನ್ನಪ್ಪಿವೆ. 

ಚಿಕ್ಕರೂಗಿ ಗ್ರಾಮದ  ಮಲ್ಲಪ್ಪ ಸಿದ್ದಪ್ಪ ರೊಟ್ಟಿ ಅವರು ಕುರಿ ಮೇಯಿಸಲು ಹೋದ ಸಮಯದಲ್ಲಿ ಸಾಯಂಕಾಲ 4ಗಂಟೆಗೆ ಸಿಡಿಲು ಬಡೆದು 6ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗ್ರಾಮದಲ್ಲಿ ನಡೆದಿದೆ.  

ಸ್ಥಳಕ್ಕೆ ಕಂದಾಯ ಇಲಾಖೆಯ, ಪೊಲೀಸ್ ಇಲಾಖೆಯ ಹಾಗೂ ಪಶು ಇಲಾಖೆಯ ವೈದ್ಯಾಧಿಕಾರಿಗಳು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.