ಕೆಎಲ್ಇ ಸ್ವಾಯತ್ತ ವಿಶ್ವವಿದ್ಯಾಲಯದ ವತಿಯಿಂದ 63ನೇ ಕನ್ನಡ ರಾಜ್ಯೋತ್ಸವ ಆಚರಣೆ

ಲೋಕದರ್ಶನ ವರದಿ

ಬೆಳಗಾವಿ, 3: ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯದ ವತಿಯಿಂದ 63ನೇ ಕನರ್ಾಟಕ ರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಲಾಯಿತು.  ಸಮಾರಂಭವನ್ನು ನಾಡಗೀತೆಯೊಂದಿಗೆ ತಾಯಿ ಭುವನೇಶ್ವರಿಗೆ ಪೂಜೆ ನೆರವೇರಿಸುವುದರ ಮೂಲಕ ಆರಂಭಿಸಲಾಯಿತು. 

   ಮುಖ್ಯ ಅತಿಥಿಗಳಾದ ವಿಶ್ವವಿದ್ಯಾಲಯದ ಕುಲಪತಿಡಾ. ವಿವೇಕ ಸಾವಜಿಅವರು ಮಾತನಾಡಿಎಲ್ಲರೂ ಮಾತೃಭಾಷೆಯ ಬಗ್ಗೆ ಹೆಮ್ಮೆ ಹೊಂದಿರಬೇಕು ಮತ್ತು ದಿನನಿತ್ಯದ ವ್ಯವಹಾರವನ್ನು ಮಾತೃಭಾಷೆಯಲ್ಲಿ ಮಾಡಬೇಕೆಂದು ಕರೆ ನೀಡಿದರು. ಕುಲಸಚಿವರಾದ ಡಾ. ವಿ.ಡಿ.ಪಾಟೀಲರು ಮಾತನಾಡಿ ಬೆಳಗಾವಿ ನಗರದಲ್ಲಿ ಕನ್ನಡಭಾಷೆಯ ಉಳಿವಿಗೆ ಹಾಗೂ ಬೆಳವಣಿಗೆಗೆ ಕೆ.ಎಲ್.ಇ. ಸಂಸ್ಥೆಯ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಕೊಡುಗೆಯನ್ನು ಸ್ಮರಿಸಿದರು. 

ಕೆ.ಎಲ್.ಇ. ಕನ್ನಡ ಬಳಗದ ಅಧ್ಯಕ್ಷೆ ಹಾಗೂ ಜವಾಹರಲಾಲ ನೆಹರುವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಎನ್.ಎಸ್.ಮಹಾಂತಶೆಟ್ಟಿಯವರು ಮಾತನಾಡಿ ಎಲ್ಲ ಆರೋಗ್ಯ ವಿಜ್ಞಾನಗಳ ಕನ್ನಡೇತರ ವಿದ್ಯಾಥರ್ಿಗಳು ಕನ್ನಡ ಭಾಷೆಕಲಿತು ರೋಗಿಗಳೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸುವಂತೆ ಸಲಹೆ ನೀಡಿದರು. ಕನ್ನಡ ಬಳಗದ ಕಾರ್ಯಧ್ಯಕ್ಷರಾದ ಡಾ.ಜ್ಙಾನೇಶ ಡಿ.ಕೆ ಅವರು ಸ್ವಾಗತ ಭಾಷಣ ಮಾಡಿದರು. ಕನ್ನಡ ಬಳಗದ ಕಾರ್ಯದಶರ್ಿ ಶ್ರೀ ಪ್ರಸನ್ನ ಚಿಕ್ಕಮಠ ವಂದಿಸಿದರು. ಸಮಾರಂಭದ ಆಕರ್ಷಣೆಯಾಗಿದ್ದ 'ಅಂಗಾಂಗ ದಾನ' ಕುರಿತಾದ ಸ್ಥಬ್ದ ಚಿತ್ರಕ್ಕೆಜಿಲ್ಲಾ ಮಟ್ಟದ ಪಥಸಂಚಲನೆಯಲ್ಲಿ ಭಾಗವಹಿಸಲು ಎಲ್ಲಗಣ್ಯರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾಥರ್ಿಗಳು ಕನ್ನಡರಾಜ್ಯೋತ್ಶವ ಕುರಿತಾಗಿ ಹಾಡಿದರು ಮತ್ತು ಸಮೂಹ ನೃತ್ಯ ಪ್ರದಶರ್ಿಸಿದರು. 

ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯ ಅಂಗಸಂಸ್ಥೆಗಳ ಪ್ರಾಂಶುಪಾಲರುಗಳು, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಭಂದಿಗಳು ಹಾಗೂ 500ಕ್ಕೂ ಹೆಚ್ಚು ವಿದ್ಯಾಥರ್ಿಗಳು ಭಾಗವಹಿಸಿದ್ದರು.