ಜ್ಞಾನ,ಸನ್ಮಾರ್ಗ,ಮತ್ತುಸತ್ಯದ ಮಾರ್ಗದರ್ಶಕರ : ಸಂತ ಸೇವಾಲಾಲ

A Guide to Knowledge, Right Path, and Truth : Sant Sewalal

ಜ್ಞಾನ,ಸನ್ಮಾರ್ಗ,ಮತ್ತುಸತ್ಯದ ಮಾರ್ಗದರ್ಶಕರ : ಸಂತ ಸೇವಾಲಾಲ 

ಶಿರಹಟ್ಟಿ 15 :  ಸಂತ ಸೇವಾಲಾಲ ಮಹಾರಾಜರು ಬಂಜಾರಾ ಸಮುದಾಯದ ಮಹಾನ್ ಸಂತ ಮತ್ತು ಮಾರ್ಗದರ್ಶಕರಾಗಿದ್ದರು. ಅವರು ತಮ್ಮ ಜೀವನವನ್ನು ದೀನದುರ್ಬಲರ ಸೇವೆಗೆ ಸಮರ​‍್ಿಸಿದ್ದರು ಮತ್ತು ಸಮುದಾಯದ ಜನರಿಗೆ ಜ್ಞಾನ, ಸನ್ಮಾರ್ಗ, ಮತ್ತು ಸತ್ಯದ ಮಾರ್ಗದರ್ಶನ ನೀಡಿದರು ಎಂದು ತಹಶೀಲ್ದಾರ ಅನಿಲ್ ಬಡಿಗೇರ ಹೇಳಿದರು.ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಶನಿವಾರ ಶ್ರೀ ಸಂತ ಸೇವಾಲಾಲ ಜಯಂತಿ ಕಾರ‌್ಯಕ್ರಮದಲ್ಲಿ ಅವರು ಮಾತನಾಡಿದ ಜನರನ್ನು ಸದಾಚಾರದ ಜೀವನ ನಡೆಸಲು ಪ್ರೇರೇಪಿಸಿದರು.ಸುಳ್ಳು, ವಂಚನೆ, ಮತ್ತು ಶೋಷಣೆಯಿಂದ ದೂರ ಉಳಿಯುವಂತೆ ಬೋಧಿಸಿದರು.ಸಮಾಜದ ಹಿಂದುಳಿದ ಮತ್ತು ದೌರ್ಜನ್ಯ ಅನುಭವಿಸುತ್ತಿದ್ದವರ ಹಕ್ಕುಗಳಿಗಾಗಿ ಹೋರಾಟ ಮಾಡಿದರು.ಸಮಾನತೆಯ ಪರಿಪಾಲನೆಗಾಗಿ ಪಾಳೆಯಗಳು ಮತ್ತು ಸಮುದಾಯ ಸಭೆಗಳ ಮೂಲಕ ಜಾಗೃತಿ ಮೂಡಿಸಿದರು ಎಂದರುಪ್ರಕೃತಿಯ ಮತ್ತು ಪ್ರಾಣಿಗಳ ಸಂರಕ್ಷಣೆಗೆ ಒತ್ತು ನೀಡಿದರು.ಪರಿಸರ ಸ್ನೇಹಿ ಜೀವನವನ್ನು ಪ್ರಚಾರ ಮಾಡಿದರು.ಬಂಜಾರಾ ಸಮುದಾಯದಲ್ಲಿ ಶಿಕ್ಷಣದ ಪ್ರಾಮುಖ್ಯತೆಯನ್ನು ಎತ್ತಿಹಿಡಿದರು. ಅನುಭವಜ್ಞಾನವನ್ನು ಜನತೆಗೆ ತಲುಪಿಸುವ ಮೂಲಕ ಸಮಾಜದ ಉನ್ನತಿಗೆ ಸಹಕರಿಸಿದರು.ದೇವರಲ್ಲಿ ನಿಷ್ಠೆ ಇಟ್ಟು ಶುದ್ಧ ಮನಸ್ಸಿನಿಂದ ಜೀವನ ನಡೆಸಲು ಉಪದೇಶಿಸಿದರು.ಭಕ್ತಿ ಗೀತೆಗಳ ಮೂಲಕ ಜನರಲ್ಲಿ ಆಧ್ಯಾತ್ಮಿಕ ಜಾಗೃತಿಯನ್ನು ಮೂಡಿಸಿದರು ಎಂದರು  ಈ  ವೇಳೆ ಎಂ.ಕೆ ಲಮಾಣಿ, ದೇವಪ್ಪ ಲಮಾಣಿ, ಜಾನು ಲಮಾಣಿ ಸಮಾಜ ಕಲ್ಯಾಣ ಅಧಿಕಾರಿ ಗೋಪಾಲ್ ಲಮಾಣಿ, ಪಪಂ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ಈರಣ್ಣ ಚೌಹಾಣ್, ತಾಲೂಕ ಕಂದಾಯ ಇಲಾಖೆ ಸಿಬ್ಬಂದಿಗಳ, ವಿವಿಧ ತಾಂಡಗಳ ಗುರುಹಿರಿಯರು ಇತರರಿದ್ದರು.