ವಿಜಯಪುರ ಬಂದ್ ಯಶಸ್ವಿಗೊಳಿಸಲು ಕರೆ

A call to make the Vijaypur Bandh a success

ವಿಜಯಪುರ 28: ದಿ. 30ರಂದು ಬೆಳಿಗ್ಗೆ 8 ಘಂಟಗೆ ವಿಜಯಪುರ ಬಂದ ಕರೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) (ಅಂಬೇಡ್ಕರ್‌ವಾದ) ಜಿಲ್ಲಾ ಸಮಿತಿಯಿಂದ ಸಂಪೂರ್ಣವಾದ ಬೆಂಬಲವನ್ನು ವ್ಯಕ್ತಪಡಿಸುತ್ತಿದೆ. ಸಂಸತ್ ಭವನದಲ್ಲಿ ಕೇಂದ್ರ ಗೃಹ ಮಂತ್ರಿಗಳ ಹೇಳಿಕೆಯನ್ನು ಖಂಡಿಸಿ ಅಹಿಂದ ದಲಿತ ಪರ ಸಂಘಟನೆಗಳ ಒಕ್ಕೂಟ, ಹಾಗೂ ಅಂಬೇಡ್ಕರ್ ವಿಚಾರವಾದಿಗಳ ಬಳಗ, ರೈತ ಸಂಘಟನೆ, ಕಾರ್ಮಿಕ ಸಂಘಟನೆ, ಮಹಿಳಾ ಸಂಘಟನೆ, ಶೋಷಿತ ವರ್ಗಗಳ ಸಂಘಟನೆ, ಎಲ್ಲರ ನೇತೃತ್ವದಲ್ಲಿ ಬಂದ್ ಕರೆಗೆ ಸಂಪೂರ್ಣವಾದ ಬೆಂಬಲವನ್ನು ವ್ಯಕ್ತಪಡಿಸುತ್ತಿದೆ. ಕಾರಣ ಗ್ರಾಮ ಪಂಚಾಯತಿಯ ಸದಸ್ಯರು, ಮಹಿಳಾ ಒಕ್ಕೂಟ, ವಿದ್ಯಾರ್ಥಿ ಒಕ್ಕೂಟ, ತಾಲೂಕಾ ಸಮಿತಿ, ಜಿಲ್ಲಾ ಸಮಿತಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ದಿ. 30ರಂದು ವಿಜಯಪುರ ಜಿಲ್ಲಾ ಬಂದ ಕರೆ ಸಂಪೂರ್ಣವಾಗಿ ಯಶಸ್ವಿಗೊಳಿಸಬೇಕೆಂದು ಸಂಚಾಲಕರು ಸಂಜು ವೈ. ಕಂಬಾಗಿ ಪ್ರಕಟಣೆಯ ಮೂಲಕ ಕೋರಿದ್ದಾರೆ.   

ಯಲ್ಲಪ್ಪ ಕಾಂಬಳೆ, ಸವಿತಾ ವಗ್ಗರ, ಶಂಕರ ಚಲವಾದಿ, ಭೀಮಣ್ಣ ಹಂಚನಾಳ, ಭಾಸ್ಕರ 30 ರಂದು ಎಲ್ಲರೂ ಸಮ್ಮತದಿಂದ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.