ಮಾಂಜರಿ 07: ನಿರಂತರವಾಗಿ ಅಧ್ಯಯನ ಹಾಗೂ ಪತ್ಯೇತರ ಕಾರ್ಯ ಚಟುವಟಿಕೆಗಳಲ್ಲಿ ಮನಪೂರ್ವಕವಾಗಿ ತೊಡಗಿಸಿಕೊಂಡಾಗ ಮಾತ್ರ ಭವಿಷ್ಯವನ್ನು ಉಜ್ವಲ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಬೀಳ್ಕೊಡುಗೆ ಅಂದರೆ ಉನ್ನತ ಶಿಕ್ಷಣಕ್ಕೆ ಹೋಗುವುದು ಹೊರತು ಶಿಕ್ಷಕರು ವಿದ್ಯಾರ್ಥಿಗಳನ್ನು ಬಿಟ್ಟುಕೊಡುವುದಲ್ಲ ಎಂದು ಚಿಕ್ಕೋಡಿ ಕೆಎಲ್ಇ ಸಂಸ್ಥೆಯ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಹಾಗೂ ಕೆಎಲ್ಇ ಸಂಸ್ಥೆಯ ಅಜೀವ ಸದಸ್ಯ ಪ್ರಸಾದ್ ರಾಂಪುರ ಹೇಳಿದರು.
ಅವರು ಬುಧವಾರರಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ ಕೆಎಲ್ಇ ಸಂಸ್ಥೆಯ ಪದವಿ ಮಹಾವಿದ್ಯಾಲಯದ ಪ್ರತಿಭಾ ಪುರಸ್ಕಾರ ಹಾಗೂ ಬಿ.ಎ ಮತ್ತು ಬಿ ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಎನ್ಎಸ್ಎಸ್ ಘಟಕದ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಪದವಿ ಬದುಕಿನಲ್ಲಿ ಬದಲಾವಣೆ ತರುತ್ತದೆ. ಪ್ರತಿಯೊಂದು ವಿಷಯದ ಜ್ಞಾನವು ಬದುಕಿಗೆ ತಳಪಾಯವಿದ್ದಂತೆ. ಶಿಕ್ಷಣದಲ್ಲಿ ಮೌಲ್ಯಯುತ ಶಿಕ್ಷಣವನ್ನು ಕಲಿಯಬೇಕು. ವಿದ್ಯಾದಾನವು ಪರಮಶ್ರೇಷ್ಠವಾಗಿದ್ದು ಜೀವನ ಪಾಠ ಹೇಳಿದ ಶಿಕ್ಷಕರಿಗೆ ವಿಧೇಯರಾಗಿರಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿ ಪ್ರಾಚಾರ್ಯ ಎಂ ಎಸ್ ಕಾನಡೆ ಅವರು ಮಾತನಾಡಿ, ಯಾವುದೇ ಬೇಧಭಾವವಿಲ್ಲದೆ ಬಸವಣ್ಣನವರ ಏಳು ತತ್ವಗಳನ್ನು ಅಳವಡಿಸಿಕೊಂಡು ವಿದ್ಯಾಕ್ಷೇತ್ರದಲ್ಲಿ ಸೇವೆ ಕಲಿಸುತ್ತಿರುವ ಮತ್ತು ರಾಜ್ಯಸಭೆಯ ಮಾಜಿ ಸದಸ್ಯ ಪ್ರಭಾಕರ್ ಕೋರೆ ಇವರ ಕಾರ್ಯಾಧ್ಯಕ್ಷತೆಯಲ್ಲಿ ಮುನ್ನಡೆಯುತ್ತಿರುವ ಕೆಎಲ್ಇ ಶಿಕ್ಷಣ ಸಂಸ್ಥೆ ಒಂದು ಹೆಮ್ಮೆಯ ವಿಷಯ ಎಂದು ಹೇಳಿದರು.
ಪ್ರಸಾದ್ ರಾಮಪುರೆ ಅವರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶಾರದಾದೇವಿ ಕೋರೆ ಪ್ರೌಢಶಾಲೆಯ ಉಪರಾಚಾರ್ಯ ಜ್ಯೋತಿ ತಮಗೊಂಡ, ಬಸವಪ್ರಭು ಕೋರೆ, ಸಿಬಿಎಸ್ಸಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಚಾರ್ಯ ಪಾರ್ಥ ಸಾರಥಿ ನಂದಾ ಎಸ್ ಸಿ ಪಾಟೀಲ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯಾಧ್ಯಾಪಕ ಸಂತೋಷ್ ಹಿರೇಮಠ, ಬಿಎಸ್ ಅಂಬಿ, ಅಕ್ಷಯ್ ಬೆಂಡೆ, ಎಸ್ ಬಿ ಬೊಮ್ಮಣ್ಣವರ್, ಪ್ರವೀಣ್ ಪೂಜಾರಿ, ಜ್ಯೋತಿ ಕಾನಡೆ, ಲಕ್ಷ್ಮಿ ಮೇತ್ರೆ, ಮೀನಾಕ್ಷಿ ಪೊಟೆ, ಕೇಸರಿ ವಾಘಮಾರೆ, ಎನ್ ಆರ್ ಉಮರಾನೆ ಹಾಗೂ ಇನ್ನಿತರರು ಹಾಜರಿದ್ದರು.
ಆರ್ ಇ ಕರ್ಗುಪ್ಪೆ ಸ್ವಾಗತಿಸಿದರು. ಎನ್ ಆರ್ ಉಮರಾಣಿ ವಾರ್ಷಿಕ್ ವರದಿ ಓದಿದರು. ಭಾಗ್ಯಶ್ರೀ ಬಾನಕರೇ ಮತ್ತು ಸ್ನೇಹಲ ಲಕ್ಕಣ್ಣವರ್ ನಿರೂಪಿಸಿದರು. ಪೂರ್ಣಿಮಾ ಕಾಟೆ ವಂದಿಸಿದರು.