ಎ. 20ರಂದು ವೀರಶೈವ ಲಿಂಗಾಯತ ವಧು-ವರ ಬೃಹತ್ ಸಮಾವೇಶ

A huge gathering of Veerashaiva Lingayat brides and grooms on 20th

ಬೆಳಗಾವಿ 11: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ, ಬೆಳಗಾವಿ ಹಾಗೂ ಕೆಎಲ್‌ಇ ಸಂಸ್ಥೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಇದೇ ಎಪ್ರಿಲ್ 20, 2025 ರಂದು ಮುಂಜಾನೆ 8 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಕೆಎಲ್‌ಇ ಸಂಸ್ಥೆಯ ಜೆಎನ್ ಮೆಡಿಕಲ್ ಕಾಲೇಜಿನ ಡಾ.ಜೀರಗೆ ಸಭಾಂಗಣ, ನೆಹರುನಗರದಲ್ಲಿ ಬೆಳಗಾವಿ ಮಹಾನಗರದ 61ನೇ ವೀರಶೈವ ಲಿಂಗಾಯತ ವಧು-ವರ ಹಾಗೂ ಪಾಲಕರ ಬೃಹತ್ ಸಮಾವೇಶವನ್ನು ಆಯೋಜಿಸಲಿದೆ.  

ಒಂದೇ ವೇದಿಕೆಯ ಮೇಲೆ ತಮ್ಮ ಜೀವನ ಸಂಗಾತಿಯನ್ನು ತಮ್ಮ ಪಾಲಕರ ಸಹಾಯದಿಂದ ಸ್ವತಃ ಆಯ್ಕೆ ಮಾಡಿಕೊಳ್ಳುವ ಸದುದ್ದೇಶದಿಂದ ವೀರಶೈವ ಲಿಂಗಾಯತ ವಧುವರ ಅನ್ವೇಷಣ ಕೇಂದ್ರವು 1988ರಿಂದ ಕಾರ್ಯವನ್ನು ನಿರ್ವಹಿಸುತ್ತಿದೆ. 

ಈ ಸಮ್ಮೇಳನದಲ್ಲಿ ಭಾಗವಹಿಸಲು ಇಚ್ಛಿಸುವವರು ನಿರ್ದಿಷ್ಟಪಡಿಸಿದ ಅರ್ಜಿ ನಮೂನೆಯೊಂದಿಗೆ ವಧು ವರರ ಮಾಹಿತಿ ಭರ್ತಿ ಮಾಡಿ ತಮ್ಮ ಇತ್ತೀಚಿನ ಭಾವಚಿತ್ರವನ್ನು ಲಗತ್ತಿಸಿ ವೀರಶೈವ ಲಿಂಗಾಯತ ವಧು ವರ ಅನ್ವೇಷಣ ಕೇಂದ್ರ ಲಿಂಗಾಯತ ಭವನ, ಶಿವಬಸವ ನಗರ, ಬೆಳಗಾವಿ ಕಚೇರಿಯಲ್ಲಿ ನೋಂದಾಯಿಸಬೇಕೆಂದು ಅನ್ವೇಷಣ ಕೇಂದ್ರದ ಅಧ್ಯಕ್ಷರಾದ ಡಾ.ಎಫ್‌.ವ್ಹಿ.ಮಾನ್ವಿ, ಮಹಾಸಭೆ ಜಿಲ್ಲಾ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಗೌರವ ಕಾರ್ಯದರ್ಶಿಗಳಾದ ಡಾ.ಗುರುದೇವಿ ಹುಲೆಪ್ಪನವರಮಠ, ಪ್ರಕಾಶ ಬಾಳೇಕುಂದ್ರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.