17 ರಂದು ಅಖಂಡ ಕನರ್ಾಟಕ ರೈತ ಸಂಘದಿಂದ ಬೃಹತ್ ಪ್ರತಿಭಟನೆ

ಲೋಕದರ್ಶನ ವರದಿ

ವಿಜಯಪುರ 14: ರೈತರು ಕೃಷಿಗಾಗಿ ಮಾಡಿದ ರಾಷ್ಟ್ರೀಕೃತ ಹಾಗೂ ಸಹಕಾರಿ ಸಂಘಗಳಲ್ಲಿಯ ಸಾಲವನ್ನು ಸಂಪರ್ೂಣ ಮನ್ನಾ ಮಾಡುವದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇದೇ ದಿ. 17 ರಂದು ಬೆಳಗಾವಿಯಲ್ಲಿ ರಾಜ್ಯಮಟ್ಟದ ಬೃಹತ್ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಂಡ ಕನರ್ಾಟಕ ರೈತ ಸಂಘದ ರಾಜ್ಯ ಕಾರ್ಯದಶರ್ಿ ಅರವಿಂದ ಕೆ ಕುಲಕಣರ್ಿ ಹೇಳಿದರು 

ನಗರದ ಎ ಪಿ ಎಂ ಸಿ ರೈತ ಭವನದಲ್ಲಿ ಕರೆದ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ಈ ಚಳವಳಿಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿಕೊಂಡರು.

ಬೆಳಗಾವಿಗೆ ತೆರಳಲು  ಜಿಲ್ಲೆೆಯ ರೈತಬಾಂಧವರು ಹಾಗೂ ಸಂಘದ ಕಾರ್ಯಕರ್ತರು ಒಂದು ದಿನ ಮುಂಚೆ ದಿನಾಂದಿ.16 ರಂದು ಮಧ್ಯಾನ್ಹ 12 ಘಂಟೆಗೆ ವಿಜಯಪುರ ರೈಲು ನಿಲ್ದಾಣಕ್ಕೆ ಆಗಮಿಸಬೇಕೆಂದು ಅವರು ಕೋರಿದರು.

ಸಭೆಯಲ್ಲಿ ಜಿಲ್ಲಾಧ್ಯಕ್ಷ ಸಿದ್ರಾಮ ರಂಜಣಗಿ ಬಸವನ ಬಾಗೇವಾಡಿ ತಾಲೂಕಾಧ್ಯಕ್ಷ ಸಿದ್ದರಾಮ ಅಂಗಡಗೇರಿ  ಹೂವಿನ ಹಿಪ್ಪರಗಿ ಘಟಕದ ಅಧ್ಯಕ್ಷರಾದ ಹಣಮಂತ ತೋಟದ, ಸದಾಶಿವ ಬರಟಗಿ ಹೊನಕೇರೆಪ್ಪ ತೆಲಗಿ, ಕೃಷ್ಣಪ್ಪ ಬಮರಡ್ಡಿ, ಚಂದ್ರಾಮ ತೆಗ್ಗಿ, ಚಂದ್ರಾಮ ಹಿಪ್ಪಲಿ ಮಹಿಬೂಬ ಅವಟಿ ಡಾ|| ಎಂ ರಾಮಚಂದ್ರ ಬಮ್ಮನಜೋಗಿ, ಗೊಲ್ಲಾಳಪ್ಪ ಚೌಧರಿ ಬಸವರಾಜ ಹೆಬ್ಬಾಳ ಸುಭಾಸ ಬಿಸಿರೊಟ್ಟಿ, ಗದಿಗೆಪ್ಪ ಕುಂಬಾರ, ಶ್ರೀಶೈಲ ತೋಟದ, ಬರಮಾನಂದ ಮಾಳೂರು   ಸೇರಿದಂತೆ ಇನ್ನಿತರರು ಇದ್ದರು.