ಮೂಲವಾಸಿಗಳನ್ನೇ ಹೊರಗಿಡುವ ಹುನ್ನಾರ: ಚಂದ್ರಶೇಖರ ಹಳ್ಳದ

A plan to exclude the original inhabitants: Chandrashekar Hallada

ಮೂಲವಾಸಿಗಳನ್ನೇ ಹೊರಗಿಡುವ ಹುನ್ನಾರ: ಚಂದ್ರಶೇಖರ ಹಳ್ಳದ  

ಉಗರಗೋಳ 07: ಯಲ್ಲಮ್ಮ ದೇವಸ್ಥಾನದ ಮೂಲವೇ ಉಗರಗೋಳ ಗ್ರಾಮ. ಇಲ್ಲಿ ಯಲ್ಲಮ್ಮ ದೇವಿಯ ಅರ್ಚಕರ ಮನೆತನಗಳಿವೆ. ಆದರೆ, ಈ  ಮೂಲವಾಸಿಗಳನ್ನೇ ಹೊರಗಿಡುವ ಹುನ್ನಾರ ನಡೆದಿದೆ. ಗಾಯರಾಣ  ವೈಜ್ಯ ಸಂಧಾನದ ಬದಲಿಗೆ,  ನ್ಯಾಯಾಲಯದಲ್ಲೇ  ಇತ್ಯರ್ಥ್ಯವಾಗಲಿ ಎಂದು ಗ್ರಾಮಸ್ಥ ಚಂದ್ರಶೇಖರ ಹಳ್ಳದ ಹೇಳಿದರು. ಗ್ರಾಮ ಪಂಚಾಯತಿಯ 1,097 ಎಕರೆ ಗಾಯರಾಣ ಜಾಗವನ್ನು ಯಲ್ಲಮ್ಮನ ಗುಡ್ಡಕ್ಕೆ ನೀಡುವದನ್ನು ವಿರೋಧಿಸಿ, ಉಗರಗೋಳ ಗ್ರಾಮದ ಹನುಮಂತ ದೇವರ ಸಭಾಭವನದಲ್ಲಿ ಉಗರಗೋಳ, ಹರ್ಲಾಪೂರ ಮತ್ತು ಯಲ್ಲಮ್ಮ ತಾಂಡೆಗಳ ಗ್ರಾಮಸ್ಥರ ಸಮ್ಮುಖದಲ್ಲಿ ಗುರುವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ಮೂರು ದಶಕಗಳಿಂದ ಗಾಯರಾಣ ವಿಷಯದ ಕುರಿತು ನ್ಯಾಯಾಂಗ ಹೋರಾಟ ನಡೆದೇ ಇದೆ. ಗ್ರಾಮದ ಆಸ್ತಿ ಉಳಿವಿಗೆ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು. ಗುಡ್ಡದ ಅಭಿವೃದ್ಧಿಗೆ ನಮ್ಮಿಂದ ಸಮಸ್ಯೆಯಾಗುತ್ತಿದೆ ಎಂದು ಊಹಾಪೋಹ ಹಬ್ಬಿಸಲಾಗುತ್ತಿದೆ. ಇದು ಸತ್ಯಕ್ಕೆ ದೂರವಾದದ್ದು, ಗುಡ್ಡದ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಇದ್ದೇ ಇದೆ. ಆದರೆ, ಗ್ರಾಮದ ಆಸ್ತಿ ಪಡೆದು ಮೂಗಿಗೆ ತುಪ್ಪ ಸವರುವ ಕೆಲಸ ನಡೆದಿದೆ. ರಾಜಿ ಸಂಧಾನಕ್ಕೆ ಗ್ರಾಮ ಪಂಚಾಯತಿ ಸದಸ್ಯರು ಅಥವಾ ಹಿರಿಯರು ಒಪ್ಪಿಗೆ ನೀಡಬಾರದು ಎಂದು ಆಗ್ರಹಿಸಿದರು. ಮಂಜುನಾಥಗೌಡ ರೇಣ್ಕಿಗೌಡರ ಮಾತನಾಡಿ, ಸಾವಿರಾರು ಎಕರೆ ಭೂಮಿ ನೀಡಲು ಸಾಧ್ಯವಿಲ್ಲ. ಮೊದಲು 10 ಎಕರೆ ಪಡೆದು ಅಭಿವೃದ್ಧಿಪಡಿಸಿ. ನಿಮ್ಮ ಕಾರ್ಯದಿಂದ ತೃಪ್ತಿಯಾದಲ್ಲಿ, ನಾವೇ ಭೂಮಿ ಕೊಡಲು ಮುಂದೆಬರುತ್ತೇವೆ. ಅದನ್ನು ಬಿಟ್ಟು ಮೂಲವಾಸಿಗಳನ್ನೇ ಗುಡ್ಡದಿಂದ ಹೊರದಬ್ಬುವ ಯತ್ನಕ್ಕೆ ಪ್ರತ್ಯುತ್ತರ ನೀಡುತ್ತೇವೆ. ಅಲ್ಲಿ ಅಭಿವೃದ್ಧಿ ಕಾಮಗಾರಿ ಪಂಚಾಯತಿಯಿಂದಲೇ ನಡೆಯಲಿ. ಗ್ರಾಮದ ಯುವಕರಿಗೆ ಉದ್ಯೋಗವಕಾಶ ನೀಡುವ ಭರವಸೆ ಶಾಶ್ವತ ಪರಿಹಾರವಲ್ಲ. ದೇವಸ್ಥಾನದಲ್ಲಿ ಅರ್ಚಕರನ್ನೇ ಬಿಡದ ಸಿಬ್ಬಂದಿ ಗ್ರಾಮಸ್ಥರನ್ನು ಏಕೆ ಬಿಡುತ್ತಾರೆ ? ಗ್ರಾಮದ ಆಸ್ತಿ ಉಳಿವಿಗೆ ಹಾಗೂ ಗುಡ್ಡದಲ್ಲಿ ಗ್ರಾಮದ ಪ್ರಾಶಸ್ತ್ಯಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಡೋಣ ಎಂದರು. ಗ್ರಾ.ಪಂ ಅಧ್ಯಕ್ಷ ಮಂಜುನಾಥ ಕಾಳಪ್ಪನವರ ಮಾತನಾಡಿ, ದೇವಸ್ಥಾನದ ಅಭಿವೃದ್ಧಿ ಕುರಿತು ಗ್ರಾಮಸ್ಥರಿಂದ ಮೊದಲು ಹಾಗೂ ಸದ್ಯ ಯಾವುದೂ ಅಡೆತಡೆ ಮಾಡಿಲ್ಲ. ಗುಡ್ಡದ ಅಧಿಕಾರಿಗಳಿಂದ ಗ್ರಾಮಕ್ಕೆ ಆಗುವ ಅನ್ಯಾಯದ ಕುರಿತು ಹೋರಾಟ ನಡೆಸಲಾಗಿದೆ.  ಏನೇಯಾದರೂ ಗಾಯರಾಣ ವ್ಯಾಜ್ಯ ನ್ಯಾಯಾಲಯದಲ್ಲಿಯೇ ಇತ್ಯರ್ಥವಾಗಬೇಕು. ಜನರ ಒಮ್ಮತವೇ ಪಂಚಾಯತಿ ಸದಸ್ಯರ ಒಮ್ಮತವಾಗಿದೆ. ನ್ಯಾಯಾಂಗ ಹೋರಾಟ ಮುಂದುವರಿಸಲಾಗುವುದು ಎಂದರು. ಗುರುನಾಥ ಗಾಂಜಿ ಮಾತನಾಡಿದರು. ನಿಂಗನಗೌಡ ಹರಳಕಟ್ಟಿ, ಶಂಕ್ರೆಮ್ಮ ಮುದ್ರಗಣಿ, ರಾಜೇಸಾಬ ಬಾರಿಗಿಡದ, ಮಡಿವಾಳಪ್ಪ ತಳವಾರ, ಯಲ್ಲಪ್ಪಗೌಡ ಗಂದಿಗೌಡರ, ಕೃಷ್ಣಪ್ಪ ಲಮಾಣಿ, ನೆಹರು ಬಡೆಪ್ಪನವರ, ಪ್ರಕಾಶ ಲಮಾಣಿ, ವಿಠ್ಠಲ ಸಿದ್ದಕ್ಕನವರ, ಯಲ್ಲಪ್ಪಗೌಡ ಪೋಲೇಶಿ, ಅಜ್ಜಪ್ಪಗೌಡ ಪೋಲೇಶಿ, ನೀಲಪ್ಪ ಸಿದ್ದಕ್ಕನವರ, ವೈ.ವೈ. ಕಾಳಪ್ಪನವರ, ರಾಮನಗೌಡ ತಿಪರಾಶಿ, ಬಸನಗೌಡ ಪಾಟೀಲ, ಅಪ್ಪು ಕಾಳಪ್ಪನವರ, ಶಿವನಗೌಡ ಗಂದಿಗೌಡರ, ಉಮೇಶ ದಿಡಗನ್ನವರ, ರಮೇಶ ಕರೀಕಟ್ಟಿ, ನಿಂಗಪ್ಪ ಬಡೆಪ್ಪನವರ, ಶರೀಪಸಾಬ ಬಾರಿಗಿಡದ, ಸಂತೋಷ ಕಲಾಲ, ಗಣೇಶ ವಾಕೋಡಿ, ಕರೆಪ್ಪ ತಳವಾರ, ಮಹೇಶ ಚಪ್ಪರಮನಿ, ಶಂಕರಗೌಡ ರೇಣ್ಕಿಗೌಡರ, ಬುಡ್ಡೇಸಾಬ ಬಾರಿಗಿಡದ, ಮಂಜುನಾಥ ಗುಡೆನ್ನವರ ಇದ್ದರು.