ನವದೆಹಲಿ, ಜೂನ್ 19, ಬಾಲಿವುಡ್‌ನ ನಟ ಅಭಿಷೇಕ್ ಬಚ್ಚನ್ ಅವರ ಮುಂಬರುವ ವೆಬ್ ಸರಣಿ 'ಬರ್ತ್: ಇನ್ ಟು ದ ಶಾಡೋಸ್' ನ ಹೊಸ ಪೋಸ್ಟರ್ ಬಿಡುಗಡೆಯಾಗಿದೆ.'ಬರ್ತ್: ಇನ್ ಟು ದ ಶ್ಯಾಡೋಸ್' ಚಿತ್ರದ ಅಭಿಷೇಕ್ ಬಚ್ಚನ್ ತಮ್ಮ ಡಿಜಿಟಲ್ ವೇದಿಕೆಗೆ ಪ್ರವೇಶ ಮಾಡಲು ಕಾತುರರಾಗಿದ್ದಾರೆ. ಅಮೆಜಾನ್ ನಲ್ಲಿ 'ಬರ್ತ್, ಇನ್ ಟು ದ ಶಾಡೋಸ್' ಬಿಡುಗಡೆಯ ದಿನಾಂಕವನ್ನು ಕಳೆದ ವಾರ ಘೋಷಿಸಲಾಗಿತ್ತು. ಈ ಸರಣಿಯಲ್ಲಿ, ಅಮಿತ್ ಸಾಧ್ ಮತ್ತೊಮ್ಮೆ ಹಿರಿಯ ಇನ್ಸ್‌ಪೆಕ್ಟರ್ ಕಬೀರ್ ಸಾವಂತ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜುಲೈ 10, 2020 ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ. ಜನಪ್ರಿಯ ನಟರಾದ ನಿತ್ಯಾ ಮೆನನ್ ಮತ್ತು ಸಯಾಮಿ ಖೇರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಿಡುಗಡೆಯಾದ ಪೋಸ್ಟರ್ ನಲ್ಲಿ ಅಭಿಷೇಕ್, ಕಳೆದುಕೊಂಡಿರುವ ಬಾಲಕಿಯ ಹುಡುಕಾಟದಲ್ಲಿರುವಂತೆ ಕಾಣುತ್ತದೆ. "ಅಮೆಜಾನ್ ಪ್ರೈಮ್ ನಲ್ಲಿ 'ಬರ್ತ್: ಇನ್ ಟು ದಿ ಶಾಡೋಸ್' ಮೂಲಕ ಡಿಜಿಟಲ್ ವೇದಿಕೆಗೆ ಪದಾರ್ಪಣೆ ಮಾಡಲಿದ್ದೇನೆ. ನಮ್ಮ ಮೊದಲ ಡಿಜಿಟಲ್ ಸರಣಿಯನ್ನು ಪ್ರಾರಂಭಿಸಲು ನನಗೆ ಸಂತೋಷವಾಗಿದೆ. ವಿಭಿನ್ನ ಪ್ರಯತ್ನಕ್ಕೆ ಅಭಿಮಾನಿಗಳು ಸಹ ಬೆಂಬಲ ನೀಡುತ್ತಾರೆ ಎಂಬ ನಂಬಿಕೆ ಇದೆ" ಎಂದು ಅಭಿಷೇಕ್ ಬಚ್ಚನ್ ತಿಳಿಸಿದ್ದಾರೆ.