ಸಮಾಜದಲ್ಲಿ ದುರಾಚಾರ, ದುವ್ರ್ಯಸನ ಯಾರನ್ನೂ ಬಿಟ್ಟಿಲ್ಲ: ಪಂಡಿತಾರಾಧ್ಯ ಶ್ರೀಗಳು

ಲೋಕದರ್ಶನವರದಿ

ರಾಣೇಬೆನ್ನೂರು: ಸಮಾಜದಲ್ಲಿ ವೇದ ಇತಿಹಾಸ ಕಾಲಗಳಿಂದಲೂ ದುರಾಚಾರ, ದುವರ್ೆಸನ ಯಾರನ್ನು ಬಿಟ್ಟಲ್ಲ ಅದು ಚರಂಡಿಯಲ್ಲಿನ ನೀರು ಇದ್ದ ಹಾಗೆ ಅದು ಯಾವುದಕ್ಕೂ ಪ್ರಯೋಜನಕ್ಕೆ ಬರುವುದಿಲ್ಲ. ಆದರೆ ತಿಪ್ಪೆ ಪೋಷಕಾಂಶದಿಂದ ಕೂಡಿ ಗೊಬ್ಬರವಾಗಿ ಬೆಳೆಗೆ ಪೌಷ್ಟಿಕತೆಯನ್ನು ನೀಡುವ ಹಾಗೆ ಮನುಷ್ಯ ನಿತ್ಯದ ಬದುಕಿನಲ್ಲಿ ಒಳ್ಳೆಯವನಾಗಿರಬೇಕು. ಅದುವೇ ಮಾನವನ ನಿಜವಾದ ಧರ್ಮವಾಗಿದೆ ಎಂದು ಡಾ|| ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು.

ಸ್ಥಳೀಯ ಶಿವಾ ಕಾಲೇಜು ಆವರಣದಲ್ಲಿ ಶಿವಜ್ಞಾನ ಪ್ರಚಾರ ಪರಿಷತ್ತು ಆಯೋಜಿಸಿದ್ದ 78ನೇ ಮಾಸಿಕ ಶಿವಗೋಷ್ಠಿ ಧರ್ಮ ಜಾಗೃತಿ ಸಮಾರಂಭದ ಭಾಗವಹಿಸಿ ಮಾತನಾಡಿದರು. ಇಂದು ಬಹುತೇಕವಾಗಿ ಜ್ಞಾನವಂತರಿಂದಲೇ ಅನೇಕ ರೀತಿಯ ಅಪಚಾರಗಳು ನಡೆಯುತ್ತಿರುವುದು ಭಾರತೀಯ ಸಂಸ್ಕೃತಿಯ ವಿನಾಶಕ್ಕೆ ಕಾರಣವಾದಂತಾಗಿದೆ. ಇತಿಹಾಸ ಮತ್ತು ಸಂಸ್ಕೃತಿ ನಮ್ಮ ನಡೆ,ನುಡಿ, ಆಚಾರ-ವಿಚಾರ ಕಲಿಸುತ್ತದೆ.

  ಧರ್ಮದ ಆಚರಣೆಯಲ್ಲಿ ಸಾಗುವುದರ ಮೂಲಕ ಸಂಸ್ಕಾರ ಪರಂಪರೆಯನ್ನು ಮುಂದುವರಿಸಿಕೊಂಡು ಹೋದಾಗ ಮಾತ್ರ ಸದಾ ಸುಖಿಯಾಗಿರಲು ಸಾಧ್ಯವಾಗುವುದು ಎಂದರು.

ಶಿವಜ್ಞಾನ ಪ್ರಸಾರ ಪರಿಷತ್ತಿನ ಅಧ್ಯಕ್ಷ ಮಲ್ಲೇಶಪ್ಪ ಅರಕೇರಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸ ನೀಡಿ ಮಾತನಾಡಿದ ಹೊಸಪೇಟೆ ನಿವೃತ್ತ ಪ್ರಾಧ್ಯಾಪಕ ಡಾ|| ಎಸ್.ಶಿವಾನಂದ ಅವರು ಜಂಗಮ ಎಂದರೆ ಅಂತರಂಗದ ಸ್ವಾನುಭಾವ ಜಂಗಮ ಹುಟ್ಟಿನಿಂದ ಬಂದುದಲ್ಲ ಸಾಧನೆಯಿಂದ ಬರುತ್ತದೆ ಯಾರು ತನ್ನ ತಾನು ಅರಿತ ಅನುಭಾವಿಯೇ ಜಂಗಮ. ಶರಣರಂತೆ ಬದುಕಿದರೆ ದುರಾಚಾರ, ದುವರ್ೆಸನ ಬರುವುದಿಲ್ಲ. ಮನುಷ್ಯನನ್ನು ಪರಿವತರ್ಿಸುವ ಶಕ್ತಿ ವಚನಗಳಲ್ಲಿದೆ. 

     ವಚನಗಳ ಹಿಂದಿನ ಶರಣರ ಬದುಕು ಅರ್ಥಪೂರ್ಣವಾಗಿತ್ತು. ಬೇರೆಯವರನ್ನು ನಿಂದಿಸುವುದು ನನ್ನನ್ನು ನಾನು ಹೊಗಳಿಕೊಳ್ಳುವುದು ದುವರ್ೆಸನ ಎಂದು ನುಡಿದಿದ್ದಾರೆ.

         ಮರಬಸಣ್ಣ ಹೊಂಬರಡಿ, ಜಿ. ಜಿ ಹೊಟ್ಟಿಗೌಡ್ರ, ಬಿ. ಪಿ ಶಿಡೇನೂರ ಮೊದಲಾದವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಬಿ ರಾಮಪ್ಪ, ಡಾ ಎಂ ಸಿ ಬೆನಕನಕೊಂಡ, ಪಿ ದೇವೇಂದ್ರನಾಯ್ಕ ಜೆ. ಹೆಚ್. ಹೊಟ್ಟಿಗೌಡರ್, ಕೆಂಪಣ್ಣನವರ್, ಹೆಚ್ ಎಸ್ ಮಜ್ಜಗಿ ಮತ್ತಿತರರು ಉಪಸ್ಥಿತರಿದ್ದರು. ಬಿಂದು ದುರ್ಗದ ಪ್ರಾರ್ಥಸಿದರು.  ವಿ.ಪಿ. ಪೋಲಿಸ್ಗೌಡ್ರ ಸ್ವಾಗತಿಸಿದರು.  ಡಾ. ಪಿ ಆರ್ ಪದ್ಮಪ್ಪ ನಿರೂಪಿಸದರು. ಡಾ. ಹೆಚ್ ಓಂಕಾರನಾಯ್ಕ ವಂದಿಸಿದರು. ನಂತರ ನಡೆದ ದಾನೇಶ್ವರಿ ಸೊರಣಗಿ ಅವರ  ವಚನ ನೃತ್ಯ ಸಾರ್ವಜನಿಕರ ಗಮನ ಸೆಳೆಯಿತು.