ಲೋಕದರ್ಶನ ವರದಿ
ಕಾಗವಾಡ 12: ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣದಲ್ಲಿಯ ಋಗ್ನ ಸೇವಾ ಮಂಡಳದ ಆ್ಯಂಬ್ಯೂಲೆನ್ಸ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಧಗಧಗ ಎಂದು ಉರಿದು, ಸುಟ್ಟು ಕರಕಳಾದ ಘಟಣೆ ಸಂಭವಿಸಿದೆ.
ಉಗಾರ ಖುರ್ದ ಪಟ್ಟಣದಲ್ಲಿ ಋಗ್ನ ಸೇವಾ ಮಂಡಳದ ಕೆ.ಎ.22.ಎ.2868 ಈ ಆ್ಯಂಬ್ಯೂಲೆನ್ಸ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿತು. ಇದನ್ನು ಕಂಡು ಸ್ಥಳೀಯರು ಇನ್ನೂಳಿದವರಿಗೆ ಮಾಹಿತಿ ನೀಡಿ, ಧಾವಿಸಿ ಉಗಾರ ಸಕ್ಕರೆ ಕಾರ್ಖಾನೆಯ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಬಳೀಕ ಸ್ಥಳಕ್ಕೆ ಬಂದು ಅಗ್ನಿ ನೊಂದಿಸುವ ಸಮಯದಲ್ಲಿ ಆ್ಯಂಬ್ಯೂಲೆನ್ಸ್ ಸುಟ್ಟ ಕರಕಲಾಗಿತ್ತು.
ಸನ್ 2003ರಲ್ಲಿ ಆಗೀಣ ಸಂಸದ ರಮೇಶ ಜಿಗಜಿಣಗಿ ಇವರು ಮಾಜಿ ಶಾಸಕ ರಾಜು ಕಾಗೆ ಇವರ ಶಿಫಾರಸ ಮೇರಿಗೆ ಉಗಾರ ಖುರ್ದ ಪಟ್ಟಣಕ್ಕೆ ಸರಕಾರ ವತಿಯಿಂದ ಈ ಆ್ಯಂಬ್ಯೂಲೆನ್ಸ್ ನೀಡಿದ್ದರು. ಋಗ್ನ ಸೇವಾ ಮಂಡಳದ ಕಾರ್ಯದರ್ಶಿ ಮಹಾದೇವ ಕಳೆ, ಆ್ಯಂಬ್ಯೂಲೆನ್ಸ್ ಚಾಲಕ ರಿಯಾಜ್ ಬಿಜಾಪುರೆ ಇವರು ವಿಶೇಷವಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಕಳೇದ 20 ವರ್ಷಗಳಿಂದ ಉಚಿತವಾಗಿ ಸೇವೆ ನೀಡುತ್ತಾ ಬಂದಿದ್ದಾರೆ. ಇಲ್ಲಿಯ ಮತ್ತು ಹೊರ ಗ್ರಾಮಗಳಿಂದ ಅಪಘಾತದಲ್ಲಿ ಗಾಯಗೊಂಡವರನ್ನು ತುರಂತವಾಗಿ ಸಾಗಿಸಲು ಈ ಆ್ಯಂಬ್ಯೂಲೆನ್ಸ್ದಿಂದ ವಿಶೇಷ ಸಹಾಯವಾಗಿದೆ.ಇದರಿಂದ ಅನೇಕರ ಪ್ರಾಣ ಕಾಪಾಡಿದೆ.
ಗ್ರಾಮದಲ್ಲಿ ನಿಧನವಾದ ಯಾವುದೇ ಜಾತಿಯ ಶವದ ಅಂತ್ಯಸಂಸ್ಕಾರ ಮಾಡಲು ಎಲ್ಲ ಯುವಕರು ಒಂದುಗುಡಿ ಶವದ ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ. ಇದೇ ರೀತಿ ಈ ಆ್ಯಂಬ್ಯೂಲೆನ್ಸ್ ಮುಖಾಂತರ ಅಪಘಾತ ಸಂಭವಿಸಿದ ಮಾಹಿತಿ ತಿಳಿದ ನಂತರ ಚಾಲಕ ರಿಯಾಜ್ ಬಿಜಾಪುರೆ ಕೂಡಲೆ ಆ್ಯಂಬ್ಯೂಲೆನ್ಸ್ ತೆಗೆದುಕೊಂಡು ಸ್ಥಳಕ್ಕೆ ಧಾವಿಸಿ ಸಾವಿರಾರು ಘಾಯಾಳುಗಳ ಪ್ರಾಣ ಕಾಪಾಡಿದ ಇದೇ ಆ್ಯಂಬ್ಯೂಲೆನ್ಸ್ವಾಗಿತ್ತು. ಇದು ಈಗ ಸುಟ್ಟು ಕರಕಳವಾಗಿದ್ದರಿಂದ ಜನರಲ್ಲಿ ಆತಂಕ ಮೂಡಿಸಿದೆ.
ಈ ಬಗ್ಗೆ ಕಾಗವಾಡ ಪೊಲೀಸ್ ಠಾಣೆಯಲ್ಲಿ ಮಹಾದೇವ ಕಳೆ ದೂರು ಸಲ್ಲಿಸಿದ್ದು, ಪಿಎಸ್ಐ ಹನಮಂತ ಶಿರಹಟ್ಟಿ ತನಿಖೆ ಕೈಗೊಂಡಿದ್ದಾರೆ.