ನೇಸರಗಿ 13: ಗ್ರಾಮದ ಸುರೇಶ ನವಲಗಟ್ಟಿ ಹಾಗೂ ಶ್ರೀಮತಿ ಉಷಾ ನವಲಗಟ್ಟಿ ಅವರ ಸುಪುತ್ರ ಸಿದ್ದೇಶ ಸುರೇಶ ನವಲಗಟ್ಟಿ ಇತನು ಬೈಲಹೊಂಗಲದ ಖಾಸಗತೇಶ್ವರ ಶಿಕ್ಷಣ ಸಂಸ್ಥೆಯ ಆಕ್ಸ್ಫರ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿ ಮಾರ್ಚ ತಿಂಗಳಿನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕಗಳಲ್ಲಿ 619 ಅಂಕ ಪಡೆದು 99.04 ಅ ಪಡೆದು ಅಪಾರ ಸಾಧನೆ ಮಾಡಿದ್ದಾನೆ.
ಈತನ ಸಾಧನೆಗೆ ಮೆಚ್ಚಿ ಮಂಗಳವಾರದಂದು ಬಾಲಕನ ಮನೆಗೆ ಗ್ರಾಮದ ಪ್ರಮುಖರು ಭೇಟಿ ನೀಡಿ ಮುಂದಿನ ಉಜ್ವಲ ವ್ಯಾಸಂಗಕ್ಕೆ ಶುಭ ಕೋರಿ ಸತ್ಕರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ವೀರಭದ್ರ ಚೋಭಾರಿ, ಗ್ರಾಂ ಪಂ ಸದಸ್ಯರಾದ ಮಲ್ಲಿಕಾರ್ಜುನ ಸೋಮಣ್ಣವರ, ತೇಜಪ್ಪಗೌಡ (ಸಂಗು) ಪಾಟೀಲ,ಸುರೇಶ ಅಗಸಿಮನಿ, ಡಾ. ಮಡಿವಾಳಯ್ಯ ಚರಂತಿಮಠ ಸೇರಿದಂತೆ ಅನೇಕರು ಇದ್ದರು.