ಯಮಕನಮರಡಿ 13: ಸೋಮವಾರ ದಿನಾಂಕ 12 ರಂದು ಪ್ರತಿ ವರ್ಷದಂತೆ ಈ ವರ್ಷವು ಯಮಕನಮರಡಿಯ ಶ್ರೀ ಮಡ್ಡಿ ವೀರಭದ್ರೇಶ್ವರ ಜಾತ್ರಾ ನಿಮಿತ್ಯಪ್ರಸಾದ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು.
ದೇವರ ಪ್ರಸಾದ ಕಾರ್ಯಕ್ರಮದಲ್ಲಿ ಸುತ್ತ ಮುತ್ತಲಿನ ಗ್ರಾಮಸ್ಥರು ಅತ್ಯಂತ ಶೃದ್ಧಾ ಭಕ್ತಯಿಂದ ಪಾಲ್ಗೊಂಡು ತನು ಮನ ಧನದಿಂದ ದೇವರ ಸೇವೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು.