ಸರಕು ವಾಹನಗಳಲ್ಲಿ ಪ್ರಯಾಣಿಕರ ಸಾಗಣೆ ವಿರುದ್ಧ ಕ್ರಮ

ಗದಗ 9 :  ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವುದು ಕಾನೂನು ಬಾಹಿರವಾಗಿದ್ದು  ಇದನ್ನು ತಡೆಗಟ್ಟಿ ಅಪಘಾತಗಳ ಪ್ರಮಾಣ ಕಡಿಮೆ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನಿದರ್ೇಶನ ನೀಡಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಜಿಲ್ಲಾ ರಸ್ತೆ ಸುರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಸರಕು ಸಾಗಣೆ ವಾಹನಗಳಲ್ಲಿ ಕೂಲಿ ಕಾಮರ್ಿಕರನ್ನು, ಶಾಲಾ ಕಾಲೇಜು ವಿಧ್ಯಾಥರ್ಿಗಳನ್ನು ಕರೆದೊಯ್ಯವದರ ವಿರುದ್ಧ ಕೈಗೊಳ್ಳುವ ಕ್ರಮಗಳ ಕುರಿತು ಸಭೆಯಲ್ಲಿ ಚಚರ್ಿಸಲಾಯಿತು. 

      ಜಿಲ್ಲೆಯಲ್ಲಿ ಹೆಚ್ಚಿನ ಜನ ಸೇರುವ ಸಂದರ್ಭಗಳಲ್ಲಿ,  ಜಾತ್ರೆ ಹಾಗೂ ಸಂತೆಗಳು ಜರುಗುವ ಪ್ರದೇಶಗಳ  ಮಾಹಿತಿ ಪಡೆದು ಅಗತ್ಯದ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು.  ನಿಗದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ಆಟೋಗಳಲ್ಲಿ ಸಾಗಾಣಿಕೆ ಮಾಡುವದನ್ನು ತಡೆಗಟ್ಟಲು ಸಂಬಂಧಿತ ಶಾಲಾ ಮುಖ್ಯಸ್ಥರೊಂದಿಗೆ ಚಚರ್ಿಸಿ ಮಕ್ಕಳ ಪಾಲಕರಿಗೂ ಈ ಕುರಿತು ಜಾಗೃತಿ ಮೂಡಿಸಲು ಅಧಿಕಾರಿಗಳು  ಕ್ರಮ ಜರುಗಿಸಿ  ಸಾರ್ವಜನಿಕರಲ್ಲಿ  ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿಗಳು ಎಂ.ಜಿ.ಹಿರೇಮಠ ತಿಳಿಸಿದರು.

ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ಮಾತನಾಡಿ ಯಾವುದೇ ಕಾರಣಕ್ಕೂ ಆಟೋ ರಿಕ್ಷಾಗಳಲ್ಲಿ 6 ಕ್ಕಿಂತ ಹೆಚ್ಚಿನ ಶಾಲಾ ಮಕ್ಕಳನ್ನು ಸಾಗಿಸಿದ್ದಲ್ಲಿ ಅವರುಗಳ ವಿರುದ್ಧ ಕಾನೂನಿನ ರೀತ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು. 

      ಶಿಕ್ಷಣ ಇಲಾಖೆಯು ನಗರದ ಎಲ್ಲ ಶಾಲಾ ಪ್ರಾಂಶುಪಾಲರ ಜೊತೆ ಈ ಕುರಿತು ಚಚರ್ಿಸಿ ನಿದರ್ೇಶನ ನೀಡಿ ರಸ್ತೆ ಸುರಕ್ಷಾ ನಿಯಮಗಳನ್ನು ಪಾಲಿಸಲು ಆಟೋ ಹಾಗೂ ಶಾಲಾ ವಾಹನಗಳಿಗೆ ಸೂಕ್ತ ನಿದರ್ೇಶನ ನೀಡಲು ತಿಳಿಸಿದರು. ಆಟೋ ಮಾಲಿಕರು ನಿಗದಿಗಿಂತ ಹೆಚ್ಚಿನ ಸಂಖ್ಯೆಯ  ಮಕ್ಕಳನ್ನು ಆಟೋಗಳಲ್ಲಿ ಸಾಗಾಣೆ ಮಾಡದಂತೆ ಜಾಗೃತಿ ಮೂಡಿಸಬೇಕು.

        ನಿಯಮಗಳನ್ನು ಪಾಲಿಸದೇ ಇರುವ ಆಟೋಗಳ ವಿರುದ್ಧ ನಿದರ್ಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವದು. ಆಟೋ, ಮ್ಯಾಕ್ಸಿ ಕ್ಯಾಬ ಹಾಗೂ ಲಾರಿ ಮಾಲಿಕರ ಸಂಘದ ಪದಾಧಿಕಾರಿಗಳು ಈ ಕುರಿತು ಅಗತ್ಯದ ಜಾಗೃತಿ ಮೂಡಿಸಬೇಕು. ಬೆಳಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಗರದಲ್ಲಿ ಸುಗಮ ಸಂಚಾರಕ್ಕೆ ಅನೂಕೂಲವಾಗಲು ಲಾರಿಗಳ ನಗರ ಪ್ರವೇಶವನ್ನು ನಿರ್ಭಂದಿಸಲಾಗುವುದು. 

     ನಗರದ ಎಲ್ಲ ವೃತ್ತಗಳನ್ನು ಅಭಿವೃದ್ಧಿ ಪಡಿಸುವದರ ಜೊತೆಗೆ ರಸ್ತೆ ಉಬ್ಬುಗಳಿರುವಲ್ಲಿ ಅಗತ್ಯದ ಫಲಕಗಳನ್ನು ಅಳವಡಿಸಲು ಕ್ರಮ ಜರುಗಿಸಲು ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಸೂಚಿಸಿದರು.

ಗದಗ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿನಯಾ ಕೋಟಲೂರ ಆರ್, ಪೋಲಿಸ ಇಲಾಖೆ, ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಆಟೊ, ಮ್ಯಾಕ್ಸಿ ಕ್ಯಾಬ ಹಾಗೂ ಲಾರಿ ಮಾಲಿಕರ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.