ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಆಧ್ಯತೆ-ಕಟಕಧೋಂಡ

Adhyaya-Katakadhonda for all-round development of the field

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಆಧ್ಯತೆ-ಕಟಕಧೋಂಡ

ಚಡಚಣ 03: ಪಟ್ಟಣವನ್ನು ಮಾದರಿಯನ್ನಾಗಿಸುವದರ ಜೋತೆಗೆ  ಕ್ಷೇತ್ರದ ಸರ್ವಾಂಗೀಣ ಅಭೀವೃದ್ಧಿಗೆ ಪ್ರಥಮ ಆದ್ಯತೆ ನೀಡುವೆ ಎಂದು  ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಹೇಳಿದರು. 

ಪಟ್ಟಣದ ಹೊರ ವಲಯದಲ್ಲಿ ಚಡಚಣ- ಉಮದಿ ರಸ್ತೆ ಡಾಂಬರೀಕರಣ ಹಾಗೂ ಚಡಚಣದಿಂದ ಶಿರಾಡೋಣದ ವರೆಗಿನ ರಸ್ತೆ ಸುಧಾರಣೆ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.ಚಡಚಣದಿಂದ ಉಮದಿವರೆಗಿನ ರಸ್ತೆ ದುರಸ್ತಿ 5 ಕೋಟಿ ಹಾಗೂ ಚಡಚಣ-ಶಿರಾಡೋಣವರೆಗೆ ಸುಮಾರು 4 ಕೋಟಿ ವೆಚ್ಚದಲ್ಲಿ  ರಸ್ತೆ ಸುದಾರಣೆ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು ಮಾರ್ಚ ಅಂತ್ಯದವರೆಗೆ ಕಾಮಗಾರಿಗಳು ಮುಕ್ತಾಯಗೊಳ್ಳಲಿವೆ. ಇದಲ್ಲದೆ ಸುಮಾರು 4 ಕೋಟಿ ವೆಚ್ಚದಲ್ಲಿ ಚಡಚಣ-ಶಿರಾಡೋಣ ರಸ್ತೆ ಸುದಾರಣಾ ಕಾಮಗಾರಿಯನ್ನು ಕೈಕೊಳ್ಳಗಾಗುತ್ತಿದೆ ಎಂದ  ಅವರು,. ಪಟ್ಟಣದಲ್ಲಿ ಮಿನಿ ವಿದಾನಸೌದ ನಿರ್ಮಾಣ ಕಾಮಗಾರಿ ಶೀಘ್ರದಲ್ಲಿ ಕೈಗೊಳ್ಳಲಾಗುವದು,  

ಬಸ್ ಡಿಪೋ, ಅಗ್ನಿಶಾಮಕ ಠಾಣೆ  ಪ್ರಾರಂಭಿಸಲು ಕ್ರಮ ಕೈಕೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಚಡಚಣ ಮಂಡಲ ಅಧ್ಯಕ್ಷ ಆರಿ​‍್ಡ.ಹಕ್ಕೆ ಮುಖಂಢರಾದ,ಬಾಬುಗೌಡ ಪಾಟೀಲ,  ರವಿದಾಸ ಜಾಧವ, ಪರಮಾನಂದ ಕೋಳಿ, ದ್ಯಾವಪ್ಪ ಪಾಟೀಲ,ರಫೀಕ ಮಕಾನದಾರ, ಸಂಗಪ್ಪ ಭಂಡರಕವಟೆ, ಡಾ.ವಿ.ಎಸ್‌.ಪತ್ತಾರ, ಪ,ಪಂ ಮುಖ್ಯಾಧಿಕಾರಿ ಪೂಜಾರಿ,ಸದಸ್ಯ ಪ್ರಕಾಶಗೌಡ ಪಾಟೀಲ,ಪಟ್ಟಣ ಪಂಚಾಯ್ತಿ ಸದಸ್ಯರು, ಲೋಕೊಪಯೋಗಿ ಇಲಾಖೆ ಅಧಿಕಾರಿಗಳು