ರಾಣಿಬೆನ್ನೂರು 06 : ಮನುಷ್ಯ ಶಾಂತಿ ಮತ್ತು ನೆಮ್ಮದಿ ಇಂದಿನ ಅಗತ್ಯವಿದ್ದು ಆರೋಗ್ಯಯುತ ಜೀವನ ಮತ್ತು ಸುಧೀರ್ಘ ಬದುಕಿಗೆ ಯೋಗ ಧ್ಯಾನ ಪ್ರಾಣಾಯಾಮ ಇಂದಿನ ಅಗತ್ಯವಿದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಶ್ರೀ ಪ್ರಕಾಶನಂದೀಜೀ ಮಹಾರಾಜ್ ಹೇಳಿದರು.
ಅವರು, ಸೋಮವಾರ ಶ್ರೀ ಆದಿಶಕ್ತಿ ದೇವಸ್ಥಾನದ ಭವನದಲ್ಲಿ, ಜಿಲ್ಲಾ ಪತಂಜಲಿ ಯೋಗ ಸಮಿತಿ ಆಯೋಜಿಸಿದ್ದ, ಅಡ್ವಾನ್ಸ್ ಯೋಗ ತರಬೇತಿ ಶಿಬಿರದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಇತಿಹಾಸದಲ್ಲಿ ನಮ್ಮ ಪೂರ್ವಜರು ಋಷಿಮುನಿಗಳು ನೂರಾರು ವರ್ಷಗಳ ಕಾಲ ಬದುಕಿ ಬಾಳಿದ್ದಾರೆಂದರೆ ಅದಕ್ಕೆ, ಅವರು ಅಂದು ಅಳವಡಿಸಿಕೊಂಡಿದ್ದ ಯೋಗ ಧ್ಯಾನ ಪ್ರಾಣಾಯಾಮವೇ ಮುಖ್ಯ ಕಾರಣವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ, ಈಶ್ವರಿ ಯ ವಿಶ್ವವಿದ್ಯಾಲಯದ ಬಿ.ಕೆ.ಮಾಲತಿಜಿ ಅಕ್ಕ ಅವರು, ಸಮಾಜದಲ್ಲಿ ಶಾಂತಿ ನೆಮ್ಮದಿ ಮತ್ತು ಆರೋಗ್ಯ ಇದ್ದರೆ ಜೀವನ ಬದುಕು ಸುಂದರ. ನೆಮ್ಮದಿಯ ಜೀವನ ಬದುಕಿಗೆ ಇಂತಹ ಯೋಗ ಶಿಬಿರಗಳು ಅಳವಡಿಸಿಕೊಳ್ಳುವುದು ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ರವೀಂದ್ರ ಬಿಜಾಪುರ, ಬಿಎಸ್ಟಿ ಅಧ್ಯಕ್ಷ ಆರ್ ಎನ್ ರಾಥೋಡ, ಶ್ರೀಮತಿ ವಜ್ರೇಶ್ವರಿ ಲದ್ವಾ, ಆರ್. ಬಿ. ಪಾಟೀಲ್, ಕೆ.ಜಿ. ದಿವಾಕರಮೂರ್ತಿ, ಪಾರ್ವತಿ ಹುಲಿಹಳ್ಳಿ, ಶಿವಾನಂದ ಬಡೇಂಕಲ್, ಪ್ರಕಾಶ್ ಚಂದ್ರಶೇಖರ ಮಠ, ಸೇರಿದಂತೆ ನೂರಾರು ಯೋಗ ಸಾಧಕರು ಉಪಸ್ಥಿತರಿದ್ದರು. ಲಲಿತಾ ಮೇಲಗಿರಿ ಪ್ರಾರ್ಥಿಸಿದರು. ಯೋಗ ಸಾಧಕ ಕೆ.ಸಿ. ಕೋಮಲಾಚಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಗ ಶಿಕ್ಷಕ ಆರ್. ಬಿ. ಪಾಟೀಲ್ ನಿರೂಪಿಸಿ, ವಂದಿಸಿದರು. ಇಂದಿನಿಂದ ಆರಂಭವಾಗಿರುವ ತರಬೇತಿ ಶಿಬಿರವು ಒಂದು ತಿಂಗಳ ಕಾಲ ನಡೆಯಲಿದೆ ಇಂದು ಅಡ್ವಾನ್ಸ್ ಯೋಗ ತರಬೇತಿ, ಶಿಬಿರದ ಪ್ರಾತ್ಯಕ್ಷಿಕೆ ಕುರಿತು, ಉತ್ತರ ಕರ್ನಾಟಕ ಪತಂಜಲಿ ಸಹ ಪ್ರಭಾರಿ ಕಾರಟಗಿಯ ಶರಣಬಸಪ್ಪ ಚಟ್ನಳ್ಳಿ ಅವರು, ಯೋಗ ಪ್ರಾತ್ಯಕ್ಷಿಕೆ ನೀಡಿದರು. ಪತಂಜಲಿ ಯೋಗ ಸಮಿತಿ, ಭಾರತ್ ಸ್ವಾಭಿಮಾನ ಟ್ರಸ್ಟ್ ಮಹಿಳಾ ಪತಂಜಲಿ ಯೋಗ ಸಮಿತಿ, ಯುವ ಭಾರತ್, ಕಿಸಾನ್ ಸೇವಾ ಸಮಿತಿ ಯಶಸ್ವಿಗೆ ಸಹಯೋಗ ನೀಡಿದೆ.