ರೈತ ಬಾಂಧವರಿಗೆ ಸಲಹೆ
ಗದಗ 31: ರೈತರು ಕಟಾವು ಮಾಡಿದ ಕೃಷಿ ಉತ್ಪನ್ನಗಳನ್ನು ರಾತ್ರಿ ಮಇಬ್ಬನಿ/ ಮಂಜಿನಿಂದ ರಕ್ಷಿಸಲು ಪ್ಲಾಸ್ಟಿಕ್ ಹಾಳೆಗಳಿಂದ ಮುಚ್ಚಲು ಸಲಹೆ ನೀಡಲಾಗಿದೆ.
ಜೋಳ ಮತ್ತು ಮೆಕ್ಕೆಜೋಳ ಬೆಳೆಗಳ ಬೆಳವಣಿಗೆ ಹಂತದಲ್ಲಿ ಸೈನಿಕ ಹುಳುವಿನ ನಿ0ುಂತ್ರಣಕ್ಕಾಗಿ, 2 ಗ್ರಾಂ ಇಮಾಮೆಕ್ಟಿನ ಬೆಂಝೇ0ೆುಟ ಅಥವಾ 4.0 ಮಿ. ಲೀ. ಫೈನೋಟೆರಾನ್ 10 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಮೊದಲೇ ಬಿತ್ತಿದ ತೊಗರಿ ಬೆಳೆ ಕೊ0ು್ಲು ಹಂತದಲ್ಲಿದ್ದು ಕಟಾವನ್ನು ಪೂರ್ಣಗೊಳಿಸಿ ಮತ್ತು ಬಿಸಿಲಿನಲ್ಲಿ ಒಣಗಿಸಬೇಕು. ಕಾಯಿಕೊರಕ (ಹೆಲಿಕೋವರ್ಾ) ನಿರ್ವಹಣೆಗಾಗಿ ಕ್ಲೋರಂಟ್ರಾನಿಲಿಪ್ರೋಲ್ 0.15 ಮಿ. ಲೀ. ಅಥವಾ ಇಂಡಾಕ್ಸಿಕಾರ್ಬ 0.3 ಗ್ರಾಂ ಸಿಂಪಡಿಸಬೇಕು.
ಕುಸುಬೆ0ುಲ್ಲಿ ಬೆಳವಣಿಗೆಯಿಂದ ಹೂವಾಡುವ ಹಂತದಲ್ಲಿ ರಸ ಹೀರುವ ಕೀಟದ ನಿರ್ವಹಣೆಗಾಗಿ 0.2 ಗ್ರಾಂ ಥೈ0ಾಮಿಥಾಕ್ಸಾಮ್ 25 ಡಬ್ಲೂ.ಜಿ. ಅಥವಾ 1.0 ಗ್ರಾಂ ಅಸಿಫೇಟ್ 75 ಎಸ್.ಪಿ. ಅಥವಾ 1.7 ಮಿ.ಲೀ. ಡೈಮಿಥೊ0ೆುಟ್ 30 ಇ.ಸಿ. ಪ್ರತಿ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಕಡಲೆ0ುಲ್ಲಿ 30-40 ದಿನದ ಬೆಳೆ ಇದ್ದಾಗ ಕುಡಿ ಚಿವುಟುವುದರಿಂದ ಇಳುವರಿ ಹೆಚ್ಚಲು ಅನುಕೂಲವಾಗುವುದು. ಪಲ್ಸ್ ಬೂಸ್ಟರ್ ನ್ನು ಶೇ. 25 ರಷ್ಟು ಹೂವಾಡುವ ಸಮ0ುದಲ್ಲಿ 10ಗ್ರಾಂ./ಲೀ ನಂತೆ ಬೆಳೆಗೆ ಸಿಂಪರಣೆ ಮಾಡಿದರೆ ಹೆಚ್ಚಿನ ಇಳುವರಿ ಪಡೆ0ುಲು ಸಹಕಾರಿ0ಾಗುತ್ತದೆ. ಪಲ್ಸ್ ಬೂಸ್ಟರ್ ಕೃಷಿ ವಿಶ್ವ ವಿದ್ಯಾಲ0ು, ಧಾರವಾಡದಲ್ಲಿ ಲಭ್ಯವಿರುತ್ತದೆ.
ಪ್ರಸಕ್ತ ವರ್ಷ ಕಡಲೆ ಬೆಳೆ0ುಲ್ಲಿ ಸಿಡಿ ರೋಗದ ಪ್ರಮಾಣ ಸ್ವಲ್ಪ ಜಾಸ್ತಿ ಕಂಡುಬಂದಿದೆ. ಮುಂಗಾರಿ0ುಲ್ಲಿ ಹೆಸರು, ಶೇಂಗಾ ಬೆಳೆದ ಜಮೀನಿನಲ್ಲಿ ಹೆಚ್ಚಾಗಿ ಕಂಡು ಬಂದಿದ್ದು ರೈತರು ಬೆಳೆ ಪರಿವರ್ತನೆ (ಏಕದಳ-ದ್ವಿದಳ/ ದ್ವಿದಳ- ಏಕದಳ ) ಮಾಡಿದಲ್ಲಿ ಹಾಗೂ ಬೀಜೋಪಚಾರ ಕೈಗೊಂಡಲ್ಲಿ ಸುಲಭವಾಗಿ ನಿರ್ವಹಣೆ ಮಾಡಬಹುದಾಗಿದೆ.
ಬೆಳೆಗಳ ನಿ0ುಮಿತ ಪರೀವೀಕ್ಷಣೆ ಕೈಗೊಂಡು, ಕಾಲಕಾಲಕ್ಕೆ ಬೇಕಾಗುವ ಸಸ್ಯ ಸಂರಕ್ಷಣಾ ಕ್ರಮಗಳನ್ನು ಹಾಗೂ ಬೆಳೆಗಳಿಗೆ ಬೇಕಾದ ಪೋಷಕಾಂಶ ನಿರ್ವಹಣೆ0ುನ್ನು ಕೈಗೊಳ್ಳಲು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆ0ುಲ್ಲಿ ತಿಳಿಸಿದ್ದಾರೆ.