ಗ್ರಾಹಕರು ಜಾಗೃಕತೆಯಿಂದ ವಸುಗಳನ್ನು ಖರಿದಿಸಲು ಮುಂದಾಗಿ: ನ್ಯಾಯಧಿಶ ಅರವಿಂದ ಹಾಗರಗಿ

Advise consumers to buy vasus with caution: Justice Aravinda

ಗ್ರಾಹಕರು ಜಾಗೃಕತೆಯಿಂದ ವಸುಗಳನ್ನು ಖರಿದಿಸಲು ಮುಂದಾಗಿ:  ನ್ಯಾಯಧಿಶ ಅರವಿಂದ ಹಾಗರಗಿ

ವಿಜಯಪುರ 24 : ನಾವು ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಿದಲ್ಲಿ ನಾವು ಖರೀದಿಸಿದ ವಸ್ತುವಿಗೆ ಗ್ರಾಹಕರಾಗುತ್ತೇವೆ ಖರೀದಿಸಿದ ವಸ್ತು ನಿಖರತೆಯಿಂದ ಕೂಡಿರಬೇಕು. ಎಂದು ಹಿರಿಯ ಸಿವಿಲ್ ನ್ಯಾಯಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅರವಿಂದ ಹಾಗರಗಿ ಹೇಳಿದರು.  

 ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆಹಾರ ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಅಂಜುಮನ್ ಕಾನೂನು ಮಹಾವಿದ್ಯಾಲಯ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಆಹಾರ ಸುರಕ್ಷಾ ಇಲಾಖೆ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಹಾಗೂ ಜಿಲ್ಲಾ ಮಾಹಿತಿ ಕೇಂದ್ರ ನ್ಯೂ ಸಂಸ್ಥೆ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಗ್ರಾಹಕರೆ ರಾಜರು ಗ್ರಾಹಕರೆ ದೇವರು ಎಂಬ ಘೋಷ ವಾಕ್ಯದೊಂದಿದೆ ರಾಷ್ಟ್ರೀಯ ಗ್ರಾಹಕರ ದಿನಾಚರಣೆ 2024 ಕುರಿತು ಗ್ರಾಹಕ ನ್ಯಾಯದಲ್ಲಿ ವರ್ಚುವಲ್ ಅಹವಾಲು ಆಲಿಸುವಿಕೆ ಮತ್ತು ಡಿಜಿಟಲ್ ಪ್ರವೇಶಾವಕಾಶ ಕುರಿತು ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ನಾವು ಪಡೆಯುವ ಸೇವೆಗಳು ನಮಗೆ ತೃಪ್ತಿಯಿಂದ ಕೂಡಿರಬೇಕು ನಮಗೆ ದೋಷಪೂರಿತ ಸರಕುಗಳು, ಸೇವೆಗಳಲ್ಲಿನ ಕೊರತೆ ಮತ್ತು ಅನ್ಯಾಯದ ವ್ಯಾಪಾರ ಪದ್ಧತಿಗಳಂತಹ ವಿವಿಧ ರೀತಿಯ ಶೋಷಣೆಗಳ ವಿರುದ್ಧ ಗ್ರಾಹಕರಿಗೆ ಪರಿಣಾಮಕಾರಿ ರಕ್ಷಣೆಯನ್ನು ಒದಗಿಸುವುದು ಗ್ರಾಹಕ ಸಂರಕ್ಷಣಾ ಕಾಯಿದೆಯ ಉದ್ದೇಶವಾಗಿದೆ. ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ ಮತ್ತು ಇದರೊಂದಿಗೆ ಅವರು ವಂಚನೆ, ಬ್ಲಾಕ್ ಮಾರ್ಕೆಟಿಂಗ್ ಇತ್ಯಾದಿಗಳಿಗೆ ಬಲಿಯಾಗಿದ್ದರೆ ಅವರು ಅದರ ಬಗ್ಗೆ ದೂರು ನೀಡಬಹುದು ಎಂದು ಅವರು ಹೇಳಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಹಾರ ಸುರಕ್ಷತಾ ಅಧಿಕಾರಿಗಳಾದ ಆರ್‌.ಎಸ್ ಬಿರಾದಾರ ಮಾತನಾಡಿ ಪ್ರತಿಯೊಬ್ಬ ಸಾರ್ವಜನಿಕರು ವಿತರಣೆ ಹಾಗೂ ಪಡೆದುಕೊಳ್ಳುವ ಕಾರ್ಯದಲ್ಲಿ ತೊಡಗಿರುತ್ತಾರೆ. ನಮಗೆ ಇಷ್ಟ ಬಂದ ಹಾಗೆ ವಸ್ತುಗಳನ್ನು ಪಡೆದುಕೊಳ್ಳುವ ಹಕ್ಕು ನಮ್ಮದಾಗಿದೆ ಯಾವುದೇ ವಸ್ತುಗಳನ್ನು ಖರೀದಿಸುವ ಮುಂಚೆ ಇಲಾಖೆಗಳ ಮಾಡದಂಡಗಳನ್ನು ಗಮನದಲ್ಲಿಟ್ಟು ಖರಿದಿಸಬೇಕು ಗ್ರಾಹಕರ ಗ್ರಾಹಕರ ಆರೋಗ್ಯದ ಹಿತ ದೃಷ್ಟಿಯಿಂದ ಕಲಬೆರಿಕೆಯಿಂದ ಕೂಡಿದ ವಸ್ತುಗಳನ್ನು ಖರೀದಿಸಬೇಡಿ ಹಾಗೂ ಈ ಕುರಿತು ಇಲಾಖೆಗಳ ಕೈಪಿಡಿಗಳಲ್ಲಿರುವ ಮಾಹಿತಿ ತಮಗೆ ತಿಳಿದಿಬೇಕು ಒಂದು ವೇಳೆ ವಿತರಕರು ಹಕ್ಕುಗಳನ್ನು ಮೀರಿ ವರ್ತಿಸಿದಲ್ಲಿ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿ ತಮ್ಮ ಪ್ರಕರಣಗಳನ್ನು ಇತ್ಯರ್ಥ ಪಡೆದಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು. 

ನ್ಯಾಯವಾದಿ ಹಾಗೂ ಬಳಕೆದಾರರ ಸಂಘದ ಅಧ್ಯಕ್ಷರಾದ ಎಮ್‌.ಜಿ ಮಠಪತಿ ಕಾರ್ಯಕ್ರಮದ ಅತಿಥಿ ಉಪನ್ಯಾಸಕರಾಗಿ ಮಾತನಾಡಿ ಕೋವಿಡ್ ಸಮಯದಲ್ಲಿ ಆರಂಭವಾದ ಡಿಜಿಟಲ್ ವ್ಯವಹಾರ ದೇಶದ ಆರ್ಥಿಕತೆಗೆ ಬಹಳ ಅನುಕೂಲವಾಗಿದೆ. ವರ್ಚುವಲ್ ಮೂಲಕ ಕೋರ್ಟಗಳಲ್ಲಿ ವೀಡೀಯೋ ಸಂವಾದಗಳ ಮೂಲಕ ವ್ಯಾಜ್ಯಗಳನ್ನು ಬಗೆಹರಿಸಲಾಗುತ್ತಿದೆ ಇದರಿಂದ ಸಾಕಷ್ಟು ಸಮಯ ಅಲೆದಾಡುವುದನ್ನು ಕೂಡ ತಪ್ಪಿಸಬಹುದಾಗಿದೆ ಆನ್‌ಲೈನ್ ಹಾಗೂ ವರ್ಚುವಲ್ ಮೂಲಕ ವ್ಯವಹರಿಸುವಾಗಿ ಬಹಳ ಎಚ್ಚರಿಕೆಯಿಂದ ವಸ್ತುಗಳನ್ನು ಖರಿದಿಸಬೇಕು ಇದರಲ್ಲಿಯೂ ಬಹಳಷ್ಟು ಮೋಸ, ವಂಚನೆಗಳು ಕಂಡು ಬಂದಿವೆ ಆದುದರಿಂದ ಗ್ರಾಹಕರು ಎಚ್ಚರಿಕೆಯಿಂದ ವಸ್ತುಗಳನ್ನು ಖರೀದಿಸಬೇಕು ಎಂದು ಅವರು ಹೇಳಿದರು. 

ಜಿಲ್ಲಾ ಗ್ರಾಹಕರ ದೂರು ಪರಿಹಾರ ಆಯೋಗದ ಪ್ರಭಾರ ಅಧ್ಯಕ್ಷರಾದ ವಿದ್ಯಾ ಗಲಗಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮಲ್ಲಿ ನಂಬಿಕೆ ಆತ್ಮ ವಿಶ್ವಾಸ ಕಡಿಮೆಯಾಗುತ್ತಿರುವುದರಿಂದ ಮೋಸ ವಂಚನೆಗಳು ನಡೆಯುತ್ತಿವೆ. ಪ್ರತಿಯೊಬ್ಬ ಗ್ರಾಹಕರು ತಮ್ಮ ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ಅರಿತಿಬೇಕು. ಬೆಳೆಯುತ್ತಿರುವ ಮಾರುಕಟ್ಟೆಯ ಗ್ರಾಹಕ ಸಂಖ್ಯೆ ಹೆಚ್ಚಳವಾಗಿದೆ ಆದರೆ ಗ್ರಾಹಕರಲ್ಲಿ ಇನ್ನೂ ಅರಿವಿನ ಕೊರತೆ ಇದೆ. ಸರಕುಗಳ ಕಲಬೆರಕೆ, ತಮ್ಮನ್ನು ಮೂರ್ಖರನ್ನಾಗಿಸಲು ಇತರರನ್ನು ವಂಚಿಸುವುದು, ಗರಿಷ್ಠ ಲಾಭ ಗಳಿಸಲು ಉದ್ಯಮಿಗಳು ಅನೈತಿಕ ವಿಧಾನಗಳನ್ನು ಅನುಸರಿಸಿ ಮೋಸ ಮಾಡುವುದು, ತಪ್ಪು ಮತ್ತು ಸುಳ್ಳು ಜಾಹೀರಾತುಗಳ ಮೂಲಕ ಜನರನ್ನು ಮರುಳು ಮಾಡುವ ಪ್ರವೃತ್ತಿ ಬಹಳಷ್ಟು ಹೆಚ್ಚಾಗಿದೆ.ಅಂತಹ ಪರಿಸ್ಥಿತಿಯಲ್ಲಿ, ಗ್ರಾಹಕರು ಅನೇಕ ಸಮಸ್ಯೆಗಳನ್ನು ಮತ್ತು ತೊಂದರೆಗಳನ್ನು ಎದುರಿಸುತ್ತಿದ್ದು ಗ್ರಾಹಕರನ್ನು ಶೋಷಣೆಯಿಂದ ರಕ್ಷಿಸುವ ಸಲುವಾಗಿ, ಗ್ರಾಹಕ ಸಂರಕ್ಷಣಾ ಕಾಯ್ದೆ 1986 ಅನ್ನು 24 ಡಿಸೆಂಬರ್ 1986 ರಂದು ಜಾರಿಗೊಳಿಸಲಾಯಿತು ಇದರೊಂದಿಗೆ ಗ್ರಾಹಕರಿಗೆ ಮೂಲಭೂತ ಸೌರ್ಕರ್ಯಗಳು ಹಾಗೂ ತರಬೇತಿ ಅತ್ಯಶ್ಯಕವಾಗಿವೆ. ಸಾರ್ವಜನಿಕರಲ್ಲಿ ಜನ ಜಾಗೃತಿ ಮೂಡಿಸುವಂತಹ ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಆಯೋಜಿಸಬೇಕು ಎಂದು ಅವರು ಹೇಳಿದರು. 

ಆಹಾರ ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಉಪ ನಿರ್ದೇಶಕರಾದ ವಿನಯಕುಮಾರ ಪಾಟೀಲ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ನ್ಯೂ ಸಂಸ್ಥೆಯ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಅಧ್ಯಕ್ಷರಾದ ಎಸ್‌.ಎಮ್ ಕರೇಕಲ್, ಅಂಜುಮನ್ ಕಾನೂನು ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ.ಸಂತೋಷ ನಾಗಠಾಣ, ಆಹಾರ ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ವ್ಯವಸ್ಥಾಪಕರಾದ ಅಮರೇಶ ತಾಂಡೂರ, ಆಹಾರ ಶಿರಸ್ತೇದಾರರಾದ ಸಿ.ಎಸ್ ಚಿತ್ತಾಪುರ, ಆಹಾರ ನೀರೀಕ್ಷಕರಾದ ವಿಜಯಕುಮಾರ ಗುಮಶೆಟ್ಟಿ, ಎನ್‌.ಎಮ್ ಅತ್ತಾರ, ಸಹಾಯಕ ನಿರ್ದೇಶಕರಾದ ಮಲ್ಲಿಕಾರ್ಜುನ ಅರಕೇರಿ, ನಾಮದೇವ ಚವ್ಹಾಣ, ಅಂಜುಮನ್ ಕಾನೂನು ಮಹಾವಿದ್ಯಾಲಯ ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ಆಹಾರ ಸುರಕ್ಷತೆ ಕರಿತು ಕಿರು ಪುಸ್ತಕ ಬಿಡುಗಡೆಗೊಳಿಸಲಾಯಿತು.