ಸಂಬರಗಿ, 22: ಕಳೆದ ಮೂರು ದಿನಗಳಿಂದ ಗಡಿ ಗ್ರಾಮಗಳಲ್ಲಿ ಸತತ ಸುರಿದ ಮಳೆಯಿಂದ ಮುಂಗಾರಿ ಬಿತ್ತನೆಯು ಚುರುಕುಗೊಂಡಿದ್ದು, ರೈತರು ಬೀಜ ಖರೀದಿಗೆ ಅನೇಕ ಗೊಬ್ಬರ ಅಂಗಡಿಗೆ ರೈತರು ಸಂಪರ್ಕಿಸಿ ದರವನ್ನ ಪರೀಶೀಲನೆ ಮಾಡುತ್ತಿದ್ದಾರೆ. ರೈತ ಸಂಪರ್ಕ ಕೇಂದ್ರಕ್ಕೆ ಸೋಮವಾರದಿಂದ ಬೀಜ ವಿತರಣೆ ಮಾಡಲು ಕೃಷಿ ಇಲಾಖೆ ಸಜ್ಜಾಗಿದೆ.
ಗಡಿ ಭಾಗದ ಮೂವತ್ತು ಗ್ರಾಮಗಳಲ್ಲಿ ಮಳೆ ಇದ್ದರೆ ಬೆಳೆ, ಮಳೆಯಾದರೆ ಮುಂಗಾರು ಬಿತ್ತಾನ ಮಾಡುತ್ತಾರೆ. ಈ ವರ್ಷ ನಿಗದಿತ ಅವಧಿಗಿಂತ ಮುಂಚಿತವಾಗಿ ಮಳೆ ಪ್ರಾರಂಭವಾಗಿದ್ದು, ಕಳೆದ ಮೂರು ದಿನದಿಂದ ಭಾರಿ ಮಳೆ ಸುರಿದ ಪರಿಣಾಮವಾಗಿ ರೈತರಿಗೆ ಅನುಕೂಲವಾಗಿದೆ. ರೈತರು ತೊಗರಿ, ಶೇಂಗಾ, ಹೆಸರು, ಸೋಯಾಬಿನ್, ಹುರಳಿ, ಉದ್ದು, ಮೆಕ್ಕೆಜೋಳ, ಸಜ್ಜೆ, ಕಬ್ಬು ಈ ಬೆಳೆಯನ್ನು ಪ್ರಮುಖವಾಗಿ ಮುಂಗಾರಿ ಹಂಗಾಮಿನಲ್ಲಿ ಬಿತ್ತುತ್ತಾರೆ. ಗಡಿ ಗ್ರಾಮಗಳಲ್ಲಿ ಉದ್ದು ಹಾಗೂ ಶೇಂಗಾ ಪ್ರಮುಖ ಬೆಳೆ ಇರುತ್ತವೆ. ಕಳೆದ ವರ್ಷ ಉದ್ದು ಬೆಳೆಗೆ 70-90ರ ವರೆಗೆ ಪ್ರತಿ ಕೇಜಿಗೆ ದರ ಸಿಕ್ಕ ಕಾರಣ ರೈತರು ಈ ಬೆಳೆಕಡೆಗೆ ಹೆಚ್ಚಿನ ಒಲವು ತೋರಿಸಿದ್ದಾರೆ. ಸರ್ಕಾರ ರೈತರಿಗೆ ರಿಯಾಯಿತಿಯ ದರದಲ್ಲಿ ಬೀಜ ವಿತರಣೆ ಮಾಡಲು ಸಜ್ಜಾಗಿದೆ. ಮಳೆಯಿಂದ ರೈತರು ತಮ್ಮ ಜಮೀನಿಗೆ ಅವಶ್ಯಕ ಗೊಬ್ಬರ ಹಾಕಿ ಹಾಗೂ ಜಮೀನಿನ ಉಳಿಮೆ ಮಾಡಿ ರೈತರು ಬೀಜದ ದಾರಿ ಕಾಯುತ್ತಿದ್ದಾರೆ.
ಇತ್ತೀಚಿಗೆ ಗ್ರಾಮೀಣ ಪ್ರದೇಶದಲ್ಲಿ ಜೋಡೆತ್ತುಗಳ ಸಂಖ್ಯೆ ಕಡಿಮೆ ಆದ ಕಾರಣ ರೈತರು ಟ್ರ್ಯಾಕ್ಟರ್ ಮುಖಾಂತರ ಜಮೀನ ಉಳಿಮೆ ಮಾಡಿದ್ದಾರೆ. ಜಮೀನ 1 ಗಂಟೆಗೆ ಎಂಟು ರೂಪಾಯಿದಿಂದ ಒಂದು ಸಾವಿರದ ವರೆಗೆ ಆದರೆ ಜೋಡೆತ್ತುಗಳಿಂದ ಉಳಿಮೆ ಮಾಡಲು ಒಂದು ಎಕರೆ ಜಮೀನಿಗೆ ಎರಡು ಸಾವಿರದಿಂದ ಮೂರು ಸಾವಿರ ರೂಪಾಯಿ ಬಾಡಿಗೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಜೋಡೆತ್ತು ಹಾಗೂ ಟ್ರ್ಯಾಕ್ಟರ್ ಇದ್ದ ರೈತರು ತಮ್ಮ ಜಮೀನಿನ ಕೆಲಸ ಮುಗಿದ ನಂತರ ಬೇರೆ ಕಡೆ ಬಾಡಿಗೆ ಹೋಗುತ್ತಾರೆ. ಸಾಮಾನ್ಯವಾಗಿ ಟ್ರ್ಯಾಕ್ಟರ್ ಹಾಗೂ ಜೋಡೆತ್ತುಗಳು ಇಲ್ಲದ ರೈತರಿಗೆ ಭಾರಿ ತೊಂದರೆಯಾಗುತ್ತಿದೆ. ರೈತರು ಮುಂಗಾರಿ ಬಿತ್ತನೆಗೆ ಸಜ್ಜಾಗಿದ್ದಾರೆ.
ಖಿಳೇಗಾಂವ, ಅನಂಪೂರ, ಸಂಬರಗಿ, ಶಿರೂರ, ತಾಂವಶಿ, ಬೆವನೂರ, ಕಲ್ಲೊತ್ತಿ, ಮದಬಾವಿ, ಚಮಕೇರಿ, ಬೇಡರಹಟ್ಟಿ, ಅರಳಿಹಟ್ಟಿ, ಜಕ್ಕಾರಟ್ಟಿ, ವಿಷ್ಟುವಾಡಿ, ಸಿದ್ದೆವಾಡಿ ಈ ಸುತ್ತಮುತ್ತಲಿನ ಗ್ರಾಮಗಳಲ್ಲಿ ಉದ್ದಿನ ಬಿತ್ತನೆ ಹೆಚ್ಚುತ್ತಿದೆ. ಕಳೆದ ವರ್ಷ ಕೃಷಿ ಇಲಾಖೆ ಮಾಹಿತಿ ಪ್ರಕಾರ ಕಳೆದ ವರ್ಷ ಎಂಟು ನೂರು ಟನ್ ಉದ್ದಿನ ಬೆಳೆ ಉತ್ಪಾದನೆಯಾಗಿದೆ. ದರ ಹೆಚ್ಚು ಸಿಕ್ಕ ಕಾರಣ ರೈತರು ಈ ಬೆಳೆಯ ಕಡೆಗೆ ಹೆಚ್ಚಿನ ಒಲವು ತೋರಿಸಿದ್ದಾರೆ. 2025-26ನೇ ಸಾಲಿನಲ್ಲಿ ಮುಂಗಾರಿ ಬಿತ್ತನೆಗೆ ಕೃಷಿ ಇಲಾಖೆ ಸಜ್ಜಾಗಿದೆ.
ಈ ಕುರಿತು ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ನಿಂಗಣ್ಣ ಬಿರಾದಾರ ಇವರನ್ನು ಸಂಪರ್ಕಿಸಿದಾಗ ಈ ವರ್ಷ ಮುಂಗಾರಿ ಬೆಳೆ ಬಿತ್ತಾನ ಸುಮಾರು 1,41,743 ಹೆಕ್ಟರ್ ಗುರಿ ಹೊಂದಿದ್ದೆವೆ. 26 ರಂದು ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಿಸಲು ಪ್ರಾರಂಭ ಮಾಡಲಾಗುವುದು ಎಂದು ಹೇಳಿದರು.