ಬೆಳಗಾವಿ : ಹುಕ್ಕೇರಿ ತಾಲೂಕು ಸಹಕಾರಿ ವಿದ್ಯುತ್ ಸಂಘದ ಚುಕ್ಕಾಣಿ ಹಿಡಿಯಲು ನಡೆದಿರುವ ಕ್ಲೇ ಮ್ಯಾಕ್ಸ್ ಈಗ ಕೊನೆಯ ಹಂತ ತಲುಪಿದ್ದು, ಗುರುವಾರ ಈ ಬಗ್ಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ನೇತ್ರತ್ವದಲ್ಲಿ 11 ನಿರ್ದೇಶಕರ ಸಭೆ ನಡೆಸಲಾಗಿದೆ.
ಹುಕ್ಕೇರಿ ವಿದ್ಯುತ್ ಸಂಘದ ಅಧ್ಯಕ್ಷ ಕಲಗೌಡಾ ಪಾಟೀಲ ಅವರ ವಿರುದ್ದ ಅವಿಶ್ವಾಸ ಗೊತ್ತುವಳಿಯನ್ನು ಮಂಡನೆಯ ಮಂಡಿಸಲು ಅವಕಾಶ ನೀಡುವಂತೆ ಅರ್ಜಿ ಸಲ್ಲಿಸಿದ್ದ 11 ಜನ ನಿರ್ದೇಶಕರು ಕಳೆದ ಕೆಲವು ದಿನಗಳಿಂದ ದೂರ ಉಳಿದುಕೊಂಡಿದ್ದರು.
ಬಳಿಕ ಮೇ. 23ರಂದು ಅವಿಶ್ವಾಸ ಮಂಡನೆಗೆ ದಿನಾಂಕ ನಿಗಧಿಯಾಗಿತ್ತು. ಬಳಿಕ ಕಳೆದ ಹಲವಾರು ದಿನಗಳಿಂದ ಅಜ್ಞಾತ ಸ್ಥಳದಲ್ಲಿದ್ದ 11 ಜನ ನಿರ್ದೇಶಕರು ಕೊನೆಗೆ ಗುರುವಾರ ರಾತ್ರಿ ಬೆಳಗಾವಿಯ ಖಾಸಗಿ ಹೊಟೇಲ್ ನಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಮಾಜಿ ಸಂಸದ ಅಣ್ಣಸಾಹೇಬ ಜೊಲ್ಲೆ ಅವರ ನೇತ್ರತ್ವದಲ್ಲಿ ಸಭೆ ಸೇರಿದ 11 ಜನ ನಿರ್ದೇಶಕರು ಅವಿಶ್ವಾಸ ಮಂಡನೆ ಕುರಿತು ಚರ್ಚೆ ನಡೆಸಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಕತ್ತಿ ಕುಟುಂಬದ ಹಿಡಿತದಲ್ಲಿರುವ ಹುಕ್ಕೇರಿ ತಾಲೂಕು ಸಹಕಾರಿ ವಿದ್ಯುತ್ ಸಂಘದ ಚುಕ್ಕಾಣಿ ಹಿಡಿಯಲು ಶಾಸಕ ಬಾಲಚಂದ್ರ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ನಡೆಸಿದ ಕ್ಲೇ ಮ್ಯಾಕ್ಸ್ ಈಗ ಕೊನೆಯ ಹಂತ ತಲುಪಿದ್ದು, ದಿ. 23ರಂದು ನಡೆಯಲಿರುವ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸುವ ನಿಟ್ಟಿನಲ್ಲಿ 11 ನಿರ್ದೇಶಕರ ಸಭೆಯನ್ನು ಮಾಡಿದ್ದಾರೆ.