ಅಹಿಲ್ಯಾಬಾಯಿ ಹೊಳಕರ ಜಯಂತಿ: ಡೊಳ್ಳು ಕುಣಿತ ಕಾರ್ಯಕ್ರಮ

Ahilyabai Holkar Jayanti: Dollu Kunita program

50 ಸಾವಿರಕ್ಕಿಂತ ಹೆಚ್ಚು ಜನ ಪಾಲ್ಗೊಂಡು ಗಿನ್ನಿಸ್ ದಾಖಲೆ ಗುರಿ 

ಸಂಬರಗಿ 10: ಮಹಾರಾಷ್ಟ್ರದ ಪುಣೆಯಲ್ಲಿ ಮೇ 11ರಂದು ನಡೆಯುತ್ತಿರುವ ಅಹಿಲ್ಯಾಬಾಯಿ ಹೊಳಕರ ಜಯಂತಿ ನಿಮಿತ್ಯವಾಗಿ ಡೊಳ್ಳು ಕುಣಿತ ಕಾರ್ಯಕ್ರಮಕ್ಕೆ ಗಡಿ ಭಾಗದಿಂದ ಸುಮಾರು 5 ಸಾವಿರಕ್ಕಿಂತ ಹೆಚ್ಚು ಜನ ಪಾಲ್ಗೊಳ್ಳುತ್ತಾರೆಂದು ಹಾಲು ಮತ ಸಮಾಜದ ಮುಖಂಡರಾದ ಭರತ ಮಾನೆ ಹೇಳಿದರು. 

ಅಬ್ಬಿಹಾಳ ಗ್ರಾಮದಲ್ಲಿ ಗುರುವಾರ ಸುದ್ಧಿಗಾರರೊಂದಿಗೆ ಮಾತನಾಡಿ ಅವರು ಜತ್ತ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಿಚಂದ ಪಡೋಳಕರ ಇವರ ನೇತೃತ್ವದಲ್ಲಿ ಅಹಿಲ್ಯಾಬಾಯಿ ಹೋಳಕರ ಇವರ ಜಯಂತಿ ನಿಮಿತ್ಯವಾಗಿ ದೇಶದ ವಿವಿಧ ರಾಜ್ಯಗಳಿಂದ 50 ಸಾವಿರಕ್ಕಿಂತ ಹೆಚ್ಚು ಜನ ಪಾಲ್ಗೊಂಡು ಗಿನ್ನಿಸ್ ದಾಖಲೆ ಮಾಡುವ ಗುರಿ ಹೊಂದಿದ್ದಾರೆ. ಆ ಕಾರಣ ನಾವು ಬೆಳಗಾವಿ ಜಿಲ್ಲೆಯಲ್ಲಿ ವಿವಿಧ ತಾಲೂಕಿನ ಹಾಲುಮತ ಸಮಾಜದ ಮುಖಂಡರು ಭೇಟಿಯಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಅಂತಾ ವಿನಂತಿ ಮಾಡಿಕೊಳ್ಳುತ್ತೇನೆ. ಹಾಲು ಮತ ಸಮಾಜ ಒಕ್ಕಟ್ಟು ಎಷ್ಟಿದೆ ಎಂದು ಈ ಕಾರ್ಯಕ್ರಮದ ಮೂಲಕ ತೋರಿಸಲಾಗುವುದು.  

ಮಹಾರಾಷ್ಟ್ರದಲ್ಲಿ ಹಾಲು ಮತ ಸಮಾಜದ ಮುಖಂಡರಾದ ಗೋಪಿಚಂದ ಪಡೋಳಕರ ಇವರು ಸಮಾಜಕ್ಕಾಗಿ ಸತತವಾಗಿ ಹೋರಾಡುತ್ತಿದ್ದಾರೆ. ಅವರು ಸಮಾಜವನ್ನು ಒಗ್ಗೂಡಿಸುತ್ತಾರೆ. ಈ ಕಾರ್ಯಕ್ರಮ ವಿಶ್ವದಲ್ಲಿ ಹಿಂದು ಆಗಿರಬಾರದು ಮುಂದು ಆಗಬಾರದು ಈ ತರಹ ಐತಿಹಾಸಿಕ ಕಾರ್ಯಕ್ರಮ ನಡೆಯುತ್ತಿದೆ.  

ಹಾಲು ಮತ ಸಮಾಜದ ಮಾಯನಟ್ಟಿ ಗ್ರಾಮದ ಮುಖಂಡರಾದ ಸದಾಶಿವ ನಾಯ್ಕ, ಬಂಡು ನಾಯ್ಕ, ಹೂವಣ್ಣ ಮಾನೆ, ಶಂಕರ ಅವಘಡೆ, ರಮೇಶ ಕಾಂಬಳೆ ಉಪಸ್ಥಿತ ಇದ್ದರು.