ಧಾರವಾಡ 12: ಇಂದು ಧಾರವಾಡ ರಂಗಾಯಣವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಟ್ರಸ್ಟ್ಗಳ ಸಹಯೋಗದಲ್ಲಿ “ನಮ್ಮ ಸಂವಿಧಾನ ನಮ್ಮ ಕಲರವ” ಧ್ಯೇಯವಾಕ್ಯದಡಿ ಹಮ್ಮಿಕೊಂಡಿದ್ದ ಚಿಣ್ಣರಮೇಳದಲ್ಲಿ ಪ್ರಥಮ ಮಹಿಳಾ ಕವಿಯತ್ರಿಯಾದ ಅಕ್ಕಮಹಾದೇವಿ ಜಯಂತಿ ಹಾಗೂ ಹನುಮಾನ್ ಜಯಂತಿಯನ್ನು ಆಚರಿಸಲಾಯಿತು.
ರಂಗಾಯಣ ನಿರ್ದೇಶಕರಾದ ಡಾ. ರಾಜು ತಾಳಿಕೋಟಿ ಅವರು ಅಧ್ಯಕ್ಷತೆ ವಹಿಸಿ, ಚಿಕ್ಕ ವಯಸ್ಸಿನಲ್ಲಿಯೇ ಸಕಲ ಸುಖವನ್ನು ತ್ಯಜಿಸಿ, ಚೆನ್ನಮಲ್ಲಿಕಾರ್ಜುನನ್ನು ತನ್ನ ಪತಿಯೆಂದು ಸ್ವೀಕರಿಸಿ, ಲೌಖಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ವಚನ ಸಾಹಿತ್ಯದಲ್ಲಿ ಗುರುತಿಸಿಕೊಂಡು ಮಾದರಿಯಾಗಿದ್ದಾಳೆ. ಸ್ತ್ರೀವಾದಿ ಚಳುವಳಿಯ ಪ್ರತಿಪಾದಕಿಯಾಗಿ ಪ್ರಮುಖ ಸ್ಥಾನವನ್ನು ಪಡೆದು ಹಲವಾರು ವಚನಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅಕ್ಕಮಹಾದೇಯು ಅಂದಿನ ಕಾಲದಲ್ಲಿ ತೋರಿದ ದಿಟ್ಟತನ, ಶ್ರದ್ಧೆ, ವೈಚಾರಿಕ ಮನೋಭಾವನೆ ಇಂದಿನ ಸಮಾಜಕ್ಕೂ ಮಾದರಿಯಾಗಬೇಕು ಎಂದು ಮಕ್ಕಳಿಗೆ ಅಕ್ಕಮಹಾದೇವಿ ಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಬೆಕ್ಕೇರಿ, ಶಿಬಿರದ ನಿರ್ದೇಶಕರಾದ ಲಕ್ಷ್ಮಣ ಪೀರಗಾರ, ನಾಟಕ ನಿರ್ದೇಶಕರು, ಸಹ ನಿರ್ದೇಶಕರು, ರಂಗಾಯಣದ ಸಿಬ್ಬಂದಿ ಸೇರಿದಂತೆ ಇತರರು ಇದ್ದರು. ನಂತರ ರಾಘವ ಕಮ್ಮಾರ ಅವರು ಅಕ್ಕಮಹಾದೇವಿ ಅವರು ವಚನವನ್ನು ಮಕ್ಕಳಿಗೆ ಹಾಡಿಸಿದರು. ಚಿಣ್ಣರಮೇಳದ ಮಕ್ಕಳಾದ ವೈವಿಧ್ಯ ಹಾಗೂ ವಿನ್ಮಯಿ ಅಕ್ಕಮಹಾದೇವಿಯ ವೇಷಭೂಷಣವನ್ನು ಧರಿಸಿ ಗಮನ ಸೆಳೆದರು. ಮಕ್ಕಳು ಅಕ್ಕಮಹಾದೇವಿಯ ವಚನಗಳನ್ನು ಪ್ರಸ್ತುತಪಡಿಸಿದರು.