ತಾಲೂಕ ಪಂಚಾಯತ ಕಛೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

Ambedkar Jayanti Celebration at Taluka Panchayat Office

ತಾಲೂಕ ಪಂಚಾಯತ  ಕಛೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಕುಕನೂರು 15: ತಾಲೂಕ ಪಂಚಾಯತ  ಕಛೇರಿಯಲ್ಲಿ ಸಮಾನತೆಯ ಹರಿಕಾರ, ಮಾನವತಾವಾದಿ, ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.  ತಾಲೂಕ ಪಂಚಾಯತ ಯೋಜನಾಧಿಕಾರಿಗಳು ಆನಂದ ಗರೂರ ಮಾತನಾಡಿ ಡಾ. ಬಿ.ಆರ್ ಅಂಬೇಡ್ಕರ್ ರವರು ವಿದ್ಯಾವಂತರಾಗಿ, ಸಂಘಟಿತರಾಗಿ ಮತ್ತು ಉತ್ತೇಜಿತರಾಗಿ ಎಂದು ಯುವಕರಿಗೆ ಮಾರ್ಗದರ್ಶನ ಮಾಡಿ  ಸಮಾನತೆಗಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟ ಅವರ ಜೀವನಾದರ್ಶಗಳನ್ನು ಪಾಲಿಸೋಣ ಎಂದರು. ಜಯಂತಿ ಆಚರಣೆ ಸಮಾರಂಭದಲ್ಲಿ  ತಾಲೂಕು ಯೋಜನಾಧಿಕಾರಿಗಳಾದ ಆನಂದ ಗರೂರ ಹಾಗೂ ತಾ.ಪಂ ಯಲ್ಲಪ್ಪ ನಿಡಶೇಷಿ, ಚೆನ್ನಬಸಪ್ಪ ಸಣ್ಣಕರಡದ್, ಲಕ್ಷ್ಮಣ ಕೆರಳ್ಳಿ ಸಿಬ್ಬಂದಿ ಹಾಜರಿದ್ದರು.