ಮುಂಬೈ, ಆಗಸ್ಟ್ 3 ಬಾಲಿವುಡ್ ನಟರಾದ ಅಮಿರ್ ಖಾನ್ ಹಾಗೂ ಅಕ್ಷಯ್ ಕುಮಾರ್ ಅಭಿನಯದ ಚಿತ್ರಗಳು ಒಂದೇ ದಿನ ಬಿಡುಗಡೆಗೊಳ್ಳಲಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ಗುದ್ದಾಡಲು ಸಜ್ಜಾಗಿವೆ. ಅಕ್ಷಯ್ ಕುಮಾರ್ ಅವರ 'ಬಚ್ಚನ್ ಪಾಂಡೆ' ಹಾಗೂ ಅಮರ್ ಖಾನ್ ಅವರ 'ಲಾಲ್ ಸಿಂಗ್ ಚಡ್ಡಾ' ಎರಡು ಚಿತ್ರಗಳು ಒಂದೇ ದಿನ ತೆರೆಗೆ ಬರಲಿವೆ. 'ಕ್ರಿಸ್ ಮಸ್' ಹಬ್ಬದಂದು ಬಿಡುಗಡೆಗೊಳ್ಳುತ್ತಿರುವ ಈ ಚಿತ್ರಗಳು ಗಲ್ಲಾ ಪೆಟ್ಟೆಗೆಯ ಗಳಿಕೆ ಮೇಲೆ ಒಂದು ಇನ್ನೊಂದರ ಮೇಲೆ ಪರಿಣಾಮ ಬೀರಲಿವೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅಕ್ಷಯ್, ವರ್ಷದಲ್ಲಿ 52 ಶುಕ್ರವಾರಗಳು ಬರುತ್ತವೆ. ಅದರಲ್ಲಿ ವಿಕೇಂಡ್ ಕೂಡ ಇದೆ. ಪ್ರತಿ ವರ್ಷ 200 ಹಿಂದಿ ಚಿತ್ರಗಳು ತೆರೆ ಬರುತ್ತಿದ್ದು, ಕೆಲ ದಕ್ಷಿಣ ಭಾರತದ ಹಾಗೂ ಸ್ಥಳೀಯ ಚಿತ್ರಗಳು ಇದರಲ್ಲಿ ಒಳಗೊಂಡಿವೆ. ಈ ಸಂದರ್ಭದಲ್ಲಿ ದೊಡ್ಡ ಮಟ್ಟದ ಚಿತ್ರಗಳು ಬಿಡುಗಡೆಗೊಳ್ಳುವುದು ಸಂತಸದ ವಿಷಯ ಎಂದಿದ್ದಾರೆ. 'ಬಚ್ಚನ್ ಪಾಂಡೆ' ತಮಿಳಿನ ಸೂಪರ್ ಹಿಟ್ 'ವೀರಂ' ಚಿತ್ರದ ರಿಮೇಕ್. ಅದೇ 'ಲಾಲ್ ಸಿಂಗ್ ಚಡ್ಡಾ' ಹಾಲಿವುಡ್ ನ ಸೂಪರ್ ಹಿಟ್ ಚಿತ್ರ 'ಫಾರೇಸ್ಟ್ ಗಂಪ್' ರಿಮೇಕ್ ಆಗಿದೆ.