ಲೋಕದರ್ಶನವರದಿ
ಧಾರವಾಡ,1 : ನಗರದ ಹಿರಿಯ ಸಾಹಿತಿ, ಸಂಶೋಧಕ ಡಾ.ಸಂಗಮೇಶ ಸವದತ್ತಿಮಠ ಅವರಿಗೆ 75 ವಸಂತಗಳು ಪೂರ್ಣಗೊಂಡ ಸಂದರ್ಭದಲ್ಲಿ ಅವರ ತವರು ಜಿಲ್ಲೆಯಾಗಿರುವ ಬೆಳಗಾವಿಯ ಕೇಂದ್ರ ಸ್ಥಾನದಲ್ಲಿರುವ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಡಾ. ಸವದತ್ತಿಮಠ ಅವರ ಅಮೃತ ಮಹೋತ್ಸವವನ್ನು ಹುಕ್ಕೇರಿ ಹಿರೇಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ ಸಾನಿಧ್ಯದಲ್ಲಿ ರವಿವಾರ (ಮಾರ್ಚ 3 ರಂದು) ಸಂಜೆ 6 ಗಂಟೆಗೆ ಮಠದ ಸುವಿಚಾರ ಚಿಂತನ ಬಳಗ ಹಮ್ಮಿಕೊಂಡಿದೆ.
ಭಾಷಾವಿಜ್ಞಾನ, ಸಂಶೋಧನೆ, ಸೃಜನಶೀಲ ಸಾಹಿತ್ಯ ಅಲ್ಲದೆ ವೀರಶೈವ ಧರ್ಮ, ವಚನಸಾಹಿತ್ಯ ಕುರಿತು ಪ್ರೊ.ಸವದತ್ತಿಮಠ ಅವರ ಕಾಣಿಕೆ ಅಮೋಘ. ಶಿಕ್ಷಕ ವೃತ್ತಿಯೊಂದಿಗೆ ಸಂಶೋಧನೆ, ಸಾಹಿತ್ಯ, ಸಮಾಜ, ಧರ್ಮ, ಸಂಸ್ಕೃತಿ, ಸಂಘಟನೆಗಳಲ್ಲಿ ಎಡೆಬಿಡದ ಸೇವೆ ಅನನ್ಯವಾದುದು. 120ಕ್ಕೂ ಹೆಚ್ಚು ಸಂಖ್ಯೆಯ ಮೌಲಿಕ ಗ್ರಂಥಗಳು, 200ಕ್ಕೂ ಹೆಚ್ಚು ಸಂಶೋಧನ ಪ್ರಬಂಧಗಳು, ಇವರ ಬರವಣಿಗೆಯ ಅಗಾಧತೆ ಮತ್ತು ವಿದ್ವತ್ತಿನ ಘನತೆಯನ್ನು ಸಾಕ್ಷೀಕರಿಸುತ್ತದೆ.
ರಾಜ್ಯಸಭಾ ಸದಸ್ಯರಾದ ಡಾ.ಪ್ರಭಾಕರ ಕೋರೆ ಸಮಾರಂಭ ಉದ್ಘಾಟಿಸಲಿದ್ದು, ಸಂಸದ ಸುರೇಶ ಅಂಗಡಿ ಅಧ್ಯಕ್ಷತೆವಹಿಸುವರು. ಧಾರವಾಡ ಕನರ್ಾಟಕ ಕಾಲೇಜಿನ ಪ್ರಾಧ್ಯಾಪಕಿ ಡಾ. ನೇತ್ರಾವತಿ ಹಿರೇಮಠ ಬರೆದ 'ಡಾ.ಸಂಗಮೇಶ ಸವದತ್ತಿಮಠ : ಬದುಕು-ಬರಹ' ಎಂಬ ಕೃತಿಯನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಲೋಕಾರ್ಪಣೆಗೊಳಿಸುವರು. ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಶಾಸಕ ಅನಿಲ್ ಬೆನಕೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ರಾಣಿ ಚೆನ್ನಮ್ಮ ವಿ.ವಿ. ಸಹಾಯಕ ಪ್ರಾಧ್ಯಾಪಕಿ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಡಾ.ಸಂಗಮೇಶ ಸವದತ್ತಿಮಠ ಅವರನ್ನು ಕುರಿತು ಅಭಿನಂದನಾಪರ ಭಾಷಣ ಮಾಡುವರು. ಸುವಿಚಾರ ಚಿಂತನ ಬಳಗದ ವಿರೂಪಾಕ್ಷಯ್ಯ ನೀರಲಿಗಿಮಠ, ನಗರದ ಹಿರಿಯ ವರ್ತಕ ರವೀಂದ್ರ ವಸ್ತ್ರದ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಗಣ್ಯರು ಹಾಗೂ ಡಾ.ಸವದತ್ತಿಮಠರ ವಿದ್ಯಾಥರ್ಿ-ಶಿಷ್ಯ ಬಳಗ ಮತ್ತು ಅಭಿಮಾನಿಗಳು ಪಾಲ್ಗೊಳ್ಳುವರೆಂದು ಸುವಿಚಾರ ಚಿಂತನ ಬಳಗದ ಪ್ರಕಟಣೆ ತಿಳಿಸಿದೆ.