ವೈಚಾರಿಕ ಸಾಹಿತ್ಯ ಕೃತಿಗಳ ಅವಲೋಕನ ಹೆಚ್ಚಾಗಬೇಕಿದೆ

ಲೋಕದರ್ಶನ ವರದಿ

ಧಾರವಾಡ : ಮೇ., 12- ಆರ್.ಎಲ್.ಎಸ್. ಪದವಿಪೂರ್ವ ಕಾಲೇಜ್ದ ಸಭಾಂಗಣದಲ್ಲಿ ನಡೆದ ಸ.ರಾ.ಸುಳಕೂಡೆಯವರ ವೈಚಾರಿಕ ಕೃತಿ "ಸಮಕಾಲೀನ ಮನೋಧರ್ಮ ಮತ್ತು ಬದುಕಿನ ಸಾತತ್ಯ -ಸವಾಲುಗಳು" ಗೃಂಥಾವಲೋಕನ ಕಾರ್ಯಕ್ರಮ ಜರುಗಿತು. ಅಧ್ಯಕ್ಷತೆಯನ್ನು ವಹಿಸಿದ ಬೆಳಗಾವಿ ಜಿಲ್ಲಾ ಕ.ಸಾ.ಪ ಅಧ್ಯಕ್ಷರಾದ ಮಂಗಳಾ ಮೆಟಗುಡ್ಡ ಇವರು-ವಿಧ್ಯೆಗಿಂತ ವಿವೇಕ ಬಹಳ ಮುಖ್ಯ. ಇಂದು ಆಥರ್ಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸಮಸ್ಯೆಗಳ ಕುರಿತು ಬೆಳಕು ಬೀರುವಂತ ಕೃತಿ ಇದಾಗಿದೆ ಮತ್ತು ಪ್ರಸ್ತುತ ಸಮಾಜವನ್ನು ಕತ್ತಲಿಂದ ಬೆಳಕಿನೆಡೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ  ಜನರಲ್ಲಿ ಜಾಗೃತಿ ಮೂಡಿಸುವಂತಹ ಕೃತಿಗಳು ಬಹಳ ಕಡಿಮೆ ಎಂದು ಅಭಿಪ್ರಾಯಪಟ್ಟರು. ಸಾಮಾಜಿಕ ಅರಿವು ಮೂಡಿಸುವಂತಹ ವೈಚಾರಿಕ ಕೃತಿಗಳ ಅವಲೋಕನ ಕಾರ್ಯಗಳು ಹೆಚ್ಚು ನಡೆಯಬೇಕೆಂದು ಹೇಳಿದರು. 

ಗ್ರಂಥಾವಲೋಕನ ಮಾಡಿದ ಡಾ.ಶರಣಮ್ಮ ಗೋರೆಬಾಳ ಅವರು "ಧಾಮರ್ಿಕ ಮತ್ತು ವೃಚಾರಿಕ ಚಿಂತನೆ" ಕುರಿತು ಮಾತನಾಡುತ್ತ ಈ ಕೃತಿ ಮತ್ತು ಕೃತಿಕಾರರ ಮೇಲೆ ಶರಣರ ವಚನ ಸಾಹಿತ್ಯದ ಪ್ರಭಾವ ದಟ್ಟವಾಗಿರುವುದು ಕಂಡು ಬರುತ್ತದೆ ಎಂದು ವಿಚಾರಗಳನ್ನು ಮಂಡಿಸಿದರು.

ಡಾ. ಸಂಗಮ್ಮ ಪರಡ್ಡಿಯವರು "ಶೈಕ್ಷಣಿಕ ಮತ್ತು ಸಾಮಾಜಿಕ ವಿಚಾರಗಳು" ವಿಷಯ ಕುರಿತು ಮಾತನಾಡಿ ಇಂದಿನ ಸಾಮಾಜಿಕ ಇಕ್ಕಟ್ಟು-ಬಿಕ್ಕಟ್ಟುಗಳನ್ನು ಸಾಧ್ಯಾಂತ್ಯವಾಗಿ ಈ ಕೃತಿ ಚಿತ್ರಿಸಿದೆ ಎಂದರು. ಪ್ರೊ.ಸಂಜೀವ ಎಸ್.ಲದ್ಧಿಮಟ್ಟ ಅವರು "ರಾಷ್ಷ್ರೀಯತೆ ಮತ್ತು ಮಾನವ ಪ್ರಜ್ಞೆ" ಎಂಬ ವಿಷಯದ ಕುರಿತು ಮಾತನಾಡುತ್ತ ರಾಷ್ಷ್ರೀಯತೆಯು ನಮ್ಮ ಜೀವನದ ಎಲ್ಲ ಹಂತಗಳಲ್ಲಿ ನಮ್ಮ ನಡೆ-ನುಡಿಯ ಮೂಲಕ ವ್ಯಕ್ತವಾಗಬೇಕೇ ಹೋರತು ಸಂದರ್ಭಗಳಿಗೆ ಸೀಮಿತವಾದುದಲ್ಲ. ಇದು ಕಾರ್ಯಗತಗೊಳ್ಳಲು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದರಿಂದ ನಮ್ಮ ಪರಂಪರೆಯ ಅರಿವು ಬೇಳೆಸುವುದರಿಂದ ಸಾಧ್ಯವೆಂದು ಹೇಳಿದರು. ಹಿರಿಯ ಪತ್ರಕರ್ತರಾದ ರಾಜೇಂದ್ರ ಪಾಟೀಲರು "ಸಮಕಾಲೀನ ಕಾವ್ಯದ ಸವಾಲುಗಳು" ಕುರಿತು ಮಾತನಾಡುತ್ತ ಕಾವ್ಯ ಪ್ರಕಾರದ ಆಧ್ಯತೆ ನೀಡುವ ಜೊತೆಗೆ ಕಾವ್ಯ ಅಪಹಾಸ್ಯಕ್ಕೆ ಇಡಾಗದಂತೆ ಸಮೃದ್ಧಿಗೊಳಿಸುವಂತಹ ವಿಚಾರಗಳು ಪ್ರಸ್ತುತ ಕೃತಿಯಲ್ಲಿವೆ ಎಂದು ತಿಳಿಸಿದರು. ಪತ್ರಕರ್ತರಾದ ವಿಶ್ವನಾಥ ಕುಲಕಣರ್ಿಯವರು "ಜೀವ ವೈವಿಧ್ಯತೆ ಮತ್ತು ವೈಜ್ಞಾನಿಕ ಮನೋಭಾವ" ಕುರಿತು ಮಾತನಾಡುತ್ತ ಜೀವವೈವಿಧ್ಯತೆಯನ್ನು ಕಾಪಾಡುವುದು ಇಂದಿನ ಅಗತ್ಯ ಎಂದು ಮನದಟ್ಟು ಮಾಡುವಲ್ಲಿ ಈ ಕೃತಿ ಯಶಸ್ವಿಯಾಗಿದೆ ಎಂದರು.

ಈ ಅವಲೋಕನ ಸಮಾರಂಭದಲ್ಲಿ ಡಾ.ಆನಂದ ಪಾಟೀಲ ಬಿ.ಕೆ.ಹೊಂಗಲ್, ಅನ್ನಪೂರ್ಣ ಕನೋಜ್,ಈರಣ್ಣ ಹಳ್ಳಿಕೆರಿ, ಸುಬ್ರಮಣ್ಯ ಎಮ್, ಆರ್.ಜೆ ನಾಯಕ್ ಮತ್ತು ನಿವೃತ್ತ ಪ್ರಾಚಾರ್ಯ ಹೆಬ್ಬಳ್ಳಿ ಮೊದಲಾದ ಉಪಸ್ಥಿತರಿದ್ದರು. ಅಶೋಕ ಉಳ್ಳೆಗಡ್ಡಿ ಸ್ವಾಗತಿಸಿದರು, ಪ್ರಾಚಾರ್ಯ ಅಶೋಕ ಸಿಂಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಜೀವ ಲದ್ದಿಮಟ್ಟ ವಂದಿಸಿದರು, ಶ್ರೀಮತಿ ದೀಪಾ ಮುಂಡರಗಿ ನಿರೂಪಿಸಿದರು. ಸದರಿ ಕಾಲೇಜಿನ ವಿದ್ಯಾಥರ್ಿನಿಯರು ಪ್ರಾಥರ್ಿಸಿದರು.