ಆನಂದ ಚೋಪ್ರಾ ಮೇಲಿನ ಹಲ್ಲೆ ಖಂಡಿಸಿ ಮನವಿ


ಬೆಳಗಾವಿ 31: ಜನಾನುರಾಗಿ ರಾಷ್ಟ್ರೀಯ ಬಸವದಳ, ಸೌದತ್ತಿಯ ಗೌರವಾಧ್ಯಕ್ಷ ಆನಂದ ಚೋಪ್ರರವರ ಮೇಲೆ ಮೊನ್ನೆ ತಾ. 28ರಂದು ಸೌದತ್ತಿಯಲ್ಲಿ ನಡೆದ ಮಾರಣಾಂತಿಕ ಹಲ್ಲೆಯನ್ನು ರಾಷ್ಟ್ರೀಯ ಬಸವ ದಳ ಹಾಗೂ : ಜಿಲ್ಲಾ ಲಿಂಗಾಯತ ಧರ್ಮ ಮಹಾಸಭಾ ವತಿಯಿಂದ  ತೀವ್ರವಾಗಿ ಖಂಡಿಸಿ ಈ ಪ್ರಕರಣದ ತೀವ್ರ ತನಿಖೆಗೆ ಒಳಪಡಿಸಿ, ತಪ್ಪಿತಸ್ತರನ್ನು ತಕ್ಷಣವೇ ಬಂಧಿಸಿ, ಶಿಕ್ಷಿಸಲು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.


            ಸಾಮಾಜಿಕ ಅಭಿವೃದ್ಧಿಯಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡು, ಈ ಭಾಗದ ಜನರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿದ್ದ ಸಮಾಜ ಹಿತéೈಷಿಗಳು,   ಸೇವಕರು, ಜನಪ್ರಿಯ ರಾಷ್ಟ್ರೀಯ ಬಸವದಳ, ಸೌದತ್ತಿಯ ಗೌರವಾಧ್ಯಕ್ಷ ಆನಂದ ಚೋಪ್ರರವರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯು ಅಮಾನುಷ ಮತ್ತು ಅತ್ಯಂತ ಖಂಡನೀಯವಾದುದಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.  


ಮನವಿ ಅರ್ಪಣೆ ಕಾಲಕ್ಕೆ ರಾಷ್ಟ್ರೀಯ ಬಸವದಳದ ಬೆಳಗಾವಿ ಜಿಲ್ಲಾಧ್ಯಕ್ಷ ಶರಣ ಕೆ. ಬಸವರಾಜ,  ಉಪಾಧ್ಯಕ್ಷ ಶರಣ ಅಶೋಕ ಬೆಂಡಿಗೇರಿ, ಕಾರ್ಯದಶರ್ಿ ಶರಣ ಆನಂದ ಗುಡಸ : ಜಿಲ್ಲಾ ಲಿಂಗಾಯತ ಧರ್ಮ ಮಹಾಸಭಾದ ಅಧ್ಯಕ್ಷ ಶರಣ ಮಹಾಂತೇಶ ಗುಡಸ್, ಉಪಾಧ್ಯಕ್ಷ ಶರಣ ಮಾರಯ್ಯ ಗಡಗಲಿ, ಗಣಾಚಾರ ದಳದ  ಶರಣರಾದ ಶರಣಪ್ರಸಾದ್, ವಚನ ಚಿಂತನಾ ವೇದಿಕೆಯ ಶರಣ ಮಲ್ಲಿಕಾಜರ್ುನ ಅಂಗಡಿ, ವಿಶ್ವಗುರು ಬಸವ ಜ್ಯೋತಿ ಯಾತ್ರಾ ಸಮಿತಿಯ ಶರಣ ಮಲ್ಲಿಕಾಜರ್ುನ ಸತ್ತಿಗೇರಿ ಮತ್ತು ಸದಸ್ಯ ಗಣ ಉಪಸ್ಥಿತರಿದ್ದರು.