ಜನೇವರಿಯಲ್ಲಿ ಮತದಾರರ ಅಂತಿಮ ಪಟ್ಟಿ ಪ್ರಕಟಣೆ

ಗದಗ  26 :   ಗದಗ ಜಿಲ್ಲೆಯ  4 ವಿಧಾನಸಭಾ ಕ್ಷೇತ್ರಗಳಾದ 65-ಶಿರಹಟ್ಟಿ (ಪ.ಜಾ), 66-ಗದಗ, 67-ರೋಣ ಮತ್ತು 68-ನರಗುಂದ   ಇವುಗಳ  1-1-2018 ಕ್ಕೆ ಅನ್ವಯಿಸಿದ ಕರಡು ಮತದಾರರ ಯಾದಿಗಳ  ಪರಿಷ್ಕರಣೆಗಾಗಿ     1-1-2019 ಕ್ಕೆ 18 ವರ್ಷ ಪೂರ್ಣಗೊಳಿಸುವ ಹಾಗೂ ಮತಪಟ್ಟಿಯಲ್ಲಿ ಹೆಸರು ಇರದವರಿಗೆ ಹೆಸರು ಸೇರಿಸಲು ಹಾಗೂ ಈಗಾಗಲೇ ಇರುವ ದತ್ತಾಂಶಗಳ ತಿದ್ದುಪಡಿ ಇದ್ದಲ್ಲಿ ಅವುಗಳ ಕುರಿತು ನಿಗದಿತ ನಮೂನೆಗಳಲ್ಲಿ ಅಜರ್ಿ ಸಲ್ಲಿಸಲು ನವೆಂಬರ್ 25 ರವರೆಗೆ ಅವಕಾಶ ನೀಡಲಾಗಿತ್ತು.  ಈ ಅವಧಿಯಲ್ಲಿ ಸ್ವೀಕರಿಸಲಾದ ಒಟ್ಟು 22,550 ಅಜರ್ಿಗಳ ಪೈಕಿ 21,284 ಅಜರ್ಿಗಳನ್ನು ವಿಲೇವಾರಿ ಮಾಡಲಾಗಿದೆ   ಎಂದು  ರಾಜ್ಯದ  ಕೈಗಾರಿಕಾಭಿವೃದ್ಧಿ ಆಯುಕ್ತರು ಹಾಗೂ  ಗದಗ ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕರಾದ  ದರ್ಪಣ್ ಜೈನ್ ಅವರು   ತಿಳಿಸಿದರು. 

          ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಡಿಸೆಂಬರ್ 31 ರವರೆಗೆ ಉಳಿದ ಅಜರ್ಿಗಳನ್ನು ವಿಲೇ ಮಾಡಲಾಗುತ್ತಿದೆ.  ಅಂತಿಮ ಮತದಾರರ ಪಟ್ಟಿ ಜನೆವರಿ 15 ರಂದು   ಪ್ರಕಟಿಸಲಾಗುವುದು.  ಯಾವುದೇ ಲೋಪದೋಷಗಳಿಲ್ಲದೇ ಪಾರದರ್ಶಕ ಹಾಗೂ ವ್ಯವಸ್ಥಿತ ಚುನಾವಣೆ ನಡೆಸಲು ಮತದಾರ ಪಟ್ಟಿ ಮಹತ್ವದ್ದಾಗಿದೆ.    ಆದುದರಿಂದ  ಡಿ 31 ರ ಒಳಗಾಗಿ ಇನ್ನೊಮ್ಮೆ ಮತಗಟ್ಟೆ ಅಧಿಕಾರಿಗಳ ಹಾಗೂ ಏಜೆಂಟರುಗಳ ಸಭೆಗಳನ್ನು ಜರುಗಿಸಿ ಮಾಹಿತಿಯನ್ನು ನೀಡಬೇಕು.  ಬೂತ ಮಟ್ಟದ ಅಧಿಕಾರಿಗಳ ಕಾರ್ಯವನ್ನು ತಹಶೀಲ್ದಾರರು  , ತದನಂತರ ಉಪವಿಭಾಗಾಧಿಕಾರಿ, ಅಪರ ಜಿಲ್ಲಾಧಿಕಾರಿಗಳು, ಜಿಲ್ಲಾಧಿಕಾರಿಗಳವರೆಗೆ ಪರಿಶೀಲನೆ ನಡೆಸಬೇಕು   ಎಂದು ದರ್ಪಣ ಜೈನ್ ತಿಳಿಸಿದರು. 

ಜನೇವರಿಯಲ್ಲಿ ಪ್ರಕಟಗೊಳ್ಳುವ ಆಂತಿಮ ಮತದಾರ ಪಟ್ಟಿ ದೋಷ ರಹಿತ, ಎಲ್ಲ ಅರ್ಹ ಮತದಾರರು ಒಳಗೊಂಡ ಮಾದರಿ ಮತದಾರ ಪಟ್ಟಿ ತಯಾರಿಸಲು ಹಾಗೂ   ಪರಿಷ್ಕರಣೆ ಸಂದರ್ಭದಲ್ಲಿ ಇಲ್ಲಿ ಅತೀ ಹೆಚ್ಚು ಅಥವಾ ಅತೀ ಕಡಿಮೆ ಹೆಸರುಗಳ ಸೇರ್ಪಡೆ , ತೆಗೆದುಹಾಕುವಿಕೆ ಆಗಿದೆ ಆಯಾ ಭಾಗಗಳನ್ನು ಪುನರ್ ಪರಿಶೀಲಿಸಿ ದೋಷರಹಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ.  ಮತದಾರ ಪಟ್ಟಿಯಲ್ಲಿರುವ ಎಪಿಕ್ ಸಂಖ್ಯೆ ಚೀಟಿ ಮತದಾರರಲ್ಲೂ ಇರುವಂತೆ ಕ್ರಮ ಜರುಗಿಸಲು ಸೂಚನೆ ನೀಡಲಾಗಿದೆ   ಎಂದು ನುಡಿದರು.   

        ಜಿಲ್ಲೆಯ  ಒಟ್ಟು ಮತದಾರರ ಸಂಖ್ಯೆ 8,43,907 ಇದ್ದು ಇದು ಜಿಲ್ಲೆಯ ಜನಸಂಖ್ಯೆಯ  ಶೇ. 73.47 ರಷ್ಟು ಇದೆ.   ಜಿಲ್ಲೆಯಲ್ಲಿ ಮತದಾರ ಪರಿಷ್ಕರಣೆ ಹಾಗೂ ಮತದಾರ ಪಟ್ಟಿಯಲ್ಲಿನ  ದೋಷಗಳ  ಕುರಿತಂತೆ  ಮತದಾರರಿಗಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ.  ಎಂದು ದರ್ಪಣ್ ಜೈನ್ ನುಡಿದರು.   

  ಸುದ್ದಿಗೋಷ್ಟಿಯಲ್ಲಿ  ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ,  ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ,    ಸ್ವೀಪ್ ಸಮಿತಿಯ ಸದಸ್ಯ ಕಾರ್ಯದಶರ್ಿ ಟಿ. ದಿನೇಶ, ಉಪವಿಭಾಗಾಧಿಕಾರಿ ಪಿ.ಎಸ್, ಮಂಜುನಾಥ ಉಪಸ್ಥಿತರಿದ್ದರು.