ಚಿಕ್ಕೋಡಿ, 29 : ಮಗುವಿನ ಸವಾಂರ್ಗಣ ಬೆಳವಣಿಗೆಗೆ ರಾಷ್ಟ್ರೀಯ ಶಿಕ್ಷಣ ನೀತಿ 2020 ಸಹಕಾರಿಯಾಗಿದೆ ಮಗುವು ಶಾರೀರಿಕ ಬೌದ್ಧಿಕ ಸಾಮಾಜಿಕ ಸಾಂಸ್ಕೃತಿಕ ಚಟುವಟಿಕೆಗಳ ಆಧಾರಿತ ಕಲಿಕೆ ಅವಶ್ಯವಿದೆ ಎಂದು ಚೌಸನ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಸವಿತಾ ಹೆಗಡೆ ಹೇಳಿದರು.
ಇಲ್ಲಿನ ಚೌಸನ ಶಿಕ್ಷಣ ಸಂಸ್ಥೆಯ ನರ್ಸರಿ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದ ಬುನಾದಿಯಲ್ಲಿ ಮೌಲ್ಯವರ್ಧನೆ ಆಗಬೇಕು ಇದು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಕರಿಯಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಸುರೇಂದ್ರನಾಥ್ ಟಿ ಚೌಗುಲೆ ಶಿಕ್ಷಣವು ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗಬಾರದು ಮಗುವಿನಲ್ಲಿ ನೈಜ ಕಲಿಕೆಯನ್ನು ಉಂಟು ಮಾಡುವಲ್ಲಿ ಚಟುವಟಿಕೆ ಆಧಾರಿತ ತಂತ್ರಜ್ಞಾನ ಆಧಾರಿತ ಕಲಿಕೆಗೆ ಹೆಚ್ಚು ಪ್ರಾಧಾನ್ಯ ನೀಡಬೇಕು. ಚೌಸನ್ ನರ್ಸರಿ ಶಾಲೆಯು ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದಲ್ಲದೆ ಸುಸಂಗತ ವ್ಯಕ್ತಿಗಳನ್ನು ರೂಪಿಸುವ ಮೌಲ್ಯಗಳನ್ನು ಸಹ ನೀಡುತ್ತದೆ ಎಂದರು. ಶಿಕ್ಷಣ ಎಂಬುದು ಕೇವಲ ಪಠ್ಯವಲ್ಲ ಅದು ಸಂಸ್ಕಾರ ಕಲಿಸುವ ರಾಜ ಮಾರ್ಗವಾಗಿದೆ ಎಂದು ಹೇಳಿದರು.
ಚೌಸನ್ ನರ್ಸರಿ ಶಾಲೆಯ ಮಕ್ಕಳು ಪ್ರಾರ್ಥನ ಗೀತೆ ಹಾಡಿದರು. ಡಾಕ್ಟರ್ .ಎನ್ ಎಸ್ ಶಿಂಧೆ ಸ್ವಾಗತಿಸಿ ವಾರ್ಷಿಕ ವರದಿ ವಾಚಿಸಿದರು. ಕಾರ್ಯಕ್ರಮದಲ್ಲಿ ಪ್ರೊ. ಸುಜಾತ ಚಂದಗಡೆ, ಕವಿತಾ ಹರಕೆ, ಆಸ್ಮಾ ಜಮಾದಾರ್, ಎಂ.ಎಚ್.ರಾವುತ್, ಪ್ರಶಾಂತ್ ಪತ್ತಾರ್ ಕೃಷ್ಣ ಅರಗೆ ಇತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನರ್ಸರಿ ಶಾಲೆಯ ಮಕ್ಕಳಿಂದ ಶೈಕ್ಷಣಿಕ ಅರಿವನ್ನು ಮೂಡಿಸುವ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಸಂಸ್ಕೃತಿ ಕಾರ್ಯಕ್ರಮ ಮಕ್ಕಳು ನಡೆಸಿಕೊಟ್ಟರು.
ಪ್ರಿಯಾಂಕ ಸಿಂಗಾಯಿ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಾಧ್ಯಾಪಕರಾದ ಡಾ. ಕನಕಾಚಲ ಕನಕಗಿರಿ ವಂದಿಸಿದರು.