ಕಾಗವಾಡ 15: ಬೆಳಗಾವಿ ನಗರದ ಎಸ್ಎಸ್ಎಸ್ ಸಮಿತಿಯ ಮಹಾವೀರ ಪಿ. ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ದಿ. 14 ರಂದು ವಾರ್ಷಿಕ ಸ್ನೇಹ ಸಮ್ಮೇಳನ ಸಂಪನ್ನಗೊಂಡಿತು.
ಹಿಂಡಾಲಕೊ ಜನರಲ್ ಮ್ಯಾನೆಂಜರ್ ಮಹೇಶ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡುತ್ತ ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ ಮತ್ತು ಪ್ರಾಧ್ಯಾಪಕರೇ ಸ್ಪೂರ್ತಿಯಾಗಿದ್ದಾರೆ. ತಮ್ಮಲ್ಲಿರುವ ಆತ್ಮವಿಶ್ವಾಸ, ಜ್ಞಾನ, ಆದರ್ಶ ಗುಣಮಟ್ಟದ ಮೌಲ್ಯಗಳನ್ನು ಅಳವಡಿಸಿಕೊಂಡು, ನಿಮ್ಮ ಉಜ್ವಲ ಭವಿಷ್ಯವನ್ನು ಕಟ್ಟಿಕೊಳ್ಳುಬೇಕೆಂದು ತಿಳಿಸಿದರು.
ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಆಡಳಿತ ಮಂಡಳಿಯ ಸದಸ್ಯ ಅಶೋಕ ಕುಸನಾಳೆ ಅಧ್ಯಕ್ಷತೆ ವಹಿಸಿದ್ದರಿ.
ಇದೇ ಸಂದರ್ಭದಲ್ಲಿ ಅತ್ಯುತ್ತಮ ವಿದ್ಯಾರ್ಥಿ-ವಿದ್ಯಾರ್ಥಿನಿಗಳ ಘೋಷಣೆ ಸೇರಿದಂತೆ ಮಹಾವಿದ್ಯಾಲಯದ ವಿವಿಧ ಕ್ಷೇತ್ರಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.
ಈ ವೇಳೆ ಮಹಾವಿದ್ಯಾಲಯ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಎ.ಬಿ. ಪಾಟೀಲ, ಡಾ. ಎ.ಆರ್. ರೊಟ್ಟಿ, ಪ್ರಾಂಶುಪಾಲ ಪ್ರೊ. ರವಿ ದಂಡಗಿ, ಡಾ. ಅನುರಾಧಾ ಕಂಚಿ, ಪ್ರೊ. ನಿರ್ಮಲಾ ಗಡಾದ, ಡಾ. ಭರತ ಅಲಸಂಧಿ, ಗೀರೀಶ ಮೋರೆ, ನಾಗವೇಣಿ ಧರೆಣ್ಣವರ ಪೂನಂ ಪಾಟೀಲ ಸೇರಿದಂತೆ ಮಹಾವಿದ್ಯಾಲಯದ ಬೋದಕ-ಬೋದಕೇತರ ಸಿಬ್ಬಂದಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.