ಲೋಕದರ್ಶನ ವರದಿ
ಕೆಎಲ್‌ಇ ಪದವಿ ಮಹಾವಿದ್ಯಾಲಯ ಶಿರಗುಪ್ಪಿಯ ಎನ್‌ಎಸ್‌ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರ
ಮಾಂಜರಿ, 27: ವೈದ್ಯಕೀಯ ಶಿಬಿರಗಳು ಸಮುದಾಯದಲ್ಲಿನ ಸಾಮಾನ್ಯ ಪರಿಸ್ಥಿತಿಗಳನ್ನು ತಡೆಗಟ್ಟುವಿಕೆ ಮತ್ತು ಗುಣಪಡಿಸುವ ಚಿಕಿತ್ಸೆಯನ್ನು ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತದೆ. ಮಾತ್ರವಲ್ಲದೆ ಮಾರಣಾಂತಿಕ ಕಾಯಿಲೆಗಳ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲು ಹಾಗೂ ಸಮಾಲೋಚನೆ ಮಾಡಲು ಹೆಚ್ಚು ಅನುಕೂಲವಾಗುತ್ತವೆ ಎಂದು ಚಿಕ್ಕೋಡಿ ' ಕೆಎಲ್‌ಇ ಆಸ್ಪತ್ರೆಯ ಚಿಕ್ಕ ಮಕ್ಕಳ ವೈದ್ಯರಾದ ಡಾ. ಶಂಕರ್ ತೋರಸೆ ಅಭಿಪ್ರಾಯಪಟ್ಟರು.
ಇಲ್ಲಿಯ ಸಮೀಪದ ಮೂಳವಾಡ ಗ್ರಾಮದಲ್ಲಿ ಕೆಎಲ್‌ಇ ಪದವಿ ಮಹಾವಿದ್ಯಾಲಯ ಶಿರಗುಪ್ಪಿಯ ಎನ್‌ಎಸ್‌ಎಸ್ ಘಟಕವು ವಾರ್ಷಿಕ ವಿಶೇಷ ಶಿಬಿರದ 5ನೇ ದಿನ ರಂದು ದತ್ತು ಗ್ರಾಮ ಮೋಳವಾಡ ಗ್ರಾಮದ ಮಹಾದೇವ ಗುಡಿಯ ಆವರಣದಲ್ಲಿ ಬೆಳಿಗ್ಗೆ ಹಮ್ಮಿಕೊಂಡ ಉಚಿತ ಅರೋಗ್ಯ ತಪಾಸಣಾ ಶಿಬಿರದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು
ಸಮುದಾಯಕ್ಕೆ ಕೈಗೆಟುಕುವ ಆರೋಗ್ಯ ಸೇವೆ ಮತ್ತು ಉಚಿತ ಆರೋಗ್ಯ ಸೇವೆ ಮತ್ತು ಉಚಿತ ಆರೋಗ್ಯ ಮಾಹಿತಿಯನ್ನು ತಲುಪಿಸುವುದು ಮತ್ತು ಸಾಮಾನ್ಯ ಅರೋಗ್ಯ ಸಮಸ್ಯೆಗಳನ್ನು ಗುರುತಿಸಿ ಅವುಗಳನ್ನು ಪರಿಹರಿಸುವ ಮಾರ್ಗಗಳನ್ನು ರೂಪಿಸಲು ಈ ಉಚಿತ ಅರೋಗ್ಯ ಶಿಬಿರಗಳು ಹೆಚ್ಚು ಸಹಕಾರಿಯಾಗುತ್ತವೆ ಎಂದರು.ನುರಿತ ವೈದ್ಯರುಗಳಾದ
ಡಾ. ಕೋಮಲ,ಡಾ. ಶಂಕರ ತೊರಸೆ, ಡಾ. ಸೂರಜ ಕುಂಬಾರ, ಡಾ ಹರಿಶಂಕರ, ಡಾ. ಅಶ್ವಿನಿ ಮಹಾಜನ, ಡಾ.ಸಿರಿಸ್ಮಾ, ಪ್ರೊ ಎಸ್ ಎಂ ಮಿರ್ಜೆ,ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಎಂ ಎಸ್ ಕೌಲಗುಡ್ಡ, ಸಹಶಿಬಿರಾಧಿಕಾರಿ ಪ್ರೊ ಕರಿಗಾರ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಮೋಳವಾಡ ಗ್ರಾಮದ ಸಾರ್ವಜನಿಕರು ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ವಿವಿಧ ಕಾಯಿಲೆಗೆ ಸಂಬಂಧಪಟ್ಟ ಚಿಕಿತ್ಸೆಗೆ ತಪಾಸಣೆಗೆ ಒಳಪಟ್ಟು ವೈದ್ಯರಿಂದ ಪರಿಹಾರ ಪಡೆದುಕೊಂಡರು. 156 ಜನರು ಆಯುರ್ವೇದಿಕ ಹಾಗೂ 153 ಜನರು ಹೊಮಿಯೋಪತಿಗೆ ಸಂಬಂಧಪಟ್ಟ ರೋಗಗಳ ಕುರಿತು ತಪಾಸಣೆಗೆ ಒಳಗಾದರು. ಕೆಲವು ಜನರಿಗೆ ಅನಿವಾರ್ಯವಾಗಿ ಮಾತ್ರೆಗಳನ್ನು ವಿತರಣೆ ಮಾಡುವ ಕಾರ್ಯವು ನಡೆಯಿತು.
ಪ್ರೊ. ರಾಧಿಕಾ ಯಾದವ ಅಧ್ಯಕ್ಷತೆ ವಹಿಸಿದ್ದರು. ಕು. ಶಮಶಾದ್ ನದಾಫ್ ಸ್ವಾಗತಿಸಿದರು ಕು. ಶ್ವೇತಾ ಬಾಮನೆ ಹಾಗೂ ಕು ಸುಪ್ರಿಯಾ ಚೌಗುಲೆ ನಿರೂಪಿಸಿದರು. ಕು.ಸ್ವರೂಪ ಪಾಟೊಳ ಶರಣು ಸಮರ್ಿಸಿದರು.