ರೈತರ, ಮಹಿಳೆಯರ,ಮತ್ತು ಕಾರ್ಮಿಕ ವಿರೋಧಿ ಕೇಂದ್ರೀಯ ಬಜೆಟ್ : ಅನಿಲ್
ಗದಗ 02: ಕೇಂದ್ರದಲ್ಲಿ ಆಡಳಿತಾರೂಢವಾಗಿರುವ ಸನ್ಮಾನ್ಯ ನರೇಂದ್ರ ಮೋದಿಯವರ ನೇತ್ರತ್ವದ ಸರಕಾರವು ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಮೂಲಕ ಸಂಕಲ್ಪ ಪತ್ರದ ಅನುಸಾರ ಪಕ್ಷದ ಪ್ರಣಾಳಿಕೆಯು ’ಒಂದು ರಾಷ್ಟ್ರ, ಒಂದು ಚುನಾವಣೆ’ ಮತ್ತು ಭಾರತವನ್ನು ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯ ಸ್ಥಾನಮಾನದ ಮಹತ್ವಾಕಾಂಕ್ಷೆಯ ಗುರಿ ಸೇರಿದಂತೆ ಮಹತ್ವದ ಭರವಸೆಗಳನ್ನು ನೀರೀಕ್ಷಿಸಲಾಗಿತ್ತು. ಸಮಸ್ತ ನಾಗರಿಕರ ಕಲ್ಯಾಣ ಮತ್ತು ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿ, ಬಿಜೆಪಿಯ ಪ್ರಣಾಳಿಕೆಯು ’ವಿಕಸಿತ ಭಾರತ’ (ಅಭಿವೃದ್ಧಿ ಹೊಂದಿದ ಭಾರತ) ಕ್ಕಾಗಿ ಅದರ ದೃಷ್ಟಿಕೋನವನ್ನು ರೂಪಿಸಲು ನೀರೀಕ್ಷಿಸಲಾಗಿತ್ತು. ಪ್ರಣಾಳಿಕೆಯು ಯುವಕರು, ಮಹಿಳೆಯರು, ರೈತರು, ಕಾರ್ಮಿಕರ ಮತ್ತು ಆರ್ಥಿಕವಾಗಿ ಹಿಂದುಳಿದವರು ಸೇರಿದಂತೆ ಸಮಾಜದ ವಿವಿಧ ವರ್ಗಗಳಿಗೆ ಅನುಕೂಲವಾಗುವಂತಹ ಕ್ರಮಗಳನ್ನು ಪ್ರಸ್ತಾಪಿಸಲಾಗಿತ್ತು.
ಆದರೆ ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ರವರು ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಕೇವಲ ಬೆರಳೆಣಿಕೆಯ ಶ್ರೀಮಂತರ ಪರವಾಗಿರುವ ಬಜೆಟ್ ಮಂಡನೆ ಮಾಡಿದ್ದು ಆದಾಯ ತೆರಿಗೆಯ ಮಿತಿಯನ್ನು 12 ಲಕ್ಷ ರೂಪಾಯಿಗಳಿಗೆ ನಿಗದಿಗೊಳಿಸಿ ಕೇವಲ ಶ್ರೀಮಂತರ ಮನವೋಲೈಕೆಯತ್ ಗಮನ ಹರಿಸಿದೆ. ಸಮಸ್ತ ರಾಷ್ಟ್ರವ್ಯಾಪಿ ಬಡತನದಲ್ಲಿರುವ ನಾಗರಿಕರ ಸಾಮಾಜಿಕ, ಆರ್ಥಿಕ, ಸೈಕ್ಷಣಿಕ, ಮತ್ತು ನೈತಿಕ ಶ್ರೇಯೋಭಿವೃದ್ಧಿಯನ್ನೇ ಕಡೆಗಣಿಸಿದಂತಾಗಿದೆ. ಬಡವರ ಪರವಾಗಿ ಯಾವುದೇ ಪ್ರಗತಿಪರ ಯೋಜನೆಗಳ ಪ್ರಸ್ತಾವನೆಗಳನ್ನು ಈ ಬಜೆಟ್ ನಲ್ಲಿ ಪರಿಗಣಿಸದಿರುವದು ವಿಷಾದನೀಯ ಸಂಗತಿಯಾಗಿದೆ ಎಂದು ಗದಗ ಬೆಟಗೇರಿ ಮಾಜೀ ನಗರಸಭಾ ಸದಸ್ಯರಾದ ಅನಿಲ್ ಗರಗ ಪ್ರಕಟಣೆಯ ಮೂಲಕ ಜನಸ್ಪಂದನೆಯನ್ನು ವ್ಯಕ್ತಪಡಿಸಿರುತ್ತಾರೆ.