ತಡವಲಗಾ ಸೇರಿದಂತೆ ವಿವಿಧ ಗ್ರಾಮಗಳ ಕೆರೆ ತುಂಬಿಸಲು ಮನವಿ
ಇಂಡಿ, 05: ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಕೆರೆ ಸೇರಿದಂತೆ ಇಂಡಿ ತಾಲ್ಲೂಕಿನ ಎಲ್ಲಾ ಕೆರೆಗಳನ್ನು ಶೀಘ್ರದಲ್ಲೇ ತುಂಬಿಸಬೇಕು ಎಂದು ಭಾರತೀಯ ಕಿಸಾನ್ ಸಂಘದ ಕರ್ನಾಟಕ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಗುರುನಾಥ ಬಗಲಿ ಅವರ ನೇತೃತ್ವದಲ್ಲಿ ಇಂಡಿ ತಾಲೂಕು ಉಪವಿಭಾಗಾಧಿಕಾರಿ ಅನುರಾಧ ವಸ್ರೃದ ಅವರಿಗೆ ಮನವಿ ಸಲ್ಲಿಸಲಾಯಿತು. ನಂತರ ಮಾತನಾಡಿದ ಗುರುನಾಥ ಬಗಲಿ ಅವರು ಇಂಡಿ ತಾಲ್ಲೂಕಿನ ಬೇಸಿಗೆ ರಣ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗುವ ಮುನ್ನ ಕಾಲೂವೇ ಕೊನೆಯಲ್ಲಿರುವ ಇಂಡಿ ತಾಲ್ಲೂಕಿನ ತಡವಲಗಾ ಕೆರೆಯನ್ನು ತಕ್ಷಣ ತುಂಬಿಸಬೇಕು ಹಾಗೂ ಇಂಡಿ ಹಾಗೂ ಚಡಚಣ ತಾಲ್ಲೂಕಿನ 19 ಕೆರೆಗಳಿಗೆ ತಿಡಗುಂದಿ ಬ್ರಾಂಚ್ ಕಾಲುವೆ ನೀರು ತುಂಬಿಸಬೇಕು. ಭುಯ್ಯಾರ ಏತ ನೀರಾವರಿ ಆರಂಭದಿಂದ ಪೈಪುಗಳು ಒಡೆದಿದ್ದು ಅವುಗಳನ್ನು ಬದಲಾಯಿಸಿ ಸರಿಪಡಿಸಬೇಕು.ಇಂಡಿ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಹವಾಮಾನ ವೈಪರೀತ್ಯದಿಂದ ತೋಗರಿ ಬೆಳೆ ಹಾಳಾಗಿದ್ದು ಬೀಮಾ ಫಸಲು ಯೋಜನೆ ಅಡಿಯಲ್ಲಿ ಬೆಳೆ ವಿಮೆ ಹಣವನ್ನು ಎಲ್ಲಾ ರೈತರಿಗೆ ಸಿಗಬೇಕು ಹಾಗೂ ಎಲ್ಲಾ ರೈತರಿಗೆ ಪರಿಹಾರ ನೀಡಬೇಕು. ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಬೇಕು ಎಂದು ಇಂಡಿ ಉಪವಿಭಾಗಾಧಿಕಾರಿ ಅನುರಾಧ ವಸ್ರೃದ ಅವರಿಗೆ ಮನವಿ ಸಲ್ಲಿಸಿದರು.ಈ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷರಾದ ಮಲ್ಲನಗೌಡ ಪಾಟೀಲ, ಇಂಡಿ ತಾಲೂಕು ಕಿಸಾನ್ ಸಂಘದ ಅಧ್ಯಕ್ಷರಾದ ಈರಣ್ಣ ಗೋಟ್ಯಾಳ,ಶಿವಶರಣ ನಾವಿ, ಶರಣು ತಾರಾಪೂರ,ಯಮನೂರ ಖಸ್ಕಿ, ಚನ್ನಪ್ಪ ಮಿರಗಿ, ಈರಣ್ಣ ಬಿರಾದಾರ, ಮಲ್ಲಿಕಾರ್ಜುನ ನೇಕಾರ,ಚಂದಪ್ಪ ಡೊಂಬರ, ಚಂದಪ್ಪ ಮಿರಗಿ, ಚಿದಾನಂದ ಮದರಿ, ದುಂಡಪ್ಪ ಕರಕಟ್ಟಿ, ಶಾಂತಪ್ಪ ಪೂಜಾರಿ, ಶಿವಲಿಂಗಪ್ಪ ಕಟ್ಟಿ ಸೇರಿದಂತೆ ಅನೇಕರು ರೈತರು ಉಪಸ್ಥಿತರಿದ್ದರು