ಲೋಕದರ್ಶನವರದಿ
ರಾಣೇಬೆನ್ನೂರು: ಸ್ಥಳಿಯ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅರುಣಕುಮಾರ ಪೂಜಾರ ಗೆಲುವು ನಿಶ್ಚಿತ. ಈ ಚುನಾವಣೆಯಲ್ಲಿ ಬಹಳ ಬದಲಾವಣೆ ನೋಡಿದ್ದೇವೆ. ಯಡಿಯೂರಪ್ಪ ಸಕರ್ಾರ ಸ್ಥಿರ ಹಾಗೂ ಅಭಿವೃದ್ಧಿ ಆಗುತ್ತೆ. ಯಡಿಯೂರಪ್ಪನವರ ದೊಡ್ಡ ಪ್ರಭಾವ ಇಲ್ಲಿ ಆಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಉಪಚುನಾವಣೆಯಲ್ಲಿ ಹಳೆ ಜಾಡು ಬದಲಾವಣೆಯಾಗಲಿದೆ, ಉಸಿರುಗಟ್ಟಿದ ವಾತಾವರಣದಿಂದ ಮತದಾರರು ಹೊರಬರುತ್ತಾರೆ ಎಂದರು.
ನಮ್ಮ ಅಭ್ಯಥರ್ಿ ದೊಡ್ಡ ಅಂತರ ಗೆಲುವು ಸಾಧಿಸಲಿದ್ದಾರೆ, ಚುನಾವಣೆ ಭ್ರಷ್ಟಾಚಾರ ಹುಟ್ಟು ಹಾಕಿದ್ದೇ ಕಾಂಗ್ರೆಸ್. ಚುನಾವಣಾ ನಡೆಯುವ ಮುನ್ನ ಮೈತ್ರಿ ಸಕರ್ಾರ ಬರುತ್ತೆ ಮತ ಹಾಕಿ ಅಂತಿದ್ದಾರೆ. ಕಾಂಗ್ರೇಸ್ ಮತ್ತು ಜೆಡಿಎಸ್ ಸಮಾದಾನ ತಾಳಲಿಲ್ಲ.
ಸ್ಪಷ್ಟ ಬಹುಮತ ನಮಗೆ ಸಿಗುತ್ತೆ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಕೆಮಿಸ್ಟ್ರಿ ವಕರ್್ ಆಗಲ್ಲ ಎಂದು ಬೊಮ್ಮಾಯಿ ಅಭಿಮತ ವ್ಯಕ್ತಪಡಿಸಿದರು.
ಡಾ| ಬಸವರಾಜ ಕೇಲಗಾರ, ಸಂಕಪ್ಪ ಮಾರನಾಳ,ಅನಿಲ ಮೆಣಸಿನಕಾಯಿ, ಮಾಡಾಳ ವಿರುಪಾಕ್ಷಪ್ಪ, ಸಚಿವ ಪ್ರಭು ಚೌವ್ಹಾಣ, ಡಾ.ರಮೇಶಕುಮಾರ ಸೇರಿದಂತೆ ಮತ್ತಿತರರು ಇದ್ದರು.