ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾಗಿ ಅಶೋಕ ದುಡಗುಂಟಿ

ಬೆಳಗಾವಿ, 19: ಬೆಳಗಾವಿ ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾಗಿ ಅಶೋಕ ದುಡಗುಂಟಿ ಶೀಘ್ರವೇ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 

ಬೆಳಗಾವಿಯವರೇ ಆದ ಅಶೋಕ ದುಡಗುಂಟಿ ಜಮಖಂಡಿ ಉಪವಿಭಾಗಾಧಿಕಾರಿಯಾಗಿ ಸೇವೆ ಆರಂಭಿಸಿ; ಬೆಳಗಾವಿ ಎಸ್.ಎಲ್.ಓ, ಕಲಬುರಗಿ, ಯಾದಗಿರಿಯಲ್ಲಿ ಅಪರ ಜಿಲ್ಲಾಧಿಕಾರಿ ಸೇವೆ ಸಲ್ಲಿಸಿದ್ದಾರೆ. ವಿಧಾನಸೌಧದಲ್ಲಿ ವಿವಿಧ ಇಲಾಖೆಯ ಹುದ್ದೆಗಳ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಬಾಗಲಕೋಟೆಯ ಅಪರ ಜಿಲ್ಲಾಧಿಕಾರಿಯಾಗಿ ಯಶಸ್ವಿ ಕಾರ್ಯ ನಿರ್ವಹಿಸಿರುವ ಅವರನ್ನು ಸರಕಾರ ಈಗ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾಗಿ  ನೇಮಿಸಿ ಆದೇಶ ಹೊರಡಿಸಿದೆ.